30 ಕೋಟಿ ಆಸ್ತಿ ಒಡೆಯ ಮಣಿಕಂಠ ರಾಠೋಡ ಮೇಲೆ 40 ಪೊಲೀಸ್‌ ಕೇಸ್!

By Sathish Kumar KH  |  First Published Apr 19, 2023, 11:23 PM IST

ಮಣಿಕಂಠ ಬಳಿ ಬಹುಕೋಟಿ ಬೆಲೆಬಾಳುವ 6 ಕಾರ್, ಟ್ರಕ್
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 40 ಪ್ರಕರಣ
3 ಪ್ರಕರಣಗಳಲ್ಲಿ ಮಣಿಕಂಠ ರಾಠೋಡ ದೋಷಿ ಎಂದು ತೀರ್ಪು


ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಹೈವೊಲ್ಟೇಜ್ ಕದನ ಕಣ ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಿ ಕಣದಲ್ಲಿರುವ ಮಣಿಕಂಠ ರಾಠೋಡ ಬಹುಕೋಟಿ ಆಸ್ತಿಪಾಸ್ತಿ ಒಡೆಯ. ಕೋಟಿಗಟ್ಟಲೆ ಬೆಲೆಬಾಳುವ ಅತ್ಯಾಧುನಿಕ 6 ಕಾರಿಗಳು, ಟ್ರಕ್, ಟಿಪ್ಪರ್, ಟ್ರ್ಯಾಕ್ಟರ್‌ಗಳ ಒಡೆಯರಾಗಿದ್ದಾರೆ. ಜೊತೆಗೆ ಇವರ ವಿರುದ್ಧ ಕರ್ನಾಟಕ, ಆಂಧ್ರ, ತೆಲಂಗಾಣ ಇಲ್ಲೆಲ್ಲಾ 40 ಅಪರಾಧ ಪ್ರಕರಣಗಳು ದಾಖಲಾಗಿವೆ. 

Tap to resize

Latest Videos

ಮಣಿಕಂಠನ ಪತ್ನಿ ಬೆಂಜ್‌ ಕಾರಿನ ಒಡತಿ: ಚಿತ್ತಾಪುರ ಕಣದಿಂದ ಸ್ಪರ್ಧೆ ಬಯಸಿ ಮಣಿಕಂಠ ರಾಠೋಡ ಇಂದು ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಅವರೇ ಖುದ್ದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿತ್‍ನಲ್ಲಿ ಆಸ್ತಿಪಾಸ್ತಿ, ವಾಹನಗಳು, ಅಪರಾಧ ಪ್ರಕರಣಗಳೆಲ್ಲದರ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮಣಿಕಂಠ ಕೈಯಲ್ಲಿ 6.75 ಲಕ್ಷ ರು, ಪತ್ನಿ ಬಳಿ 1.90 ಲಕ್ಷ ರು. ಇದೆ, ವಿವಿಧ ಬ್ಯಾಂಕುಗಳಲ್ಲಿ 33.64 ಲಕ್ಷ ರು., ಪತ್ನಿ ಹೆಸರಲ್ಲಿ 64 ಲಕ್ಷ ರು., ಎಲ್ಲೈಸಿಯಲ್ಲಿ ಹೂಡಿಕೆ, ವಿವಿಧ ಮಾದರಿಗಳ ಆಧುನಿಕ ಕಾರುಗಳು, ಚಿನ್ನಾಭರಣ ಬೆಳ್ಳಿ ಸೇರಿದಂತೆ ಮಣಿಕಂಠ ಬಳಿಯ ಚರಾಸ್ತಿಯ ಒಟ್ಟು ಮೊತ್ತ 11.34 ಕೋಟಿ ರು., ಇವರ ಪತ್ನಿ ಬಳಿ ಇರುವ ಚರಾಸ್ತಿ ಮೌಲ್ಯ 3.22 ಕೋಟಿ ರು. ಇಬ್ಬರು ಮಕ್ಕಳ ಹೆಸರಲ್ಲಿ ಕ್ರಮವಾಗಿ 25 ಹಾಗೂ 50 ಲಕ್ಷ ರು. ಚರಾಸ್ತಿಗಳಿವೆ.

ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಬಿ.ವಿ. ನಾಯಕ್‌ಗೆ ಮಾನ್ವಿ ಟಿಕೆಟ್- ಇಲ್ಲಿದೆ 224 ಜನರ ಪಟ್ಟಿ

ಅಕ್ಕಿ ಗಿರಣಿ ಮಾಲೀಕ ಮಣಿಕಂಠ: ಉಮ್ಮರ್ಗಾದಲ್ಲಿನ ಅಕ್ಕಿ ಗಿರಣಿ ಸೇರಿದಂತೆ ಕಲಬುರಗಿ, ಹೈದ್ರಾಬಾದ್, ಯಾದಗಿರಿ ಸೇರಿದಂತೆ ಹಲವೆಡೆ ಮಣಿಕಂಠ ಹೊಂದಿರುವ ಒಟ್ಟು ಸ್ಥಿರಾಸ್ತಿ ಮೌಲ್ಯ 17.83 ಕೋಟಿ ರುಪಾಯಿಯಾದರೆ, ಇವರ ಪತ್ನಿ ಹೆಸರಲ್ಲಿ 13.48 ಕೋಟಿ ರು. ಒಟ್ಟು ಮೌಲ್ಯಸ್ಥಿರಾಸ್ತಿ ಇದೆ. ಮಣಿಕಂಠ ರಾಠೋಡ ದಂಪತಿ ಮೇಲೆ 15.33 ಕೋಟಿ ರು. ಮೊತ್ತದ ಸಾಲದ ಹೊರೆಯೂ ಇದೆ.

40 ಪ್ರಕರಣಗಳ ವಿವರ ಇಲ್ಲಿದೆ ನೋಡಿ:  ಮಣಿಕಂಠ ರಾಠೋಡ ಮೇಲೆ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧೆಡೆ ಅಕ್ಕಿ ಕಳವಿನ 21 ಪ್ರಕರಣ ಸೇರಿದಂತೆ, ಮೋಸ, ವಂಚನೆ, ನಿಂದನೆ, ಇತರರಿಗೆ ಪ್ರಚೋದನೆ ನೀಡಿದ್ದು ಸೇರಿದಂತೆ 40 ಅಪರಾಧ ಪ್ರಕರಣಗಳು ದಾಖಲಾಗಿವೆ. ಇವರ ಮೇಲೆ ದಾಖಲಾಗಿದ್ದ ಪ್ರಕರಣಗಳಲ್ಲಿ 2015ರಲ್ಲಿ ಯಾದಗಿರಿ ಹಾಗೂ ಮಾನ್ವಿ ಠಾಣೆಗಳಲ್ಲಿ ದಾಖಲಾಗಿದ್ದ ಮಕ್ಕಳ ಹಾಲಿನ ಪುಡಿ ಕಾಳಸಂತೆ ಹಾಗೂ ಸರ್ಕಾರಿ ಅಧಿಕಾರಿಗೆ ತಪ್ಪು ಮಾಹಿತಿ ನೀಡಿದ ಆರೋಪಗಳ ಪ್ರಕರಣಗಳು ಇವೆ.

2023ರ ಯಾದಗಿರಿಯ ಗುರುಮಠಕಲ್‍ನಲ್ಲಿ ದಾಖಲಾಗಿರುವ ಅಜಾಗರುಕತೆಯಿಂದ ವಾಹನ ಚಲಾಯಿಸಿ ಇತರರ ಜೀವಕ್ಕೆ ಅಪಾಯ ತಂದೊಡ್ಡಿ ಆರೋಪದ ಮೇಲೆ ದಾಖಲಾಗಿದ್ದ 3 ಪ್ರಕರಣಗಳಲ್ಲಿ ಮಣಿಕಂಠ ದೋಷಿಯಾಗಿದ್ದು ನ್ಯಾಯಾಲಯ ದಂಡ ವಿಧಿಸಿದೆ. ಮಕ್ಕಳ ಹಾಲಿನ ಪುಡಿ ಕಾಳಸಂತೆ ಪ್ರಕರಣದಲ್ಲಿ 1 ವರ್ಷದ ಶಿಕ್ಷೆ, 10 ಸಾವಿರ ರುಪಾಯಿ ದಂಡದ ಶಿಕ್ಷೆಗೂ ಮಣಿಕಂಠ ಗುರಿಯಾಗಿದ್ದಾರೆ. ಇವೆಲ್ಲ ಅಪರಾಧ ಪ್ರಕರಣಗಳ ಬಗ್ಗೆ ಮಇಕಂಠ ತಾವು ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಹೊಸ ಅಭ್ಯರ್ಥಿಗೆ ಬಿಜೆಪಿ ಮಣೆ: ಪಾಲಿಕೆ ಸದಸ್ಯ ಚೆನ್ನಬಸಪ್ಪಗೆ ಟಿಕೆಟ್‌

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!