2028 ನನ್ನ ಕೊನೇ ಅಸೆಂಬ್ಲಿ ಚುನಾ​ವ​ಣೆ: ಎಚ್‌​ಡಿ​ ಕುಮಾರಸ್ವಾಮಿ

Published : Mar 01, 2023, 02:19 AM IST
2028 ನನ್ನ ಕೊನೇ ಅಸೆಂಬ್ಲಿ ಚುನಾ​ವ​ಣೆ: ಎಚ್‌​ಡಿ​ ಕುಮಾರಸ್ವಾಮಿ

ಸಾರಾಂಶ

ಮುಂಬ​ರುವ 2028ರ ಚುನಾ​ವಣೆ ನನ್ನ ಕೊನೇ ವಿಧಾ​ನ​ಸಭಾ ಚುನಾ​ವ​ಣೆ. ಆ ನಂತರ ಬೇರೆ ಚುನಾ​ವ​ಣೆ​ಗ​ಳಿಗೆ ಸ್ಪರ್ಧಿ​ಸು​ವು​ದಾಗಿ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಹೇಳಿ​ದ್ದಾ​ರೆ.

ಕ್ಕಮಗಳೂರು (ಮಾ.1) : ಮುಂಬ​ರುವ 2028ರ ಚುನಾ​ವಣೆ ನನ್ನ ಕೊನೇ ವಿಧಾ​ನ​ಸಭಾ ಚುನಾ​ವ​ಣೆ. ಆ ನಂತರ ಬೇರೆ ಚುನಾ​ವ​ಣೆ​ಗ​ಳಿಗೆ ಸ್ಪರ್ಧಿ​ಸು​ವು​ದಾಗಿ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ(HD Kumaraswmy) ಹೇಳಿ​ದ್ದಾ​ರೆ.

ಕಡೂರು ತಾಲೂಕಿನ ದೇವನೂರಿನಿಂದ ಹೊರಡುವ ಸಂದರ್ಭದಲ್ಲಿ ಮಂಗ​ಳ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, 2028ರ ಬಳಿಕ ನಾನು ಸಕ್ರಿಯ ರಾಜ​ಕಾ​ರ​ಣ​ದ​ಲ್ಲಿ​ರಲ್ಲ ಎಂದು ಹೇಳಿಲ್ಲ. ಆ ಬಳಿ​ಕವೂ ನಾನು ಸಕ್ರಿ​ಯ ರಾಜ​ಕೀ​ಯ​ದಲ್ಲೇ ಇರು​ತ್ತೇನೆ. ಆದರೆ, ವಿಧಾ​ನ​ಸಭಾ ಚುನಾ​ವ​ಣೆ(Assembly election)ಗೆ ಸ್ಪರ್ಧಿ​ಸಲ್ಲ. ಅದರ ಬದಲು ಬೇರೆ ಚುನಾ​ವ​ಣೆ​ಗ​ಳಿಗೆ ಸ್ಪರ್ಧೆ ಮಾಡು​ತ್ತೇನೆ ಎಂದು ಸ್ಪಷ್ಟ​ಪ​ಡಿ​ಸಿ​ದ​ರು.

ಜೆಡಿಎಸ್‌ ಹಳ್ಳ ಹಿಡಿಯಲು ಇಬ್ರಾಹಿಂ ಹೇಳಿಕೆಗಳೇ ಸಾಕು: ಅಶ್ವತ್ಥನಾರಾಯಣ ವ್ಯಂಗ್ಯ

ಇದೇ ವೇಳೆ ಜನರ ತೆರಿಗೆ ಹಣ ಲೂಟಿ ಮಾಡಿ ವಿದ್ಯಾಸಂಸ್ಥೆ ಕಟ್ಟಿಜೀವನ ಮಾಡುವ ಅವಶ್ಯಕತೆ ನಮಗಿಲ್ಲ ಎಂದ ಅವರು, ಜನರ ಕಷ್ಟನೋಡಿ ಅದನ್ನು ನಿವಾರಣೆ ಮಾಡಲು ಪಂಚರತ್ನ ಯೋಜನೆಯನ್ನು ಘೋಷಿಸಿ ಹೋರಾಟ ಮಾಡುತ್ತಿದ್ದೇನೆ. ನಾವು ಇನ್ನೆಷ್ಟುವರ್ಷ ಬದುಕುತ್ತೇವೆ, ಇನ್ನೊಂದು ಚುನಾ​ವಣೆ ಮಾಡಬಹುದು ಅಷ್ಟೆಎಂದ​ರು.

ಎಲೆಕ್ಷನ್‌ ಬಳಿಕ ಬಿಎಸ್‌ವೈ ಏನಾಗ್ತಾರೆ?: ವಯಸ್ಸಿನ ಕಾರಣ ನೀಡಿ ಬಿ.ಎಸ್‌.ಯಡಿಯೂರಪ್ಪರನ್ನು ನಿವೃತ್ತಿಗೊಳಿಸಿದ ಬಿಜೆಪಿ, ಇದೀಗ ಒಂದು ಸಮಾಜದ ಮತ ಪಡೆಯಲು ಅವರನ್ನು ಮುಂದೆ ಬಿಡುತ್ತಿದ್ದಾರೆ. ಮೈತ್ರಿ ಸರ್ಕಾರದ ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಹೇಗೋ ಇನ್ನೂ 2 ವರ್ಷ ಸರ್ಕಾರ ನಡೆಸುತ್ತಿದ್ದರು. ಆಗ ಅವರನ್ನು ಮೂಲೆ ಗುಂಪು ಮಾಡಿ ಇದೀಗ ಚುನಾವಣೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಅವರನ್ನು ಎಲ್ಲದಕ್ಕೂ ನೀವೇ ಎನ್ನುತ್ತಿದ್ದಾರೆ. ಚುನಾವಣೆ ಬಳಿಕ ಯಡಿಯೂರಪ್ಪ ಅವರನ್ನು ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ಬಿಜೆಪಿ ಕಟ್ಟಿಬೆಳೆಸಿದ ಎಲ್‌.ಕೆ.ಅಡ್ವಾಣಿ(LK Advani), ಮುರಳಿ ಮನೋಹರ ಜೋಷಿ(Muruli manohar joshi) ಅಂಥವರಿಗೆ ವಯಸ್ಸಿನ ನೆಪ ಹೇಳಿ ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂದು ಇದೇ ವೇಳೆ ಆರೋಪಿಸಿದರು.

ಪಂಪನ ಕನಸಿನಂತೆ ಬನವಾಸಿ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಎಚ್‌ಡಿಕೆಗೆ ನಿವೃತ್ತಿ ವಯಸ್ಸಾಗಿಲ್ಲ-ಸಿಎಂ

ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಇದೇ ತಮ್ಮ ಕೊನೇ ಚುನಾವಣೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ಸಂದರ್ಭದಲ್ಲಿ ಹೇಳಿದ್ದಾರೆಂಬುದು ಗೊತ್ತಿಲ್ಲ. ಅವರದ್ದು ನಿವೃತ್ತಿಯಾಗುವ ವಯಸ್ಸಲ್ಲ. ಬಹಳ ಸೇವೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲ ರೀತಿಯ ಮಾತು ಬರುತ್ತವೆ. ಪ್ರತಿ ಚುನಾವಣೆಗೂ ಜನರ ಪ್ರಬುದ್ಧತೆ ಹೆಚ್ಚಾಗಿದೆ. ನಾವು ಮಾತನಾಡುವಾಗ ಅದರ ಹಿಂದಿನ ಚಿಂತನೆ, ಕಲ್ಪನೆ ಜನರಿಗೆ ತಿಳಿಯುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ