ಜೆಡಿಎಸ್‌ ಹಳ್ಳ ಹಿಡಿಯಲು ಇಬ್ರಾಹಿಂ ಹೇಳಿಕೆಗಳೇ ಸಾಕು: ಅಶ್ವತ್ಥನಾರಾಯಣ ವ್ಯಂಗ್ಯ

Published : Mar 01, 2023, 01:01 AM IST
ಜೆಡಿಎಸ್‌ ಹಳ್ಳ ಹಿಡಿಯಲು ಇಬ್ರಾಹಿಂ ಹೇಳಿಕೆಗಳೇ ಸಾಕು: ಅಶ್ವತ್ಥನಾರಾಯಣ ವ್ಯಂಗ್ಯ

ಸಾರಾಂಶ

ಮನರಂಜನೆಗಾಗಿ ನೀಡುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಜೆಡಿಎಸ್‌ ಹಳ್ಳ ಹಿಡಿಯಲು ಆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆಡುವ ಮಾತುಗಳೇ ಸಾಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.

ಮದ್ದೂರು (ಮಾ.1) : ಮನರಂಜನೆಗಾಗಿ ನೀಡುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಜೆಡಿಎಸ್‌ ಹಳ್ಳ ಹಿಡಿಯಲು ಆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆಡುವ ಮಾತುಗಳೇ ಸಾಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ಥನವಿಲ್ಲ. ಹಾಗಾಗಿ ಪದೇ ಪದೇ ಕೇಂದ್ರ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಇಬ್ರಾಹಿಂ ಹೇಳಿಕೆ ವಿರುದ್ಧ ಸಚಿವರು ಕಿಡಿಕಾರಿದರು.

Govt employees indefinite strike: ಇಂದಿನಿಂದ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಮುಷ್ಕರ...

ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಅಮಿತ್‌ ಶಾ(Amit shah) ಅವರಿಗೆ ಕರ್ನಾಟಕದ ಮೇಲೆ ಅಪಾರ ಅಭಿಮಾನವಿದೆ. ಆರ್ಟಿಕಲ್‌ 370 ಅನ್ನು ವಜಾ ಮಾಡಿ ಹೇಗೆ ಕೆಲಸ ಮಾಡಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಪಾಪ ಇಬ್ರಾಹಿಂ(CM ibrahim) ಅವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದು ಲೇವಡಿ ಮಾಡಿದರು.

ಇಬ್ರಾಹಿಂ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರ ಹೇಳಿಕೆಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿವೆ. ಜೆಡಿಎಸ್‌ ಪಕ್ಷಕ್ಕೆ ಈ ಹೇಳಿಕೆಗಳೇ ಮುಳುವಾಗಲಿವೆ ಎಂದು ಟೀಕಿಸಿದರು.

ಟಿಪ್ಪು ವಿರೋಧಿ ಹೇಳಿಕೆ ಕೊಟ್ರೆ ಕಾನೂನು ರೀತಿ ಕ್ರಮ ಕೈ ಗೊಳ್ಳುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇಂತಹ ಹೇಳಿಕೆ ಕೊಟ್ರೆ ಅಡ್ರಸ್‌ ಇಲ್ಲದಂತೆ ಕರ್ನಾಟಕದ ಜನರು ಮಾಡುತ್ತಾರೆ. ಇನ್ನೊಮ್ಮೆ ಯಾರಾದ್ರು ಟಿಪ್ಪು ಸುಲ್ತಾನ್‌(Tippu sulthan) ಪರ ಹೇಳಿಕೆ ಕೊಟ್ರೆ, ಕೊಡೊ ಧೈರ್ಯ ಮಾಡಿದರೆ ಅಡ್ರೆಸ್‌ಗೆ ಇರದಂತೆ ಮಾಡುತ್ತಾರೆ ಎಂದು ಎಚ್ಚರಿಸಿದರು.

ರಾಜ್ಯಕ್ಕೆ ಟಿಪ್ಪು ಬೇಕಾ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರ್‌(Nalvadi Krishnaraja Wodeyar) ಬೇಕಾ ಎಂದು ಜನ ಚುನಾವಣೆಯಲ್ಲಿ ಸ್ಪಷ್ಟವಾದ ತೀರ್ಪು ನೀಡುತ್ತಾರೆ. ಕರ್ನಾಟಕದಲ್ಲಿ ಟಿಪ್ಪು ಯುನಿವರ್‌ ಸಿಟಿ ಸಾಧ್ಯವಿಲ್ಲ. ಟಿಪ್ಪು ಮಾಡಿದ ನರಹಂತಕ ಕೆಲಸಗಳು, ಮತಾಂಧತೆ, ದೇವಾಸ್ಥಾನಗಳನ್ನು ಮಸೀದಿಯನ್ನಾಗಿ ಮಾಡಿರುವುದನ್ನು ಜನರ ಎಂದಿಗೂ ಮರೆಯಲ್ಲ ಎಂದರು.

Karnataka election 2023: ನನ್ನ ಕೊನೆಯ ಚುನಾವಣೆ ಚನ್ನಪಟ್ಟಣದಿಂದ : ಎಚ್ಡಿಕೆ

ಚನ್ನಪಟ್ಟಣ(Channapattana)ದಿಂದ ನನ್ನ ಕೊನೆ ಚುನಾವಣೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಭಾವುಕ ಮಾತುಗಳಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ನಾವೆಲ್ಲ ರಾಜಕೀಯಕ್ಕೆ ಬಂದಿರುವುದು ಜನರಿಗೋಸ್ಕರ. ನಮ್ಮನ್ನು ಕೈ ಹಿಡಿಯುವುದು, ಬಿಡುವುದನ್ನು ಜನ ತೀರ್ಮಾನಿಸುತ್ತಾರೆ. ಅಧಿಕಾರ ಕೊಟ್ಟಸಂದರ್ಭದಲ್ಲಿ ಏನಾಯ್ತು ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ರಾಜ್ಯದ ಜನತೆ ಇಂತಹ ಭಾವನಾತ್ಮಕ ಹೇಳಿಕೆಗಳನ್ನು ಪದೇ ಪದೇ ಕೇಳಿ ಜನರು ಬೇಸತ್ತಿದ್ದಾರೆ. ಇದರಲ್ಲಿ ಹೊಸತನ ಎಂಬುದು ಇಲ್ಲ ಎಂದು ಲೇವಡಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?