ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿಗಳಾಗಿರುವ ಇಬ್ಬರು ಮುಸ್ಲಿಂ ಮಹಿಳೆಯರು ಮುಂದಿನ ಸ್ಥಳೀಯ ಚುನಾವಣೆಗೆ ಸ್ಪರ್ಧಿಸೋಕೆ ರೆಡಿಯಾಗಿದ್ದಾರೆ. ತ್ರಿಪಲ್ ತಲಾಖ್ ನಿಷೇಧಿಸಿದ ಪ್ರಧಾನಿ ಮೋದಿಯಂಥಹ ನಾಯಕ ಮತ್ತೊಬ್ಬರಿಲ್ಲ ಎಂಬುದು ಇವರ ಅಭಿಪ್ರಾಯ
ಮೋದಿಯ ಭಾರೀ ಅಭಿಮಾನಿಗಳಾಗಿರುವ ಇಬ್ಬರು ಮುಸ್ಲಿಂ ಮಹಿಳೆಯರು ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದೀಗ ಇಬ್ಬರು ಸ್ಪರ್ಧಿಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ಬಿಜೆಪಿ ತನ್ನ ಇಬ್ಬರು ಸ್ಪರ್ಧಿಗಳಾಗಿ ಮುಸ್ಲಿಂ ಮಹಿಳೆಯರನ್ನು ಆಯ್ಕೆ ಮಾಡಿದೆ. ಮಲಪ್ಪುರಂ ಕೇರಳದ ಏಕೈಕ ಮುಸ್ಲಿಂ ಮೆಜಾರಿಟಿ ಇರುವ ಜಿಲ್ಲೆ ಎಂಬುದು ವಿಶೇಷ.
ಕೋವಿಡ್ ವಾರಿಯರ್ಸ್ ಮಕ್ಕಳಿಗೆ 5 MBBS ಸೀಟ್ ಮೀಸಲು; ಕೇಂದ್ರದ ಮಹತ್ವದ ನಿರ್ಧಾರ!
ಮಲಪ್ಪುರಂನ ವಂಡೂರ್‌ನಿಂದ ಟಿಪಿ ಸಲ್ಫತ್ ಹಾಗೂ ಚೆಮ್ಮಾಡ್‌ನಿಂದ ಆಯಿಷಾ ಹುಸೈನ್ ಮಲಪ್ಪುರಂ ಜಿಲ್ಲೆಯಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮುಸ್ಲಿಂ ಮಹಿಳೆಯರು.
ವಂಡೂರ್ ಗ್ರಾಮ ಪಂಚಾಯತ್‌ನಿಂದ ಆರನೇ ವಾರ್ಡ್‌ನಿಂದ ಸಲ್ಫತ್ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ಆಯಿಷಾ ಪುನ್‌ಮುಂಡಂ ಗ್ರಾಮ ಪಂಚಾಯತ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನ ಸರ್ವನಾಶದ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರನ್ನು ಆರಿಸುವ ಬಗ್ಗೆ ಮಲಪ್ಪುರಂನ ಬಿಜೆಪಿ ಲವಲವಿಕೆಯಿಂದ ಕೆಲಸ ಮಾಡಿತ್ತು. ಸಲ್ಫಾತ್ ಅವರಿಗೆ ಜಿಲ್ಲಾ ಪಂಚಾಯತ್ ವಿಭಾಗವನ್ನು ನೀಡಲಾಗಿದ್ದರೂ, ಅವರು ತಳಮಟ್ಟದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರಿಂದ ಆಕೆ ತಮ್ಮದೇ ಗ್ರಾಮ ಪಂಚಾಯಿತಿ ಆರಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾಗಿರುವ ಶ್ರೀಮತಿ ಸುಲ್ಫಾತ್, ಬಿಜೆಪಿಯ ಪ್ರಗತಿಪರ ನಿಲುವುಗಳು ಅವರನ್ನು ಆ ಪಕ್ಷದತ್ತ ಆಕರ್ಷಿಸಿವೆ ಎಂದು ಹೇಳಿದ್ದಾರೆ "ಟ್ರಿಪಲ್ ತಲಾಖ್ ಅನ್ನು ನಿಷೇಧಿಸುವುದು ಮತ್ತು ಮಹಿಳೆಯರಿಗೆ ಮದುವೆಯಾಗುವ ವಯಸ್ಸನ್ನು ಹೆಚ್ಚಿಸುವಂತಹ ಪ್ರಗತಿಪರ ಕ್ರಮಗಳನ್ನು ಬೇರೆ ಯಾರು ಕಾರ್ಯಗತಗೊಳಿಸಬಹುದು? ಮೋದಿಜಿಯನ್ನು ವರ್ಚಸ್ಸಿನಲ್ಲಿ ಮಾತ್ರವಲ್ಲದೆ ದಕ್ಷತೆ ಮತ್ತು ದೃಢ ನಿಶ್ಚಯದಲ್ಲೂ ಸರಿ ಹೊಂದುವವರು ಪ್ರಸ್ತುತ ಭಾರತೀಯ ರಾಜಕೀಯದಲ್ಲಿ ಯಾರೂ ಇಲ್ಲ ಎಂದು ಅವರು ತಿಳಿಸಿದ್ದಾರೆ.