
ಬೆಂಗಳೂರು(ಮಾ.19): ಮೂಲಗಳ ಪ್ರಕಾರ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಬಿಡುಗಡೆಯಾಗುವ ಕ್ಷೇತ್ರಗಳ ಸಂಖ್ಯೆಯನ್ನು ಕೂಡಿದರೆ ದೊರೆಯುವ ಅಂತಿಮ ಸಂಖ್ಯೆ 3,6 ಅಥವಾ 9 ಇರಬೇಕು. ಹೀಗಾದಲ್ಲಿ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಉತ್ತಮ ಫಲಾತಂಶ ಪಡೆಯುತ್ತದೆ ಎಂಬ ಭಾವನೆ ಪಕ್ಷದ ನಾಯಕರಲ್ಲಿ ಇದೆಯಂತೆ. ಹೀಗಾಗಿ ಪಟ್ಟಿಯೂ ಇದೇ ಮಾದರಿಯಲ್ಲಿ ಇರುವ ಸಾಧ್ಯತೆ ಹೆಚ್ಚಿದೆ ಎನ್ನುತ್ತವೆ ಮೂಲಗಳು.
ಈ ಮೂಲಗಳ ಪ್ರಕಾರ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ 126 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹಿರಂಗವಾಗಲಿದೆ. ಏಕೆಂದರೆ, 1+2+6= 9 ಆಗುತ್ತದೆ. ಇದು ಶುಭ ಸಂಖ್ಯೆ. ಪರಿಣಾಮ ಸಿಇಸಿಯಲ್ಲಿ 130 ಕ್ಷೇತ್ರಗಳು ಅಂತಿಮಗೊಂಡಿದ್ದರೂ ಈ ಶುಭ ಸಂಖ್ಯೆಗೆ ಆಧರಿಸಿ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಅಷ್ಟೇ ಅಲ್ಲ, ಈ ಪಟ್ಟಿಯು ಯುಗಾದಿ ಹಬ್ಬದ ದಿನವೇ (ಮಾ. 22)ರಂದೇ ಪ್ರಕಟಗೊಳ್ಳುತ್ತಿರುವುದರ ಹಿಂದೆಯೂ ಶುಭದಿನದ ಲೆಕ್ಕಾಚಾರವಿದೆಯಂತೆ.
ವರುಣದಿಂದಲೇ ಸಿದ್ದು ಸ್ಪರ್ಧೆ: ಯಡಿಯೂರಪ್ಪ
ವಾಸ್ತವವಾಗಿ ಮೊದಲ ಪಟ್ಟಿಯನ್ನು ಸಿಇಸಿ ಅಂತಿಮಗೊಳಿಸಿದ ನಂತರ ಮಾ. 20ರ ನಂತರ ಬಿಡುಗಡೆ ಮಾಡುವ ಲೆಕ್ಕಾಚಾರವಿತ್ತಂತೆ. ಏಕೆಂದರೆ, ಪಟ್ಟಿಮೊದಲೇ ಬಿಡುಗಡೆಯಾಗಿ ಬಂಡಾಯ ಉಂಟಾದರೆ ರಾಹುಲ್ ಗಾಂಧಿ ಅವರಿಗೆ ಇರುಸು-ಮುರುಸಾಗಬಾರದು ಎಂದು ರಾಹುಲ್ ಗಾಂಧಿ ಬಂದು ಹೋದ ನಂತರ ಅಂತರೆ ಮಾ. 20 ರ ರಾತ್ರಿ ಪ್ರಕಟಿಸುವ ಇರಾದೆ ಇತ್ತಂತೆ.
ಆದರೆ, ಶುಭ ದಿನದ ಲೆಕ್ಕಾಚಾರದಲ್ಲಿ ಈ ಪಟ್ಟಿಬಿಡುಗಡೆ ಮಾ. 22ಕ್ಕೆ ಯುಗಾದಿ ದಿನದಂತೆ ನಿಗದಿ ಪಡಿಸಲಾಗಿದೆ ಎನ್ನುತ್ತವೆ ಮೂಲಗಳು. ಅಂದಹಾಗೇ ಸದ್ಯಕ್ಕೆ ಇದು ಗಾಳಿ ಸುದ್ದಿ. ಮುಂದೆ ನಿಜವಾದರೇ ಅದಕ್ಕೆ ನಾವು ಜವಬ್ದಾರರಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.