ಸಿಎಂ ಬೊಮ್ಮಾಯಿ ಮತ್ತು ಕೃಷಿ ಸಚಿವರ ಜಿಲ್ಲೆಯಲ್ಲೇ 112ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಉಳಿದ ಜಿಲ್ಲೆಗಳ ಸ್ಥಿತಿ ಹೇಗಿರಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಹಾವೇರಿ (ಅ.22) : ಸಿಎಂ ಬೊಮ್ಮಾಯಿ ಮತ್ತು ಕೃಷಿ ಸಚಿವರ ಜಿಲ್ಲೆಯಲ್ಲೇ 112ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಉಳಿದ ಜಿಲ್ಲೆಗಳ ಸ್ಥಿತಿ ಹೇಗಿರಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈ ಸರ್ಕಾರದಿಂದ ರೈತರ ಉದ್ಧಾರ ಎಷ್ಟಾಗಿದೆ ಎಂಬುದಕ್ಕೆ ಈ ಆತ್ಮಹತ್ಯೆಗಳೇ ಸಾಕ್ಷಿ ಎಂದಿರುವ ಅವರು, ರಾಜ್ಯದ ಉಳಿದ ಜಿಲ್ಲೆಗಳ ಅಂಕಿ ಅಂಶ ತೆಗೆದರೆ ಬೊಮ್ಮಾಯಿ ಸರ್ಕಾರವೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಹಾವೇರಿಯಲ್ಲಿ ಕಳೆದ 10 ತಿಂಗಳಲ್ಲಿ ಬೆಳೆಹಾನಿ ಹಾಗೂ ಸಾಲಬಾಧೆಗೆ 112 ರೈತರು ಆತ್ಮಹತ್ಯೆಗೆ ಶರಣಾಗಿರುವುದು ಗಂಭೀರವಾದ ವಿಷಯ ಎಂದಿರುವ ಅವರು ಈ ಸರ್ಕಾರದಲ್ಲಿ ರೈತರ ಜೀವನ ತುಂಬಾ ಕಷ್ಟಕರವಾಗಿದೆ. ಸಿಎಂ, ಕೃಷಿ ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿನ ರೈತರನ್ನೇ ಉದ್ಧಾರ ಮಾಡಲಾಗದವರು. ಈ ರಾಜ್ಯದ ಜನರನ್ನು ಉದ್ಧಾರ ಮಾಡುತ್ತಾರಾ? ಬಿಜೆಪಿ ಸರ್ಕಾರ ಬಂದ ಬಳಿಕ ರೈತರ ಬದುಕು ಅಸಹನೀಯವಾಗಿದೆ. ಹೀಗಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ವಿರುದ್ದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ
1
ಹಾವೇರಿಯಲ್ಲಿ ಕಳೆದ 10 ತಿಂಗಳಲ್ಲಿ ಬೆಳೆಹಾನಿ ಹಾಗೂ ಸಾಲಬಾಧೆಗೆ 112 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸರ್ಕಾರದಿಂದ ರೈತರ ಉದ್ಧಾರ ಎಷ್ಟಾಗಿದೆ ಎಂಬುದಕ್ಕೆ ಈ ಆತ್ಮಹತ್ಯೆಗಳೇ ಸಾಕ್ಷಿ.
ಇದು ಕೇವಲ ಒಂದು ಜಿಲ್ಲೆಯ ದುರಂತ ಕಥೆ.
ಇನ್ನುಳಿದ ಜಿಲ್ಲೆಗಳ ಅಂಕಿ ಅಂಶ ತೆಗೆದರೆ ಬೊಮ್ಮಾಯಿ ಸರ್ಕಾರವೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ pic.twitter.com/BDUG6FIWGY