
ಮಂಗಳೂರು (ಆ.25): ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಜೆಪಿ ನಾಯಕ ಅರುಣ್ ಪುತ್ತಿಲ ಅವರದ್ದೆನ್ನಲಾದ ರಾಜಕೀಯ ಸಂಬಂಧಿತ ಸಂಭಾಷಣೆಯ ಆಡಿಯೋವೊಮದು ಭಾರಿ ಸಂಚಲನ ಉಂಟು ಮಾಡಿದೆ. ಅದರಲ್ಲಿ ಮಹಿಳೆಯೊಂದಿಗೆ ಬಿಜೆಪಿ ಸೇರ್ಪಡೆ ಮತ್ತು ರಾಜಕೀಯದ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿರುವುದು ವೈರಲ್ ಆಗುತ್ತಿದೆ.
ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಅಭ್ಯರ್ಥಿಯಾಗಿ ಅರುಣ್ ಪುತ್ತಿಲ ಭಾರಿ ಸದ್ದು ಮಾಡಿದ್ದರು. ಆದರೆ, ಈಗ ಬಿಜೆಪಿ ನಾಯಕಿಯೊಬ್ಬರ ಬಳಿ ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ. ನೀವು ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಎಂದು ಮಹಿಳೆ ಕೇಳಿದ್ದಾಳೆ. ಆದರೆ, ಇದಕ್ಕೆ ಉತ್ತರಿಸಿದ ಅರುಣ್ ಪುತ್ತಿಲ ಅವರದ್ದೆನ್ನಲಾದ ಧ್ವನೊ ಹೋಲುವ ವ್ಯಕ್ತಿ 'ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ' ಎಂದು ಹೇಳಿದ್ದಾರೆ.
ರೌಡಿ ವಿಲ್ಸನ್ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್ ಸಿಗರೇಟ್ ಸೇದುವ ಫೋಟೋ ವೈರಲ್!
ಇದಕ್ಕೆ ಪ್ರತಿಕ್ರಿಯೆ ನೀಡಿದ ಅರುಣ್ ಕುಮಾರ್ ಪುತ್ತಿಲ ಅವರ ಧ್ವನಿ ಹೋಲುವ ವ್ಯಕ್ತಿ, ನಾಚಿಕೆ, ಹೇಸಿಗೆಯನ್ನೆಲ್ಲಾ ಬಿಟ್ಟವರೇ ಪೊಲಿಟೀಶಿಯನ್ ಎನಿಸಿಕೊಳ್ಳುತ್ತಾರೆ. ಮಾನ ಮರ್ಯಾದೆ ಎರಡು ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾಧ್ಯವಿಲ್ಲ. ಅದನ್ನು ಬಿಟ್ಟು ಪರಿವಾರದ ಜನ ದೊಡ್ಡವರಾಗಿದ್ದಾರೆ. ಇನ್ನು ಪರಿವಾರದ ಜನ 3.5 ಕೋಟಿ ರೂ. ಹಣ ಪಡೆದಿದ್ದಾರೆ ಅನ್ನೊ ಬಗ್ಗೆಯೂ ಮಾತನಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಮಹಿಳೆ 'ಸೌಶಯಾತ್ಮಾವೀ ಇನಶ್ಯತೀ' ಎಂಬ ಸಂಸ್ಕೃತ ಶ್ಲೋಕ ಹೇಳಿದ್ದಾಳೆ. ಅಂದರೆ, ಸಂಶಯ ಪಟ್ಟವನು ನಾಶವಾಗುತ್ತಾನೆ. ನೀವು ನಾಶ ಆದ್ರಿ ಎಂದು ಮಹಿಳೆ ಮಾತನಾಡಿದ್ದಾಳೆ.
ಮಲತಂದೆಯಿಂದ ಇಬ್ಬರು ಹೆಣ್ಣುಮಕ್ಕಳ ಭೀಕರ ಕೊಲೆ!
ಇನ್ನು ಅರುಣ್ ಪುತ್ತಿಲ ಅವರ ಹಣ ತೆಗೆದುಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಆಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಇನ್ನು ಬಿಜೆಪಿ ನಾಯಕಿ ನೀವು ಬೆಂಗಳೂರಿನಲ್ಲಿ ಒಂಟಿಯಾಗಿ ಸಿಕ್ಕಾಗ ಹೆಚ್ಚಿನ ವಿಚಾರವನ್ನು ಮಾತನಾಡುವುದಾಗಿ ಹೇಳಿದ್ದಾರೆ. ಈಗ ಆಡಿಯೋ ರೆಕಾರ್ಡ್ ಮಾಡಿ ನಿಮಗೆ ಇವತ್ತು ಕಡ್ಡಿ ಇಟ್ಟಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.