* ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನಿಶಾ ದಹಿಯಾ
* ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎನ್ನುವ ಸುಳ್ಳು ಸುದ್ದಿಯ ಬೆನ್ನಲ್ಲೂ ಪದಕ ಗೆದ್ದ ನಿಶಾ
* ಮಹಿಳೆಯರ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದ ನಿಶಾ
ಗೊಂಡಾ(ನ.12): ಬುಧವಾರವಷ್ಟೇ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿಯಾಗಿದ್ದ ಅಂಡರ್-23 ವಿಶ್ವ ಚಾಂಪಿಯನ್ ಕಂಚು ವಿಜೇತೆ ನಿಶಾ ದಹಿಯಾ (Nisha Dahiya) ಗುರುವಾರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ (National Wrestling Championship) ಚಿನ್ನ ಜಯಿಸಿದ್ದಾರೆ.
ಮಹಿಳೆಯರ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ನಿಶಾ, ಪಂಜಾಬ್‌ನ ಜಸ್‌ಪ್ರೀತ್ ಕೌರ್‌ರನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಮಣಿಸಿ ಚಿನ್ನ ಗೆದ್ದುಕೊಂಡರು. ಇದರೊಂದಿಗೆ ನಿಶಾ ದಹಿಯಾ ಸತತ ಎರಡನೇ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನಿಶಾ, ‘ಹತ್ಯೆ ವದಂತಿ ಬಳಿಕ ನಾನು ತುಂಬಾ ಒತ್ತಡದಲ್ಲಿದೆ. ನಿದ್ರಿಸಲೂ ಸಾಧ್ಯವಾಗಲಿಲ್ಲ. ಆದರೆ ಚಾಂಪಿಯನ್‌ಶಿಪ್ ಅಭಿಯಾನ ಉತ್ತಮ ಹಾಗೂ ಸಂತೋಷದಿಂದ ಮುಕ್ತಾಯಗೊಂಡಿದೆ’ ಎಂದಿದ್ದಾರೆ.
undefined
Nisha Dahiya: ಹತ್ಯೆ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ!
ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ನವೆಂಬರ್ 05ರಂದು ನಡೆದ ಅಂಡರ್-23 ವಿಶ್ವ ಚಾಂಪಿಯನ್ ಕ್ರೀಡಾಕೂಟದಲ್ಲಿ 72 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ನಿಶಾ ದಹಿಯಾ ಕಂಚಿನ ಪದಕ ಜಯಿಸಿದ್ದರು. ಇದರ ಬೆನ್ನಲ್ಲೇ ಅಂಡರ್-23 ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಕುಸ್ತಿಪಟುಗಳನ್ನು ಅಭಿನಂದಿಸಿದ್ದರು.
ವರ್ಷದ ಆಟಗಾರ: ಭಗತ್ ಹೆಸರು ನಾಮನಿರ್ದೇಶನ
ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್ (Tokyo Paralympics) ಚಿನ್ನದ ಪದಕ ವಿಜೇತ, ಭಾರತದ ಪ್ರಮೋದ್ ಭಗತ್ (Pramod Bhagat) ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯುಎಫ್)ನ ವರ್ಷದ ಪುರುಷ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
Abhinav Bindra:IOC ಸಮಿತಿ ಸದಸ್ಯರ ಆಯೋಗ ಸೇರಿದ ಭಾರತದ ಒಲಿಂಪಿಕ್ ತಾರೆ ಹಾಗೂ ಕೋಸ್ಟರಿಕಾ ಅಧ್ಯಕ್ಷೆ!
ಪ್ರಮೋದ್ ಪ್ಯಾರಾಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಎಸ್‌ಎಲ್3 ವಿಭಾಗದ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದರು. ಪ್ರಮೋದ್ ಅವರು ಪ್ಯಾರಾಲಿಂಪಿಕ್ಸ್‌ನ ಪುರುಷರ ಎಸ್‌ಎಲ್3 ವಿಭಾಗದಲ್ಲಿ ಕಂಚು ಗೆದ್ದಿದ್ದ ಮನೋಜ್ ಸರ್ಕಾರ್ ಜೊತೆ ಪ್ಯಾರಾ ಬ್ಯಾಡ್ಮಿಂಟನ್ ಜೋಡಿ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದಾರೆ. ಮುಂದಿನ 15-20 ದಿನಗಳಲ್ಲಿ ವಿಜೇತರ ಹೆಸರನ್ನು ಬಿಡಬ್ಲ್ಯುಎಫ್ ಘೋಷಿಸಲಿದೆ.
ಭಾರತದಲ್ಲಿ ಮೊದಲ ವಿಶ್ವ ಯೋಗಾ ಚಾಂಪಿಯನ್‌ಶಿಪ್
ನವದೆಹಲಿ: ಮುಂದಿನ ವರ್ಷ ಜೂನ್ ತಿಂಗಳಲ್ಲಿ ಚೊಚ್ಚಲ ಆವೃತ್ತಿಯ ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯಲಿದೆ ಎಂದು ಭಾರತೀಯ ಯೋಗಾಸನ ಕ್ರೀಡಾ ಫೆಡರೇಶನ್(ಎನ್‌ವೈಎಸ್‌ಎಫ್) ಪ್ರಕಟಿಸಿದೆ.
ಗುರುವಾರ ಭುವನೇಶ್ವರದಲ್ಲಿ ಮೊದಲ ಆವೃತ್ತಿಯ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಎನ್‌ವೈಎಸ್‌ಎಫ್ ಅಧ್ಯಕ್ಷ ಉದಿತ್ ಶೇಠ್, ಭಾರತದ ಪಾರಂಪರಿಕ ಕ್ರೀಡೆಯನ್ನು ವಿಶ್ವಕ್ಕೆ ತೋರಿಸಲಿರುವ ಮೊದಲ ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ 2022ರ ಜೂನ್‌ನಲ್ಲಿ ನಡೆಯಲಿದೆ ಎಂದಿದ್ದಾರೆ.
ಕಿರಿಯರ ಹಾಕಿ ವಿಶ್ವಕಪ್: ಭಾರತಕ್ಕೆ ವಿವೇಕ್ ನಾಯಕ
ಭುವನೇಶ್ವರ್: ನ.24ರಿಂದ ಭುವನೇಶ್ವರದಲ್ಲಿ ಆರಂಭವಾಗಲಿರುವ ಕಿರಿಯರ ಹಾಕಿ ವಿಶ್ವಕಪ್‌ಗೆ (Junior Hockey World Cup) 18 ಮಂದಿಯ ಭಾರತ ತಂಡ ಪ್ರಕಟಿಸಲಾಗಿದ್ದು, ವಿವೇಕ್ ಸಾಗರ್ ಪ್ರಸಾದ್‌ಗೆ ನಾಯಕತ್ವ ವಹಿಸಲಾಗಿದೆ.
World Boxing Championships ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಆಕಾಶ್ ಕುಮಾರ್‌ಗೆ ಒಲಿದ ಕಂಚು
21 ವರ್ಷದ ವಿವೇಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಕಂಚು ವಿಜೇತ ಹಿರಿಯರ ತಂಡದಲ್ಲಿದ್ದರು. ಇನ್ನು, 2018ರ ಯೂತ್ ಒಲಿಂಪಿಕ್ಸ್‌ನ ಬೆಳ್ಳಿ ವಿಜೇತ ಡಿಫೆಂಡರ್ ಸಂಜಯ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಹಾಲಿ ಚಾಂಪಿಯನ್ ಭಾರತ ನ.24ರಂದು ಫ್ರಾನ್ಸ್ ವಿರುದ್ಧ ಅಭಿಯಾನ ಆರಂಭಿಸಲಿದ್ದು, ನ.25ರಂದು ಕೆನಡಾ, ನ.27ಕ್ಕೆ ಪೋಲಂಡ್ ವಿರುದ್ಧ ಆಡಲಿದೆ.