Nisha Dahiya: ಹತ್ಯೆ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ!

By Suvarna NewsFirst Published Nov 10, 2021, 7:54 PM IST
Highlights
  • ಹತ್ಯೆ ಸುದ್ಧಿ ಸುಳ್ಳು, ನಾನು ಕ್ಷೇಮ ಎಂದು ರಾಷ್ಟ್ರೀಯ ಕುಸ್ತಿ ಪಟು
  • ಸ್ಪಷ್ಟನೆ ನೀಡಿದ ಕುಸ್ತಿಪಟು ನಿಶಾ ದಹಿಯಾ
  • ನಿಶಾ ದಹಿಯಾ, ಸಹೋದರ ಗುಂಡಿನ ದಾಳಿಗೆ ಹತ್ಯೆ ಎಂಬ ಸುಳ್ಳು ಸುದ್ದಿ

ಹರ್ಯಾಣ(ನ.10):  ಹರ್ಯಾಣದಲ್ಲಿ ದುಷ್ಕರ್ಮಿಗಳು ನಡೆಸಿದ  ಗುಂಡಿನ ದಾಳಿಯಲ್ಲಿ  ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಹತ್ಯೆಯಾಗಿದ್ದಾರೆ ಅನ್ನೋ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಈ ಸುದ್ಧಿ ಬಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸ್ಪತಃ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಡಲು ಬಂದಿದ್ದೇನೆ. ನನ್ನ ಕುರಿತು ಹರಿದಾಡುತ್ತಿರುವ ಹತ್ಯೆ  ಸುದ್ದಿ ಸುಳ್ಳು ಎಂದು ನಿಶಾ ದಹಿಯಾ ಸ್ಪಷ್ಟನೆ ನೀಡಿದ್ದಾರೆ.

ಹರ್ಯಾಣದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕುಸ್ತಿ ಪಟು ನಿಶಾ ದಹಿಯಾ ಹಾಗೂ ಸಹೋದರ ಹತ್ಯೆಯಾಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇತ್ತ ಉತ್ತರ ಪ್ರದೇಶದ ಗೊಂಡಾದಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಆಡಲು ತಯಾರಿ ನಡೆಸುತ್ತಿದ್ದಾರೆ. ಅಲ್ಲಿಂದಲೇ ವಿಡಿಯೋ ಸಂದೇಶ ರವಾನಿಸಿದ ನಿಶಾ ದಹಿಯಾ, ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ.

ಸಹ ಕ್ರೀಡಾಪಟು, ರಾಷ್ಟ್ರೀಯ ಕುಸ್ತಿಪಟು ಸಾಕ್ಷಿ ಮಲಿಕ್ ಜೊತೆ ಸೇರಿ ವಿಡಿಯೋ ಸಂದೇಶವನ್ನು ನಿಶಾ ದಹಿಯಾ ಹಂಚಿಕೊಂಡಿದ್ದಾರೆ. ಈ ಸಂದೇಶ ಭಾರತೀಯರನ್ನು ಸಮಾಧಾನಗೊಳಿಸಿದೆ. ಸುಳ್ಳು ಸುದ್ದಿ ಹರಿದಾಡಿದ ಪರಿಣಾಣಮ ಆತಂಕದ ವಾತಾವರಣ ನಿರ್ಮಾಣಾಗಿತ್ತು. ಇದೀಗ ನಿಶಾ ದಹಿಯಾ ಕುಟುಂಬಸ್ಥರು, ಭಾರತೀಯ ಕ್ರೀಡಾಭಿಮಾನಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

 

| "I am in Gonda to play senior nationals. I am alright. It's a fake news (reports of her death). I am fine," says wrestler Nisha Dahiya in a video issued by Wrestling Federation of India.

(Source: Wrestling Federation of India) pic.twitter.com/fF3d9hFqxG

— ANI (@ANI)

ಸುಳ್ಳು ಸುದ್ದಿಯಿಂದ ನಿಶಾ ದಹಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಹಲವರಿಗೆ ಕರೆಗಳು ಬಂದಿದೆ. ಹೀಗಾಗಿ ಸಾಕ್ಷಿ ಮಲಿಕ್ ತಮ್ಮ ಟ್ವಿಟರ್ ಖಾತೆ ಮೂಲಕ ನಿಶಾ ದಹಿಯಾ ಕ್ಷೇಮವಾಗಿರುವುದಾಗಿ ಟ್ವೀಟ್ ಮಾಡಿದ್ದರು. ನಿಶಾ ದಹಿಯಾ ಜೊತೆಗಿರುವ ಫೋಟೋ ಹಂತಿಕೊಂಡ ಸಾಕ್ಷಿ ಮಲಿಕ್ ,ಹತ್ಯೆ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

 

She is alive 🙏🏻 pic.twitter.com/6ohMK1bWxG

— Sakshi Malik (@SakshiMalik)

 ಅಂಡರ್ 23 ವಿಶ್ವಚಾಂಪಿಯನ್‌ಶಿಪ್ ಕುಸ್ತಿಯಲ್ಲಿ ನಿಶಾ ದಹಿಯಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ ಈ ಚಾಂಪಿಯನ್‌ಶಿಪ್ ನಿಶಾ ದಹಿಯಾ ಈ ಸಾಧನೆ ಮಾಡಿದ್ದರು. ನಿಶಾ ದಹಿಯಾ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದರು. 

Murder Case: ಕುಸ್ತಿಪಟು ಸುಶೀಲ್‌ ಕುಮಾರ್‌ಗೆ ಜಾಮೀನು ನಿರಾಕರಣೆ

ಸುಳ್ಳು ಸುದ್ದಿ ತಂದ ಆತಂಕ:
ನಿಶಾ ದಹಿಯಾ, ಸಹೋದರ ಹಾಗೂ ನಿಶಾ ತಾಯಿ ಮೇಲೆ ದುರ್ಷರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಸುದ್ದಿ ಭಾರತೀಯರಲ್ಲಿ ಆತಂಕ ಮೂಡಿಸಿತ್ತು. ಇಷ್ಟೇ ಅಲ್ಲ ಹರ್ಯಾಣದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿತ್ತು. ಈ ದಾಳಿಯಲ್ಲಿ ನಿಶಾ ದಹಿಯಾ ಹಾಗೂ ಸಹೋದರ ಹತ್ಯೆಯಾಗಿದ್ದಾರೆ. ತಾಯಿ ಗಂಭೀರ ಗಾಯಗೊಂಡಿದ್ದಾರೆ ಅನ್ನೋ ಸುಳ್ಳು ಸುದ್ದಿ ದೇಶ ವಿದೇಶದಲ್ಲೂ ಹರಿದಾಡಿತ್ತು. ಇದೀಗ ಈ ಸುದ್ದಿ ಸುಳ್ಳು ಅನ್ನೋದು ಸ್ಪಷ್ಟವಾಗಿದೆ.

click me!