ವಿಂಬಲ್ಡನ್‌:3ನೇ ಸುತ್ತಿಗೆ ಲಗ್ಗೆಯಿಟ್ಟ ಜೋಕೋ-ಜ್ವೆರೆವ್‌

By Kannadaprabha News  |  First Published Jul 2, 2021, 9:06 AM IST

* ವಿಂಬಲ್ಡನ್‌ ಮೂರನೇ ಸುತ್ತಿಗೆ ಲಗ್ಗೆಯಿಟ್ಟ ನೊವಾಕ್‌ ಜೋಕೋವಿಚ್

*  ದ.ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ವಿರುದ್ದ ಜೋಕೋಗೆ ಸುಲಭ ಜಯ

* ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಸಾನಿಯಾ ಮಿರ್ಜಾ ಜೋಡಿ ಎರಡನೇ ಸುತ್ತು ಪ್ರವೇಶ


ಲಂಡನ್‌(ಜು.02): ಹಾಲಿ ಚಾಂಪಿಯನ್‌ ನೊವಾಕ್‌ ಜೋಕೋವಿಚ್‌ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

2ನೇ ಸುತ್ತಿನ ವಿಂಬಲ್ಡನ್‌ ಪಂದ್ಯದಲ್ಲಿ ದ.ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ವಿರುದ್ಧ 6-3, 6-3, 6-3 ಸೆಟ್‌ಗಳಲ್ಲಿ ಜಯಗಳಿಸಿದರು. 4ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸಹ 2ನೇ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ 3ನೇ ಸುತ್ತಿಗೇರಿದರು.

Tap to resize

Latest Videos

ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ: 2ನೇ ಸುತ್ತಿಗೆ ಜೋಕೋ, ಮರ್ರೆ ಲಗ್ಗೆ

2011: ✅
2015: ✅
2018: ✅
2021: ✅

History repeats itself for as the defending champion beats Kevin Anderson again at to progress to the third round pic.twitter.com/RlkJIYNoIq

— Wimbledon (@Wimbledon)

ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಬೆಥಾನಿ ಮಟೆಕ್‌-ಸ್ಯಾಂಡ್ಸ್‌ ಜೋಡಿ, 6ನೇ ಶ್ರೇಯಾಂಕಿತ ಜೋಡಿಯಾದ ಅಮೆರಿಕದ ಡೆಸಿರೆ ಕ್ರಾಜಿಕ್‌ ಹಾಗೂ ಚಿಲಿಯ ಅಲೆಕ್ಸಾ ಗೌರಾಚಿ ವಿರುದ್ಧ 7-5, 6-3 ನೇರ ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿತು. ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಭಾರತದ ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌ ಜೋಡಿ ಸೋತು ಹೊರಬಿತ್ತು.
 

click me!