12 ವರ್ಷಕ್ಕೆ ಚೆಸ್‌ ಗ್ರ್ಯಾಂಡ್‌ ಮಾಸ್ಟರ್ ಆಗಿ ದಾಖಲೆ ನಿರ್ಮಿಸಿದ ಅಭಿಮನ್ಯು ಮಿಶ್ರಾ

By Suvarna NewsFirst Published Jul 1, 2021, 1:43 PM IST
Highlights

* ಅಮೆರಿಕದ ಯುವ ಚೆಸ್‌ ಪಟು ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್ಟ್ ಗ್ರ್ಯಾಂಡ್‌ ಮಾಸ್ಟರ್

* ಕೇವಲ 12 ವರ್ಷ, 4 ತಿಂಗಳು ಹಾಗೂ 25 ದಿನದ ಅಭಿಮನ್ಯು ಈ ದಾಖಲೆ ಬರೆದಿದ್ದಾರೆ.

* ಈ ಮೊದಲು ಸರ್ಜೆ 2002ರಲ್ಲಿ 12 ವರ್ಷ 7 ತಿಂಗಳ ವಯಸ್ಸಿನಲ್ಲಿ ಚೆಸ್ ಗ್ರ್ಯಾಂಡ್‌ ಮಾಸ್ಟರ್ ಆಗಿದ್ದರು

ಬುಡಪೆಸ್ಟ್‌(ಜು.01): ಭಾರತೀಯ ಮೂಲದ ಅಮೆರಿಕದ ಯುವ ಚೆಸ್‌ ಪಟು ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್ಟ್ ಗ್ರ್ಯಾಂಡ್‌ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 12 ವರ್ಷ, 4 ತಿಂಗಳು ಹಾಗೂ 25 ದಿನದ ಅಭಿಮನ್ಯು ಈ ದಾಖಲೆ ಬರೆದಿದ್ದಾರೆ. ಈ ಮೂಲಕ ಸರ್ಜೆ ಕರ್ಜಕಿನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸರ್ಜೆ 2002ರಲ್ಲಿ 12 ವರ್ಷ 7 ತಿಂಗಳ ವಯಸ್ಸಿನಲ್ಲಿ ಚೆಸ್ ಗ್ರ್ಯಾಂಡ್‌ ಮಾಸ್ಟರ್ ಆಗಿದ್ದರು.

ಗ್ರ್ಯಾಂಡ್‌ ಮಾಸ್ಟರ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಲಿಯೊನ್‌ ಮೆಂಡೊಂಕ ಎದುರು ಮೂರನೇ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಅಭಿಮನ್ಯು ಮಿಶ್ರಾ  ಭರ್ಜರಿ ಗೆಲುವು ಸಾಧಿಸುವ ಮೂಲಕ ಅತಿ ಕಿರಿಯ ಗ್ರ್ಯಾಂಡ್‌ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. 

Abhimanyu Mishra became the youngest GM in the history of chess eclipsing Sergey Karjakin's record of 12 years and 7 months which has been standing for 19 years now. Abhimanyu has become a GM at the age of 12 years 4 months and 25 days! A simply unbelievable feat!
📷- David Llada pic.twitter.com/G9JmvSmbI1

— ChessBase India (@ChessbaseIndia)

ಸುದೀಪ್- ವಿಶ್ವನಾಥನ್ ಆನಂದ್ ಚೆಸ್ ಆಟದಿಂದ ರು.10 ಲಕ್ಷ ಸಂಗ್ರಹ!

Congratulations to 12-year-old Abhimanyu Mishra on becoming the youngest Grandmaster in chess history! pic.twitter.com/1eChi9B5TK

— U.S. Embassy India (@USAndIndia)

ಎರಡು ವರ್ಷಗಳ ಹಿಂದಷ್ಟೇ ಭಾರತದ ಆರ್‌. ಪ್ರಜ್ಞಾನಂಧಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿ ಅಂತಾರಾಷ್ಟ್ರೀಯ ಅತಿ ಕಿರಿಯ ಚೆಸ್ ಮಾಸ್ಟರ್ ಎನ್ನುವ ದಾಖಲೆಯನ್ನು ಬರೆದಿದ್ದರು. ಅಭಿಮನ್ಯು ಮಿಶ್ರಾ ಅಮೆರಿಕದಲ್ಲೇ ನೆಲೆ ನಿಂತಿರುವ ಚೆನ್ನೈ ಮೂಲದ ಎಸ್‌. ಅರುಣ್ ಪ್ರಸಾದ್ ಹಾಗೂ ಪಿ. ಮಗೇಶ್‌ ಚಂದ್ರನ್‌ ಅವರ ಮಾರ್ಗದರ್ಶನದಲ್ಲಿ ಚೆಸ್ ಅಭ್ಯಾಸ ನಡೆಸುತ್ತಿದ್ದಾರೆ.
 

click me!