ಯುಎಸ್‌ ಓಪನ್‌: 5 ವರ್ಷಗಳ ಬಳಿಕ ಮೂರನೇ ಸುತ್ತು ಪ್ರವೇಶಿಸಿದ ಸಿಮೋನಾ ಹಾಲೆಪ್‌

Published : Sep 03, 2021, 09:09 AM IST
ಯುಎಸ್‌ ಓಪನ್‌: 5 ವರ್ಷಗಳ ಬಳಿಕ ಮೂರನೇ ಸುತ್ತು ಪ್ರವೇಶಿಸಿದ ಸಿಮೋನಾ ಹಾಲೆಪ್‌

ಸಾರಾಂಶ

* ಯುಎಸ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದ ಸಿಮೋನಾ ಹಾಲೆಪ್‌, ಸಿಟ್ಸಿಪಾಸ್‌ * ಯುಎಸ್‌ ಓಪನ್‌ನಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಹಾಲೆಪ್‌ ಮೂರನೇ ಸುತ್ತಿಗೆ ಲಗ್ಗೆ * 2016ರಲ್ಲಿ ಕಡೆಯ ಬಾರಿಗೆ ಯುಎಸ್‌ ಓಪನ್‌ನಲ್ಲಿ ಹಾಲೆಪ್‌ ಮೂರನೇ ಸುತ್ತು ಪ್ರವೇಶಿಸಿದ್ದರು

ನ್ಯೂಯಾರ್ಕ್(ಸೆ.03): ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಪ್ರಿಯಲ್ಲಿ ತಾರಾ ಟೆನಿಸಿಗರಾದ ರೊಮೇನಿಯಾದ ಸಿಮೋನಾ ಹಾಲೆಪ್‌, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಹಾಲೆಪ್‌, ಸರ್ಬಿಯಾದ ಕುಚೊವಾ ವಿರುದ್ಧ 6-3, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಈ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ಹಾಲೆಪ್‌ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. 2016ರಲ್ಲಿ ಕಡೆಯ ಬಾರಿಗೆ ಯುಎಸ್‌ ಓಪನ್‌ನಲ್ಲಿ ಹಾಲೆಪ್‌ ಮೂರನೇ ಸುತ್ತು ಪ್ರವೇಶಿಸಿದ್ದರು. 

ಯುಎಸ್‌ ಓಪನ್‌: 2ನೇ ಸುತ್ತಿಗೆ ಜೋಕೋವಿಚ್, ಒಸಾಕ ಲಗ್ಗೆ

ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಟ್ಸಿಪಾಸ್‌, ಫ್ರಾನ್ಸ್‌ನ ಮನ್ನಾರಿನೊ ವಿರುದ್ಧ 6-3, 6-4, 6-7, 6-0 ಸೆಟ್‌ಗಳಲ್ಲಿ ಗೆದ್ದು ಮುನ್ನಡೆದರು. 2ನೇ ಶ್ರೇಯಾಂಕಿತೆ ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ, 8ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ಸಹ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಭಾರೀ ಗಾಳಿ, ಮಳೆಯಿಂದಾಗಿ ಗುರುವಾರದ ಪಂದ್ಯಗಳು ವಿಳಂಬಗೊಂಡವು.

ಈ ಮೊದಲು 9ನೇ ಶ್ರೇಯಾಂಕಿತೆ ಗಾರ್ಬೈನ್‌ ಮುಗುರುಜಾ ಹಾಗೂ ಓನ್ಸ್‌ ಜೇಬರ್‌ ಕೂಡಾ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. 2 ಗ್ರ್ಯಾನ್‌ ಸ್ಲಾಂ ಒಡತಿ ಮುಗುರುಜಾ ಮುಂದಿನ ಪಂದ್ಯದಲ್ಲಿ ಕಳೆದ ಯುಎಸ್ ಓಪನ್ ರನ್ನರ್ ಅಪ್‌ ವಿಕ್ಟೋರಿಯಾ ಅಜೆರೆಂಕಾ ಅವರನ್ನು ಎದುರಿಸುವ ಸಾಧ್ಯತೆಯಿದೆ


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

34 ವಾರಗಳ ಗರ್ಭಿಣಿ.. ತುಂಬು ಬಸುರಿಯಾದರೂ 7 ವಿಶ್ವ ಮ್ಯಾರಥಾನ್ ಓಡಿ ಮುಗಿಸಿದ 38ರ ಮಹಿಳೆ!
ವಿಶ್ವಕಪ್ ಇಲ್ಲದೇ ವೃತ್ತಿಜೀವನಕ್ಕೆ ವಿದಾಯ ಹೇಳಿದ ಕ್ರಿಸ್ಟಿಯಾನೋ ರೊನಾಲ್ಡೋ..! ಕಳಚಿತು ಫುಟ್ಬಾಲ್‌ನ ಮತ್ತೊಂದು ಕೊಂಡಿ