ಪ್ರೊ ಕಬಡ್ಡಿ ಲೀಗ್: 190ಕ್ಕೂ ಹೆಚ್ಚು ಆಟಗಾರರ ಹರಾಜು

By Suvarna NewsFirst Published Sep 2, 2021, 9:31 AM IST
Highlights

* ಪ್ರೊ ಕಬಡ್ಡಿ ಆಟಗಾರರ ಹರಾಜು ಮುಕ್ತಾಯ

* ಈ ಬಾರಿಯ ಹರಾಜಿನಲ್ಲಿ 190 ಕ್ಕೂ ಅಧಿಕ ಆಟಗಾರರು ಬಿಕರಿ

* ದಾಖಲೆಯ ಮೊತ್ತಕ್ಕೆ ಹರಾಜಾದ ಪ್ರದೀಪ್ ನರ್ವಾಲ್

ಮುಂಬೈ(ಸೆ.02): 8ನೇ ಆವೃತ್ತಿಯ ಪ್ರೊ ಕಬಡ್ಡಿಗೆ ಮೂರು ದಿನಗಳ ಕಾಲ ನಡೆದ ಹರಾಜಿನಲ್ಲಿ 12 ಫ್ರಾಂಚೈಸಿಗಳು 190ಕ್ಕೂ ಹೆಚ್ಚಿನ ಆಟಗಾರರನ್ನು ಖರೀದಿಸಿವೆ. ನಂ.1 ರೈಡರ್‌ ಪ್ರದೀಪ್‌ ನರ್ವಾಲ್‌ ಪ್ರೊ ಕಬಡ್ಡಿ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ (1.65 ಕೋಟಿ) ಯು.ಪಿ.ಯೋಧ ಪಾಲಾದರು.

ಫ್ರಾಂಚೈಸಿಗಳು 10 ಫೈನಲ್‌ ಬಿಡ್‌ ಮ್ಯಾಚ್‌(ಎಫ್‌ಬಿಎಮ್‌) ಬಳಸಿದವು. ಅಂದರೆ ಹಿಂದಿನ ಆವೃತ್ತಿಯಲ್ಲಿ ತಂಡದಲ್ಲಿದ್ದ ಆಟಗಾರರನ್ನು ಈ ಬಾರಿ ಬೇರೆ ತಂಡಗಳು ಖರೀದಿಸಿದಾಗ ಆ ಆಟಗಾರರನ್ನು ತಮ್ಮ ತಂಡಕ್ಕೆ ವಾಪಸ್‌ ಕರೆತಂದವು. 12 ತಂಡಗಳು ಸೇರಿ ಒಟ್ಟು 48.22 ಕೋಟಿ ರು.ಗಳನ್ನು ಆಟಗಾರರ ಖರೀದಿಗೆ ಖರ್ಚು ಮಾಡಿದವು. 10 ಹೊಸ ಆಟಗಾರರು ಹರಾಜಿನಲ್ಲಿ ವಿವಿಧ ತಂಡಗಳಿಗೆ ಬಿಕರಿಯಾದರು.

𝐓𝐡𝐞 𝐏𝐚𝐫𝐝𝐞𝐞𝐩 𝐍𝐚𝐫𝐰𝐚𝐥 𝐂𝐨𝐫𝐨𝐧𝐚𝐭𝐢𝐨𝐧, 𝐏𝐚𝐫𝐭 𝐃𝐞𝐮𝐱! ⚕️

First of his name 🤩
Dubki King of the 👑 Record-Breaker 🤯
And now Weapon Extraordinaire of ⚔️

What do you expect from him, dear subjects? 😀 pic.twitter.com/0FxEXW1Diz

— ProKabaddi (@ProKabaddi)

pic.twitter.com/GBzntHuWaF

— ProKabaddi (@ProKabaddi)

ಪ್ರೊ ಕಬಡ್ಡಿ ಹರಾಜು: ಪ್ರದೀಪ್‌ ನರ್ವಾಲ್‌ಗೆ 1.65 ಕೋಟಿ ರೂ ಜಾಕ್‌ಪಾಟ್‌..!

ಪ್ರೊ ಕಬಡ್ಡಿ ಲೀಗ್ ಇದುವರೆಗೂ 7 ಯಶಸ್ವಿ ಆವೃತ್ತಿಯನ್ನು ಮುಗಿಸಿದ್ದು, ಮೊದಲ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಯು ಮುಂಬಾ ಕಪ್‌ ಗೆದ್ದು ಬೀಗಿತ್ತು. ಬಳಿಕ ಪುಣೇರಿ ಪಲ್ಟನ್‌ ಮೂರು ಬಾರಿ ಕಪ್‌ ತನ್ನದಾಗಿಸಿಕೊಂಡಿದೆ. ಇನ್ನು ಬೆಂಗಳೂರು ಬುಲ್ಸ್‌ ಹಾಗೂ ಬೆಂಗಾಲ್ ವಾರಿಯರ್ಸ್‌ ಪ್ರೊ ಕಬಡ್ಡಿ ಚಾಂಪಿಯನ್‌ ಪಟ್ಟ ಅಲಂಕರಿಸಿವೆ.

ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್‌ 3 ರೇಡರ್‌ಗಳು

1. ಪ್ರದೀಪ್ ನರ್ವಾಲ್ - ಯುಪಿ ಯೋಧ - 1.65 ಕೋಟಿ
2. ಸಿದ್ದಾರ್ಥ್ ದೇಸಾಯಿ - ತೆಲುಗು ಟೈಟಾನ್ಸ್ - 1.30 ಕೋಟಿ
3. ಮಂಜೀತ್ - ತಮಿಳ್ ತಲೈವಾಸ್ - 92 ಲಕ್ಷ

ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 3 ಡಿಫೆಂಡರ್ಸ್‌

1. ಸುರ್ಜಿತ್ ಸಿಂಗ್ - ತಮಿಳ್ ತಲೈವಾಸ್ - 75 ಲಕ್ಷ
2. ರವೀಂದರ್ ಪೆಹಲ್‌ - ಗುಜರಾತ್ ಜೈಂಟ್ಸ್‌ - 74 ಲಕ್ಷ
3. ವಿಶಾಲ್ ಭಾರದ್ವಾಜ್‌ - ಪುಣೇರಿ ಪಲ್ಟನ್ - 60 ಲಕ್ಷ

ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 3 ಆಲ್ರೌಂಡರ್‌

1. ರೋಹಿತ್ ಗುಲಿಯಾ - ಹರ್ಯಾಣ ಸ್ಟೀಲರ್ಸ್ ‌- 83 ಲಕ್ಷ
2. ಸಂದೀಪ್ ನರ್ವಾಲ್ - ದಬಾಂಗ್ ಡೆಲ್ಲಿ - 60 ಲಕ್ಷ
3. ದೀಪಕ್ ಹೂಡಾ - ಜೈಪುರ ಪಿಂಕ್‌ ಪ್ಯಾಂಥರ್ಸ್‌ - 55 ಲಕ್ಷ
 

click me!