ಚೀನಾಗೆ ಶಾಕ್ ಕೊಟ್ಟ ಅಮೆರಿಕ, Beijing Winter Olympicsಗೆ ದೊಡ್ಡಣ್ಣನ ಬಹಿಷ್ಕಾರ!

By Suvarna NewsFirst Published Dec 7, 2021, 11:20 AM IST
Highlights

* ಮುಂದಿನ ವರ್ಷ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌

* ಚೀನಾದಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ಗೆ ಅಮೆರಿಕ ಬಹಿಷ್ಕಾರ

* ಒಲಿಂಪಿಕ್ಸ್‌ಗೆ ತನ್ನ ಅಧಿಕಾರಿಗಳನ್ನು ಕಳುಹಿಸದಿರಲು ಅಮೆರಿಕ ನಿರ್ಧಾರ

ವಾಷಿಂಗ್ಟನ್(ಡಿ.07): ಮುಂದಿನ ವರ್ಷ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ (Beijing) ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ (Winter Olympics 2022) ತನ್ನ ಅಧಿಕಾರಿಗಳನ್ನು ಕಳುಹಿಸದಿರಲು ಅಮೆರಿಕ ನಿರ್ಧರಿಸಿದೆ. ಮಾನವ ಹಕ್ಕುಗಳ (Human Rights) ವಿರುದ್ಧ ಚೀನಾ ನಡೆಸುತ್ತಿರುವ ದೌರ್ಜನ್ಯದಿಂದಾಗಿ ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ರಾಜತಾಂತ್ರಿಕ ಬಹಿಷ್ಕಾರಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೀಜಿಂಗ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಶ್ವೇತಭವನ (The White House)ಈ ಘೋಷಣೆ ಮಾಡಿದೆ. ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಬೈಡೆನ್ (Joe Biden) ಆಡಳಿತವು ತನ್ನ ಯಾವುದೇ ಅಧಿಕಾರಿಗಳನ್ನು ಅಥವಾ ರಾಜತಾಂತ್ರಿಕ ನಿಯೋಗವನ್ನು ಕಳುಹಿಸುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸವಿ ಹೇಳಿದ್ದಾರೆ. ಅಮೆರಿಕದ ಕ್ರೀಡಾಪಟುಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಅವರೊಂದಿಗೆ ಇದ್ದೇವೆ ಎಂದೂ ತಿಳಿಸಿದ್ದಾರೆ.

ಫೆಬ್ರವರಿ 2022 ರಲ್ಲಿ ಒಲಿಂಪಿಕ್ಸ್ ಪ್ರಾರಂಭವಾಗಲಿದೆ

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಫೆಬ್ರವರಿ 2022 ರಲ್ಲಿ ಪ್ರಾರಂಭವಾಗಲಿದೆ. ಹೀಗಿರುವಾಗ ಅಮೆರಿಕದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಾರೆ ಆದರೆ ಬೈಡೆನ್ ಸರ್ಕಾರ (Biden Govt) ಬೀಜಿಂಗ್‌ಗೆ ತನ್ನ ರಾಜತಾಂತ್ರಿಕ ಪ್ರತಿನಿಧಿಯನ್ನು ಕಳುಹಿಸುವುದಿಲ್ಲ ಎಂದು ಶ್ವೇತ ಭವನ (The White House) ಸ್ಪಷ್ಟಪಡಿಸಿದೆ. ಈ ನಿರ್ಧಾರವು ಮಾನವೀಯತೆಯ ವಿರುದ್ಧ ಚೀನಾ ನಡೆಸುತ್ಮತಿರುವ ಅಪರಾಧ ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿ ನಡೆಯುತ್ತಿರುವ ನರಮೇಧದ ಪರಿಣಾಮವಾಗಿದೆ ಎಂದಿದ್ದಾರೆ. ಇನ್ನು ವಿಶ್ವದ ದೊಡ್ಡಣ್ಣ, ಅಮೆರಿಕ ತೆಗೆದುಕೊಂಡ ಈ ನಿರ್ಧಾರದಿಂದ ಒಲಿಂಪಿಕ್ಸ್ ಅನ್ನು ನಿಲ್ಲಿಸದೆ ವಿಶ್ವ ವೇದಿಕೆಯಲ್ಲಿ ಚೀನಾಕ್ಕೆ ಬಲವಾದ ಸಂದೇಶವನ್ನು ರವಾನಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಆಹ್ವಾನವಿಲ್ಲದೆ ಒಲಿಂಪಿಕ್ಸ್‌ನ ರಾಜತಾಂತ್ರಿಕ ಬಹಿಷ್ಕಾರಕ್ಕೆ ಯುಎಸ್ ಉತ್ತೇಜನ ನೀಡುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಆರೋಪಿಸಿದ್ದಾರೆ.

China Conspiracy: ಉಗಾಂಡದ ಬೆನ್ನಲ್ಲೇ, ಚೀನಾದ ಸಾಲದ ಸುಳಿಗೆ ಸಿಕ್ಕ ಲಾವೋಸ್‌!

ಈ ಹಿಂದೆಯೂ ಬಹಿಷ್ಕಾರ

ಇದು ಒಲಿಂಪಿಕ್ ಕ್ರೀಡಾಕೂಟವನ್ನು ಬಹಿಷ್ಕರಿಸುವ (Boycott) ಮೊದಲ ಪ್ರಕರಣವಲ್ಲ ಎಂಬುವುದು ಉಲ್ಲೇಖನೀಯ. 1980 ರಲ್ಲಿ ಶೀತಲ ಸಮರದ ಸಮಯದಲ್ಲಿ ಅಮೆರಿಕ ಕೊನೆಯ ಬಾರಿಗೆ ಮಾಸ್ಕೋ ಒಲಿಂಪಿಕ್ಸ್‌ನ್ನು ಸಂಪೂರ್ಣವಾಗಿ ಬಹಿಷ್ಕರಿಸಿತು. 1956 (ಮೆಲ್ಬೋರ್ನ್), 1964 (ಟೋಕಿಯೊ), 1976 (ಮಾಂಟ್ರಿಯಲ್), 1980 (ಮಾಸ್ಕೋ), 1984 (ಲಾಸ್ ಏಂಜಲೀಸ್) ಮತ್ತು 1988 (ಸಿಯೋಲ್) ರಲ್ಲಿ ಯುದ್ಧ, ಆಕ್ರಮಣಶೀಲತೆ ಮತ್ತು ವರ್ಣಭೇದ ನೀತಿಯಂತಹ ಕಾರಣಗಳಿಂದ ವಿವಿಧ ದೇಶಗಳು ಒಲಿಂಪಿಕ್ ಕ್ರೀಡಾಕೂಟವನ್ನು ಬಹಿಷ್ಕರಿಸಿವೆ. .

ಪಾಕ್‌ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ!

ಚೀನಾದಲ್ಲಿ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸಿದ Women's Tennis Association

ಚೀನಾದ (China) ಸ್ಟಾರ್ ಮಹಿಳಾ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ ಅವರ ಸುರಕ್ಷತೆಯ ಕಾರಣದಿಂದ, ಭಾರತದ ಮಹಿಳಾ ಟೆನಿಸ್ ಅಸೋಸಿಯೇಷನ್ ​​​​(Women's Tennis Association) ಚೀನಾದಲ್ಲಿ ನಡೆಯಬೇಕಿದ್ದ ಎಲ್ಲಾ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸಿದೆ. ಡಬ್ಲ್ಯುಟಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್ ಸೈಮನ್, ಪೆಂಗ್ ಶುವೈಗೆ ಮುಕ್ತವಾಗಿ ಸಂವಹನ ನಡೆಸಲು ಅವಕಾಶವಿಲ್ಲದಿರುವಾಗ ನಾನು ಅಲ್ಲಿ ಸ್ಪರ್ಧಿಸಲು ಹೇಗೆ ಕೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಲೈಂಗಿಕ ಕಿರುಕುಳದ ಆರೋಪಗಳನ್ನು ನಿರಾಕರಿಸುವಂತೆ ಆಕೆಯ ಮೇಲೆ ಒತ್ತಡ ಹೇರಲಾಗಿದೆ. ನಾವು 2022 ರಲ್ಲಿ ಚೀನಾದಲ್ಲಿ ಈವೆಂಟ್‌ಗಳನ್ನು ನಡೆಸಿದರೆ ನಮ್ಮ ಆಟಗಾರರು ಮತ್ತು ಸಿಬ್ಬಂದಿ ಎದುರಿಸಬಹುದಾದ ಅಪಾಯಗಳ ಬಗ್ಗೆ ನನಗೆ ಕಾಳಜಿ ಇದೆ ಎಂದೂ ತಿಳಿಸಿದ್ದಾರೆ. 

click me!