
ಸ್ಪೇನ್(ಜೂ.17): ಟೆನಿಸ್ ದಿಗ್ಗಜ, 20 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ವಿಜೇತ ರಾಫೆಲ್ ನಡಾಲ್ ಅಚ್ಚರಿ ನಿರ್ಧಾರ ಪ್ರಕಟಿಸಿದ್ದಾರೆ. ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ಹಾಗೂ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿರುವುದಾಗಿ ನಡಾಲ್ ಘೋಷಿಸಿದ್ದಾರೆ. ತನ್ನ ಮುಂದಿನ ಕರಿಯರ್ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ನಡಾಲ್ ಹೇಳಿದ್ದಾರೆ.
ಫ್ರೆಂಚ್ ಓಪನ್ ಟೆನಿಸ್ ಸ್ಟೇಡಿಯಂನಲ್ಲಿ ನಡಾಲ್‌ರ 9 ಅಡಿ ಎತ್ತರದ ಪ್ರತಿಮೆ!.
ಎಲ್ಲರಿಗೂ ಹಾಯ್, ಈ ವರ್ಷದ ವಿಂಬಲ್ಡನ್ ಚಾಂಪಿಯನ್‌ಶಿಪ್ ಮತ್ತು ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸದಿರಲು ನಾನು ನಿರ್ಧರಿಸಿದ್ದೇನೆ. ಈ ನಿರ್ಧಾರ ಸುಲಭವಾಗರಿಲಿಲ್ಲ. ಆದರೆ ನನ್ನ ಫಿಟ್ನೆಸ್ ಗಮನದಲ್ಲಿಟ್ಟುಕೊಂಡು, ತಂಡದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲರ ಸಲಹೆ ಸ್ವೀಕರಿಸಿದ ಇದು ಸರಿಯಾದ ನಿರ್ಧಾರ ಎಂದು ಭಾವಿಸಿದ್ದೇನೆ ಎಂದು ನಡಾಲ್ ಟ್ವೀಟ್ ಮಾಡಿದ್ದಾರೆ.
ಕರಿಯರ್ ವಿಸ್ತರಿಸುವುದು ಸಂತೋಷವನ್ನುಂಟುಮಾಡುವ ವಿಚಾರ. ಮುಂದಿನ ಕರಿಯರ್ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಉನ್ನತ ಮಟ್ಟದಲ್ಲಿ ಸ್ಪರ್ಧಿಸುವುದು ಹಾಗೂ ವೃತ್ತಿಪರ ಗುರಿಗಳಿಗಾಗಿ ಗರಿಷ್ಠ ಮಟ್ಟದಲ್ಲಿ ಸ್ಪರ್ಧೆ ಮಾಡಲು ಇದು ಅನಿವಾರ್ಯವಾಗಿದೆ ಎಂದು ನಡಾಲ್ ಹೇಳಿದ್ದಾರೆ.
'ಫ್ರೆಂಚ್ ಕಿಂಗ್' ನಡಾಲ್ ಹೊಸ ದಾಖಲೆ..!
ಇತ್ತಿಗೆ ಅಂತ್ಯಗೊಂಡ ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಮುಗ್ಗರಿಸಿದ್ದರು. ಸೆಮೀಸ್ ಫೈಟ್‌ನಲ್ಲಿ ನೋವಾಕ್ ಜೋಕೋವಿಚ್ ವಿರುದ್ಧ 6-3, 3-6, 6-7, 2-6 ಅಂತರದಲ್ಲಿ ಸೋಲು ಅನುಭವಿಸಿದ್ದರು.
ವಿಂಬಲ್ಡನ್ ಟೂರ್ನಿ ಜೂನ್ 28 ರಂದು ಆರಂಭಗೊಳ್ಳಲಿದೆ. ಇನ್ನು ಟೊಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಫ್ರೆಂಚ್ ಓಪನ್ ಟೂರ್ನಿ ಆಡಿರುವ 35 ವರ್ಷದ ನಡಾಲ್, ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.