ನವದೆಹಲಿ(ಜೂ.17): ಪ್ರತಿಷ್ಠಿತ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಭರ್ಜರಿ ತಯಾರಿ ನಡೆಸಿದೆ. ಕ್ರೀಡಾಪಟುಗಳು ಕೊರೋನಾ ಸಂಕಷ್ಟದ ನಡುವೆ ಅಭ್ಯಾಸ ಮಾಡಿ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತ ಕ್ರೀಡಾಪಟುಗಳಿಗೆ ಎಲ್ಲಾ ನೆರವು ನೀಡಲಾಗಿದೆ. ಇದೀಗ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮಹತ್ವದ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಕೇವಲ 10,000 ಪ್ರೇಕ್ಷಕರಿಗಷ್ಟೇ ಅವಕಾಶ..!.
undefined
2020ರ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ, 2022ರ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ MPL ಸ್ಪೋರ್ಟ್ಸ್ ಫೌಂಡೇಷನ್ ಪ್ರಧಾನ ಪಾಯೋಕತ್ವದ ಒಪ್ಪಂದ ಮಾಡಿಕೊಂಡಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಜೊತೆ MPL 2022ರ ಡಿಸೆಂಬರ್ 31ರ ವರೆಗೆ ಒಪ್ಪಂದ ಮಾಡಿಕೊಂಡಿದೆ.
ಪ್ರಾಯೋಜಕತ್ವ ಒಪ್ಪಂದದ ಪ್ರಕಾರ MPL 8 ಕೋಟಿ ರೂಪಾಯಿಗಳನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಪಾವತಿಸಲಿದೆ. ಇದರ ಜೊತಗೆ 2020ರ ಏಷ್ಯನ್ ಗೇಮ್ಸ್ ಹಾಗೂ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ಕಿಟ್ ನೀಡಲಿದೆ.
ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ಕೊರೋನಾ ಪಾಸಿಟೀವ್ ಕಾರಣ ಅನರ್ಹಗೊಳಿಸುವುದಿಲ್ಲ; IOC!
ಈ ಒಪ್ಪಂದಕ್ಕೂ ಮೊದಲು ಭಾರತೀಯ ಕ್ರೀಡಾಪಟುಗಳ ಪ್ರಾಯೋಜಕತ್ವವನ್ನು ಅಮೂಲ್ ವಹಿಸಿಕೊಂಡಿತ್ತು. ಇದೀಗ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದೆ. ಅಮೂಲ್ 2021ರ ಡಿಸೆಂಬರ್ ವರೆಗಿನ ಅವಧಿಗೆ 1 ಕೋಟಿ ರೂಪಾಯಿ ನೀಡಿದೆ.