COVID Vaccine ಪಡೆದಿದ್ದರಷ್ಟೇ ಆಸ್ಟ್ರೇಲಿಯನ್ ಓಪನ್‌ಗೆ ಬನ್ನಿ: ಆಸ್ಟ್ರೇಲಿಯಾ ಸರ್ಕಾರ

By Suvarna News  |  First Published Oct 21, 2021, 2:12 PM IST

* ಕೋವಿಡ್ ಲಸಿಕೆ ವಿಚಾರದಲ್ಲಿ ಪಟ್ಟು ಸಡಿಲಿಸದ ಆಸ್ಟ್ರೇಲಿಯನ್ ಓಪನ್‌ ಆಯೋಜಕರು

* 2 ಡೋಸ್ ಲಸಿಕೆ ಪಡೆದರಷ್ಟೇ ಟೂರ್ನಿಯಲ್ಲಿ ಪಾಲ್ಗೊಳ್ಳಿ ಎಂದ ಆಸ್ಟ್ರೇಲಿಯಾ ಸರ್ಕಾರ

* ಹಾಲಿ ಚಾಂಪಿಯನ್ ನೊವಾಕ್ ಜೋಕೋವಿಚ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ


ಕ್ಯಾನ್ಬೆರ್ರಾ(ಅ.21): ಆಸ್ಪ್ರೇಲಿಯನ್‌ ಓಪನ್‌ (Australian Open) ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ 2 ಡೋಸ್‌ ಕೋವಿಡ್‌ ಲಸಿಕೆ (COVID vaccine) ಕಡ್ಡಾಯ. ಲಸಿಕೆ ಪ್ರಮಾಣ ಪತ್ರ ನೀಡದಿದ್ದರೆ ಟೂರ್ನಿಗೆ ಪ್ರವೇಶವಿಲ್ಲ ಎಂದು ಆಸ್ಪ್ರೇಲಿಯಾದ ಆರೋಗ್ಯ ಸಚಿವ ಗ್ರೇಗ್‌ ಹಂಟ್‌ ಸ್ಪಷ್ಟಪಡಿಸಿದ್ದಾರೆ. 

‘ನಮ್ಮ ನಿಯಮಗಳು ಎಲ್ಲರಿಗೂ ಅನ್ವಯಿಸಲಿದೆ. ನೀವು ವಿಶ್ವದಲ್ಲೇ ನಂ.1 ಆಗಿದ್ದೀರಿ ಎಂಬುದು ಇಲ್ಲಿ ವಿಷಯವಲ್ಲ. ಈ ನಿಯಮಗಳು ಆಸ್ಪ್ರೇಲಿಯಾ ಜನತೆಯ ಸುರಕ್ಷತೆಗಾಗಿ ಇದೆ. ಇದು ನೊವಾಕ್ ಜೋಕೋವಿಚ್‌ಗೆ (Novak Djokovic) ಸಂದೇಶವಲ್ಲ. ಇಲ್ಲಿಗೆ ಬರಲಿಚ್ಛಿಸುವ ಎಲ್ಲರಿಗೂ ಇದು ಸಂದೇಶ’ ಎಂದಿದ್ದಾರೆ.

Tap to resize

Latest Videos

ಆಫ್ಘಾನ್ ಮಹಿಳಾ ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ; ತಾಲಿಬಾನ್ ಕ್ರೌರ್ಯ ಬಹಿರಂಗ ಪಡಿಸಿದ ಕೋಚ್!

ದಾಖಲೆಯ 9 ಬಾರಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿರುವ ನಂ.1 ಆಟಗಾರ ನೋವಾಕ್‌ ಜೋಕೊವಿಚ್‌, ಲಸಿಕೆ ಪ್ರಮಾಣ ಪತ್ರ ಕಡ್ಡಾಯಗೊಳಿಸಿದರೆ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಹಂಟ್‌ ಸ್ಪಷ್ಟನೆ ನೀಡಿದ್ದಾರೆ.

ಪ್ರಸ್ತುತ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ (Roger Federer), ನೊವಾಕ್ ಜೋಕೋವಿಚ್ ಹಾಗೂ ರಾಫೆಲ್‌ ನಡಾಲ್‌ (Rafael Nadal) ತಲಾ 20 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಜಯಿಸುವ ಮೂಲಕ ಈ ಮೂವರು ಆಟಗಾರರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ನೊವಾಕ್ ಜೋಕೋವಿಚ್‌ ಇದೀಗ ಒಂದು ವೇಳೆ ತಾವು ಲಸಿಕೆ ಹಾಕಿಸಿಕೊಂಡಿರುವ ಕುರಿತಂತೆ ಪ್ರಮಾಣಪತ್ರ ನೀಡದಿದ್ದರೆ, ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಭಾಗವಹಿಸುವುದು ಅನುಮಾನ ಎನಿಸಿದೆ. 

COVID Vaccine Rules ಆಸ್ಪ್ರೇಲಿಯನ್‌ ಓಪನ್‌ಗೆ ನೊವಾಕ್‌ ಜೋಕೋವಿಡ್‌ ಗೈರು?

ಇದುವರೆಗೂ ಮೂವರು ವೃತ್ತಿಪರ ಟೆನಿಸ್ ಆಟಗಾರರು ಲಸಿಕೆ ಹಾಕಿಸಿಕೊಂಡಿರುವ ಕುರಿತಂತೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಈ ಪೈಕಿ ಇತ್ತೀಚೆಗಷ್ಟೇ ಮುಕ್ತಾಯವಾದ ಯುಎಸ್ ಓಪನ್ (US Open) ಗ್ರ್ಯಾನ್‌ ಸ್ಲಾಂ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್‌ (Daniil Medvedev), ವಿಶ್ವದ ನಾಲ್ಕನೇ ಶ್ರೇಯಾಂಕಿತ ಅಲೆಕ್ಸ್‌ ಜ್ವರೆವ್ (Alex Zverev) ಹಾಗೂ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್‌ ತಾವು ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ನೀಡಿಲ್ಲ. 

ವಿಕ್ಟೋರಿಯಾ ರಾಜ್ಯದ ಮುಖ್ಯಸ್ಥ ಡ್ಯಾನ್ ಆಂಡ್ರೋಸ್‌ (Dan Andrews), ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಲ್ಲಿ ಕೋವಿಡ್ 19 ಲಸಿಕೆ (Covid 19 Vaccine) ಪಡೆಯದ ಆಟಗಾರರಿಗೆ ಟೂರ್ನಿಯಲ್ಲಿ ಅವಕಾಶ ನೀಡಲಾಗುವುದಿಲ್ಲ. ಈ ತೀರ್ಮಾನಕ್ಕೆ ಯಾವುದೇ ವಿನಾಯಿತಿ ನೀಡುವುದಿಲ್ಲ. ಲಸಿಕೆ ಪಡೆಯದ ಆಟಗಾರರಿಗೆ ಆಸ್ಟ್ರೇಲಿಯಾಗೆ ಬರಲು ವೀಸಾ (Visa) ಸಿಗಲಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಡ್ಯಾನ್ ಆಂಡ್ರೋಸ್ ಹೇಳಿದ್ದರು.

ಡೆನ್ಮಾರ್ಕ್ ಓಪನ್‌: ಸೈನಾಗೆ ಮೊದಲ ಸುತ್ತಲ್ಲೇ ಸೋಲು

ಒಡೆನ್ಸ್‌: ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ (Denmark Open Badminton) ಟೂರ್ನಿಯಲ್ಲಿ ಸೈನಾ ನೆಹ್ವಾಲ್‌ (Saina Nehwal) ಮೊದಲ ಸುತ್ತಿನಲ್ಲೇ ಸೋಲನುಭವಿಸಿದರೆ, ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯಾ ಸೆನ್‌ 2ನೇ ಸುತ್ತಿಗೇರಿದ್ದಾರೆ. ಮೊದಲ ದಿನ ಪಿ.ವಿ ಸಿಂಧು, ಕಿದಂಬಿ ಶ್ರೀಕಾಂತ್, ಸಮೀರ್ ವರ್ಮಾ ಶುಭಾರಂಭ ಮಾಡಿದ್ದರು.

ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್‌

ಬುಧವಾರ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ಜಪಾನ್‌ನ ಅಯಾ ಒಹೊರಿ ವಿರುದ್ಧ 16-21, 14-21ರಲ್ಲಿ ಸೋತರು. ಲಕ್ಷ್ಯಾ ಭಾರತದವರೇ ಆದ ಸೌರಭ್‌ ವರ್ಮಾ ವಿರುದ್ಧ 21​-9, 21​-7ರಲ್ಲಿ ಜಯಿಸಿ ಮುನ್ನಡೆದರು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌-ಅಶ್ವಿನಿ ಜೋಡಿ ಸೋತು ಹೊರಬಿತ್ತು.

click me!