ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶಟ್ಲರ್ ಸೌರಭ್ ವರ್ಮಾ ಹಾಗೂ ರಿತುಪರ್ಣಾ ದಾಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕಿದಂಬಿ ಶ್ರೀಕಾಂತ್ ಹೊರಬಿದ್ದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಖನೌ(ನ.30): ಭಾರತದ ಶಟ್ಲರ್ ಸೌರಭ್ ವರ್ಮಾ ಹಾಗೂ ರಿತುಪರ್ಣಾ ದಾಸ್, ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಋುತುವಿನ ಮೊದಲ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದ ಕಿದಂಬಿ ಶ್ರೀಕಾಂತ್ ಕ್ವಾರ್ಟರ್‌ನಲ್ಲಿ ಸೋತು ನಿರಾಸೆ ಅನುಭವಿಸಿದರು.
ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಶ್ರೀಕಾಂತ್, ಸೌರಭ್ ಕ್ವಾರ್ಟರ್‌ಗೆ
undefined
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸೌರಭ್ ವರ್ಮಾ, ಥಾಯ್ಲೆಂಡ್‌ನ ಕುನ್ಲವಟ್ ವಿಟಿಡ್ಸರನ್ ವಿರುದ್ಧ 21-19, 21-16 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 26 ವರ್ಷ ವಯಸ್ಸಿನ ಭಾರತದ ಶಟ್ಲರ್ ಸೌರಭ್, ಸೆಮೀಸ್‌ನಲ್ಲಿ ಕೊರಿಯಾದ ಹೀಯೊ ಕ್ವಾಂಗ್ ರನ್ನು ಎದುರಿಸಲಿದ್ದಾರೆ.
ಮುಷ್ತಾಕ್ ಅಲಿ ಟ್ರೋಫಿ: ಮಿಥುನ್ ಹ್ಯಾಟ್ರಿಕ್, ಆದರೂ ಕರ್ನಾಟಕಕ್ಕೆ ಕಠಿಣ ಗುರಿ
ಮತ್ತೊಂದು ಕ್ವಾರ್ಟರ್‌ನಲ್ಲಿ ಮಾಜಿ ವಿಶ್ವ ನಂ.1 ಕೆ. ಶ್ರೀಕಾಂತ್, 7ನೇ ಶ್ರೇಯಾಂಕಿತ ಕೊರಿಯಾದ ವಾನ್ ಹೊ ಸನ್ ಎದುರು 18-21, 19-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಕೊರಿಯಾದ ವಾನ್ ಎದುರು ಶ್ರೀಕಾಂತ್ 11 ಮುಖಾಮುಖಿಯಲ್ಲಿ 7ಬಾರಿ ಸೋಲುಂಡಿದ್ದಾರೆ.
ರಿತುಪರ್ಣಾಗೆ ಜಯ:
ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಭಾರತದ ರಿತುಪರ್ಣಾ ದಾಸ್, ಭಾರತದವರೇ ಆದ ಶ್ರುತಿ ಮುಂಡಾದ ವಿರುದ್ಧ 24-26, 21-10, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಸೆಮೀಸ್‌ನಲ್ಲಿ ರಿತುಪರ್ಣಾ, ಥಾಯ್ಲೆಂಡ್‌ನ ಫಿಟ್ಟಾಯಪೊರನ್ ಚಿವಾನ್‌ರನ್ನು ಎದುರಿಸಲಿದ್ದಾರೆ.