ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೌರಭ್ ವರ್ಮಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಖನೌ(ಡಿ.01): ಭಾರತದ ತಾರಾ ಶಟ್ಲರ್ ಸೌರಭ್ ವರ್ಮಾ, ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಮಾಜಿ ರಾಷ್ಟ್ರೀಯ ಚಾಂಪಿಯನ್ ರಿತುಪರ್ಣಾ ದಾಸ್ ಸೆಮೀಸ್‌ನಲ್ಲಿ ಸೋತು ಹೊರಬಿದ್ದಿದ್ದಾರೆ.
ಸಯ್ಯದ್ ಮೋದಿ ಬ್ಯಾಡ್ಮಿಂಟನ್: ಸೌರಭ್ ಸೆಮಿಫೈನಲ್‌ಗೆ ಲಗ್ಗೆ!
undefined
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೌರಭ್ ವರ್ಮಾ, ಕೊರಿಯಾದ ಹಿಯೊ ಕ್ವಾಂಗ್ ವಿರುದ್ಧ 21-17, 16-21, 21-18 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 3 ಗೇಮ್‌ಗಳ ಪಂದ್ಯದಲ್ಲಿ ಸೌರಭ್, ಮೊದಲ ಹಾಗೂ 3ನೇ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದರು. ಎದುರಾಳಿ ಶಟ್ಲರ್ ವಿರುದ್ಧ ಮೊದಲ ಗೇಮ್‌ನಲ್ಲಿಯೇ ಮೇಲುಗೈ ಸಾಧಿಸಿದ ಸೌರಭ್‌ಗೆ 2ನೇ ಗೇಮ್‌ನಲ್ಲಿ ಕೊರಿಯಾ ಶಟ್ಲರ್ ತಿರುಗೇಟು ನೀಡಿದರು. 2 ಗೇಮ್‌ಗಳ ಮುಕ್ತಾಯಕ್ಕೆ ಉಭಯ ಶಟ್ಲರ್‌ಗಳು ತಲಾ 1-1 ರಿಂದ ಸಮಬಲ ಸಾಧಿಸಿದ್ದರು.
ಧೋನಿ ನಿವೃತ್ತಿ ಸದ್ಯಕ್ಕಿಲ್ಲ; 2021ರ ಐಪಿಎಲ್ ಆಡ್ತಾರೆ ಸಿಎಸ್‌ಕೆ ನಾಯಕ?
ಹೀಗಾಗಿ ನಿರ್ಣಾಯಕ ಎನಿಸಿದ್ದ 3ನೇ ಗೇಮ್‌ನಲ್ಲಿ ಉತ್ತಮ ಪೈಪೋಟಿ ಏರ್ಪಟ್ಟಿತ್ತು. ಪಂದ್ಯ ಕೈ ಚೆಲ್ಲದಂತೆ ನೋಡಿಕೊಂಡ ಸೌರಭ್, ಕೊರಿಯಾ ಶಟ್ಲರ್‌ನ್ನು 3 ಅಂಕಗಳಿಂದ ಹಿಂದಿಕ್ಕುವಲ್ಲಿ ಯಶಸ್ವಿಯಾಗುವ ಮೂಲಕ ಮುನ್ನಡೆ ಸಾಧಿಸಿ 2-1ರಿಂದ ಪಂದ್ಯ ಗೆದ್ದರು.
ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ರಿತುಪರ್ಣಾ ದಾಸ್, ಥಾಯ್ಲೆಂಡ್‌ನ ಫಿಟ್ಟಾಯಪೊರನ್ ಚೈವಾನ್ ವಿರುದ್ಧ 22-24, 15-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಮೊದಲ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿದ ರಿತುಪರ್ಣಾ, 2ನೇ ಗೇಮ್‌ನಲ್ಲಿ ಸುಲಭವಾಗಿ ಶರಣಾದರು.