ಸ್ವಿಸ್‌ ಓಪನ್‌ ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌ ಲಗ್ಗೆ

By Kannadaprabha News  |  First Published Mar 5, 2021, 8:03 AM IST

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್‌, ಅಜಯ್‌ ಜಯರಾಮ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಬಾಸೆಲ್(ಮಾ.05)‌: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬಿ.ಸಾಯಿ ಪ್ರಣೀತ್‌ ಹಾಗೂ ಅಜಯ್‌ ಜಯರಾಮ್‌ ಸಹ ಕ್ವಾರ್ಟರ್‌ ಫೈನಲ್‌ಗೇರಿದ್ದು, ಇದೇ ಮೊದಲ ಬಾರಿಗೆ ಭಾರತದಿಂದಾಚೆ ಸೂಪರ್‌ 300 ಟೂರ್ನಿಯಲ್ಲಿ ಭಾರತದ ಮೂವರು ಅಂತಿಮ 8ರ ಸುತ್ತಿಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌, ಫ್ರಾನ್ಸ್‌ನ ಥಾಮಸ್‌ ರೌಕ್ಸೆಲ್‌ ವಿರುದ್ಧ 21-10, 14-21, 21-14ರಲ್ಲಿ ಗೆದ್ದರೆ, ಡೆನ್ಮಾರ್ಕ್‌ನ ರಾಸ್ಮಸ್‌ ವಿರುದ್ಧ ಅಜಯ್‌ ಜಯರಾಮ್‌ ಜಯಿಸಿದರು. ಇಸ್ರೇಲ್‌ನ ಜೆಲ್ಬೆರ್‌ಮನ್‌ ವಿರುದ್ಧ ನೇರ ಗೇಮ್‌ಗಳಲ್ಲಿ ಗೆದ್ದು ಪ್ರಣೀತ್‌ ಮುನ್ನಡೆದರು. ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಅಮೆರಿಕದ ಐರಿಸ್‌ ವಾಂಗ್‌ ವಿರುದ್ಧ 21-13, 21-14 ಗೇಮ್‌ಗಳಲ್ಲಿ ಜಯಿಸಿದರು.

Tap to resize

Latest Videos

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧುಗೆ ಸುಲಭ ಸವಾಲು

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಜೋಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಅಂತಿಮ 8ರ ಸುತ್ತಿಗೆ ಲಗ್ಗೆಯಿಟ್ಟಿತು.

click me!