2020ನೇ ಸಾಲಿನ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಇಗಾ ಸ್ವಿಟೆಕ್ ಹಾಗೂ ಅಮೆರಿಕದ ಸೋಫಿಯಾ ಕೆನಿನ್ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ಅ.09): ಯುವ ಟೆನಿಸ್ ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಟೆಕ್ ಹಾಗೂ ಅಮೆರಿಕದ ಸೋಫಿಯಾ ಕೆನಿನ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
81 ವರ್ಷಗಳ ಬಳಿಕ ಪೋಲೆಂಡ್ ಆಟಗಾರ್ತಿಯೊಬ್ಬರು ಫ್ರೆಂಚ್ ಓಪನ್ ಫೈನಲ್‌ಗೇರಿದ ಸಾಧನೆಯನ್ನು ಸ್ವಿಟೆಕ್ ಮಾಡಿದ್ದಾರೆ. ಮಹಿಳಾ ಸಿಂಗಲ್‌ಸ್ ಸೆಮೀಸ್‌ನಲ್ಲಿ ಸ್ವಿಟೆಕ್, ಅರ್ಜೆಂಟೀನಾದ ನಾಡಿಯಾ ಪೊಡೊರೊಸ್ಕಾ ವಿರುದ್ಧ 6-2, 6-1ರಲ್ಲಿ ಗೆದ್ದರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸ್ವಿಟೆಕ್, ಅಮೆರಿಕದ ಸೋಫಿಯಾ ಕೆನಿನ್ ಎದುರು ಸೆಣಸಲಿದ್ದಾರೆ.
ಫ್ರೆಂಚ್ ಓಪನ್: ಸೆಮೀಸ್ ಪ್ರವೇಶಿಸಿ ದಾಖಲೆ ಬರೆದ ನಾಡಿಯಾ
1939ರಲ್ಲಿ ಪೋಲೆಂಡ್‌ನ ಜೆಡ್ರಜೊವಸ್ಕಾ, ಫ್ರೆಂಚ್ ಗ್ರ್ಯಾನ್‌ಸ್ಲಾಮ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಓಪನ್ ಟೂರ್ನಿ ಆದ ಬಳಿಕ ಗ್ರ್ಯಾನ್‌ಸ್ಲಾಮ್ ಫೈನಲ್‌ಗೇರಿದ 2ನೇ ಪೋಲೆಂಡ್ ಆಟಗಾರ್ತಿ ಸ್ವಿಟೆಕ್ ಆಗಿದ್ದಾರೆ. 2012ರಲ್ಲಿ ಅಗ್ನಿಸೆಜ್ಕಾ ರಾಡ್ವಾಂಸ್ಕ ವಿಂಬಲ್ಡನ್ ಫೈನಲ್‌ಗೇರಿದ್ದರು. ಮತ್ತೊಂದು ಸೆಮೀಸ್‌ನಲ್ಲಿ ಸೋಫಿಯಾ, ಚೆಕ್ ಗಣರಾಜ್ಯದ ಕ್ವಿಟೋವಾ ಎದುರು 6-4, 7-5 ರಲ್ಲಿ ಗೆದ್ದರು.
ಜೋಕೋ ಸೆಮೀಸ್‌ಗೆ: ವಿಶ್ವ ನಂ.1 ಸರ್ಬಿಯಾದ ನೊವಾಕ್ ಜೋಕೋವಿಚ್, ಪುರುಷರ ಸಿಂಗಲ್‌ಸ್ನ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ಕರೆನೊ ಬುಸ್ಟಾ ವಿರುದ್ಧ 4-6, 6-2, 6-3, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಜೋಕೋವಿಚ್, ಸೆಮೀಸ್‌ನಲ್ಲಿ ಗ್ರೀಸ್‌ನ ಸ್ಟೆಫಾನೊ ಟಿಟ್ಸಿಪಾಸ್ ರನ್ನು ಎದುರಿಸಲಿದ್ದಾರೆ. ಟಿಟ್ಸಿಪಾಸ್, ಕ್ವಾರ್ಟರ್‌ನಲ್ಲಿ ರಷ್ಯಾದ 22 ವರ್ಷದ ಟೆನಿಸಿಗ ಆ್ಯಂಡ್ರೆ ರುಬ್ಲೆವ್ ಎದುರು 7-5, 6-2, 6-3 ರಲ್ಲಿ ಗೆದ್ದರು.