ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅರ್ಜೆಂಟೀನಾದ ನಾಡಿಯಾ ಪೊಡೊರೊಸ್ಕಾ ಸೆಮಿಫೈನಲ್ ಪ್ರವೇಶಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ಅ.07): ಅರ್ಜೆಂಟೀನಾದ ನಾಡಿಯಾ ಪೊಡೊರೊಸ್ಕಾ, ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂನ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೊಲಿನಾ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಈ ಮೂಲಕ ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೆ ಪ್ರವೇಶಿಸಿ ಫ್ರೆಂಚ್ ಓಪನ್ ಸೆಮೀಸ್‌ಗೇರಿದ ಮೊದಲ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ.
ಫ್ರೆಂಚ್ ಓಪನ್: ಕ್ವಾರ್ಟರ್‌ಗೆ ಕ್ವಿಟೋವಾ, ಜೋಕೋ ಲಗ್ಗೆ
Cinderella, it’s not midnight yet 🇦🇷 becomes the first women’s qualifier to reach the semi-finals in Paris upsetting Svitolina 6-2 6-4. pic.twitter.com/0T9Fxfg4S8
— Roland-Garros (@rolandgarros)Just another day making history... pic.twitter.com/k7v5caxpBn
— Roland-Garros (@rolandgarros)ವಿಶ್ವ ಶ್ರೇಯಾಂಕದಲ್ಲಿ 131ನೇ ಸ್ಥಾನದಲ್ಲಿರುವ ಪೊಡೊರೊಸ್ಕಾ, ಕಳೆದ ವಾರದ ವರೆಗೂ ಗ್ರ್ಯಾನ್‌ಸ್ಲಾಂ ಪ್ರಧಾನ ಸುತ್ತಿನಲ್ಲಿ ಒಂದೂ ಪಂದ್ಯ ಜಯಿಸಿರಲಿಲ್ಲ. ಇದೇ ವೇಳೆ ಸ್ಪೇನ್‌ನ ಕಾರ್ರೆನೊ ಬುಸ್ಟಾ ಪುರುಷರ 4ನೇ ಸುತ್ತಿನ ಪಂದ್ಯದಲ್ಲಿ ಜಯಿಸಿ ಕ್ವಾರ್ಟರ್ ಫೈನಲ್‌ಗೇರಿದ್ದು, ಸೆಮೀಸ್‌ನಲ್ಲಿ ಸ್ಥಾನಕ್ಕಾಗಿ ಅಗ್ರ ಶ್ರೇಯಾಂಕಿತ ನೋವಾಕ್ ಜೋಕೋವಿಚ್ರನ್ನು ಎದುರಿಸಲಿದ್ದಾರೆ.