ಫ್ರೆಂಚ್ ಓಪನ್: ಕ್ವಾರ್ಟರ್‌ಗೆ ಕ್ವಿಟೋವಾ, ಜೋಕೋ ಲಗ್ಗೆ

By Kannadaprabha News  |  First Published Oct 6, 2020, 10:30 AM IST

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಹಾಗೂ ನೊವಾಕ್ ಜೋಕೋವಿಚ್ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್(ಅ.06)‌: 2 ಬಾರಿ ವಿಂಬಲ್ಡನ್‌ ಚಾಂಪಿಯನ್‌ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ನಲ್ಲಿ 8 ವರ್ಷಗಳ ಬಳಿಕ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 2012ರ ಫ್ರೆಂಚ್‌ ಓಪನ್‌ನಲ್ಲಿ ಕ್ವಿಟೋವಾ ಸೆಮೀಸ್‌ನಲ್ಲಿ ಸೋತು ಹೊರಬಿದ್ದಿದ್ದರು.

ಸೋಮವಾರ ನಡೆದ ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ 7ನೇ ಶ್ರೇಯಾಂಕಿತೆ ಕ್ವಿಟೋವಾ, ಚೀನಾದ ಜಾಂಗ್‌ ಶೂಯಿ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. ಟೂರ್ನಿಯ ಮೊದಲ ಸುತ್ತಿನಿಂದ ಕ್ವಿಟೋವಾ ಒಂದು ಸೆಟ್‌ನ್ನು ಸೋತಿಲ್ಲ. ಎಲ್ಲಾ ಪಂದ್ಯಗಳಲ್ಲೂ ಕೇವಲ 2 ಸೆಟ್‌ಗಳ ಆಟದಲ್ಲಿ ಜಯ ಸಾಧಿಸಿದ್ದಾರೆ. ಬುಧವಾರ ನಡೆಯಲಿರುವ ಎಂಟರಘಟ್ಟದ ಪಂದ್ಯದಲ್ಲಿ ಕ್ವಿಟೋವಾ, ಶ್ರೇಯಾಂಕ ರಹಿತೆ ಜರ್ಮನಿಯ ಲೌರಾ ಸಿಗೆಮಂಡ್‌ರನ್ನು ಎದುರಿಸಲಿದ್ದಾರೆ. ಅಂತಿಮ 16ರ ಸುತ್ತಲ್ಲಿ ಲೌರಾ, ಸ್ಪೇನ್‌ನ ಪೌಲಾ ಬಡೋಸಾ ಎದುರು 7-5, 6-2 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್‌ಗೇರಿದ್ದರು.

Tap to resize

Latest Videos

ಫ್ರೆಂಚ್ ಓಪನ್: ಹಾಲೆಪ್ ಹೋರಾಟ ಅಂತ್ಯ

ಜೋಕೋ, ರುಬ್ಲೆವ್‌ಗೆ ಜಯ:

Flawless 🙇🙇‍♀️

Make that 4️⃣7️⃣ Grand Slam QFs for ! pic.twitter.com/U17bfCt26G

— ATP Tour (@atptour)

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಟೆನಿಸಿಗ ಸರ್ಬಿಯಾದ ನೊವಾಕ್ ಜೋಕೋವಿಚ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪ್ರಿಕ್ವಾರ್ಟರ್‌ನಲ್ಲಿ ಜೋಕೋ, ರಷ್ಯಾದ ಕಚನೋವ್ ವಿರುದ್ಧ 6-4, 6-3, 6-3ರಲ್ಲಿ ಗೆಲುವು ಪಡೆದರು.  ಗ್ರೀಸ್‌ನ ಸ್ಟೆಫನೊ ಟಟ್ಸಿಪಾಸ್‌, ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌ ವಿರುದ್ಧ 6-3, 7-6(11-9), 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು. ಮತ್ತೊಂದು ಪ್ರಿ ಕ್ವಾರ್ಟರ್‌ನಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್‌, ಹಂಗೇರಿಯ ಮಾರ್ಟನ್‌ ಫಕ್ಸೊವಿಕ್ಸ್‌ ಎದುರು 6-7(4-7), 7-5, 6-4, 7-6(7-3) ಸೆಟ್‌ಗಳಲ್ಲಿ ಪ್ರಯಾಸದ ಜಯ ಪಡೆದರು. ಇದರೊಂದಿಗೆ ರುಬ್ಲೆವ್‌ ಫ್ರೆಂಚ್‌ ಓಪನ್‌ನಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಗೇರಿದರು.
 

click me!