ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್: ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ನಾಕೌಟ್ ಹಂತ ಪ್ರವೇಶಿಸಿದ ಭಾರತದ ಮೊದಲ ಪುರುಷ ಬ್ಯಾಡ್ಮಿಂಟನ್ ಜೋಡಿ ಎನ್ನುವ ಇತಿಹಾಸ ನಿರ್ಮಿಸಿತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಜೋಡಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು.
ಸಾತ್ವಿಕ್-ಚಿರಾಗ್ ಆರಂಭಿಕ ಪಂದ್ಯದಲ್ಲಿ ಭಾನುವಾರ ಫ್ರಾನ್ಸ್ ಜೋಡಿ ವಿರುದ್ಧ ಗೆದ್ದಿದ್ದರು. ಸೋಮವಾರ ಜರ್ಮನಿಯ ಮಾರ್ಕ್ ಲುಮ್ಸ್‌ಫುಸ್-ಮಾರ್ವಿನ್ ಸೀಡೆಲ್ ವಿರುದ್ಧ ಆಡಬೇಕಿತ್ತು. ಆದರೆ ಲುಮ್ಸ್‌ಫುಸ್ ಗಾಯಗೊಂಡ ಕಾರಣ ಪಂದ್ಯ ನಡೆಯಲಿಲ್ಲ.
Satwiksairaj Rankireddy and Chirag Shetty become the 1st MD Pair from India to Qualify for the QF of Olympics pic.twitter.com/KGc7FNiCMo
— Just Badminton (@BadmintonJust)
undefined
ಮತ್ತೊಂದೆಡೆ ಇಂಡೋನೇಷ್ಯಾ ಜೋಡಿ ವಿರುದ್ಧ ಫ್ರಾನ್ಸ್ ಜೋಡಿ ಸೋಲನುಭವಿಸುವುದರೊಂದಿಗೆ ಭಾರತದ ಜೋಡಿಗೆ ಕ್ವಾರ್ಟರ್‌ಗೇರುವ ಅವಕಾಶ ಲಭಿಸಿತು. ಮಂಗಳವಾರ ಭಾರತ-ಇಂಡೋನೇಷ್ಯಾ ತಂಡಗಳು ಗುಂಪಿನ ಅಗ್ರಸ್ಥಾನಕ್ಕಾಗಿ ಸೆಣಸಾಡಲಿವೆ. ಇನ್ನು ನಾಕೌಟ್ ಹಂತದ ಪಂದ್ಯಗಳು ಬುಧವಾರದಿಂದ ಆರಂಭವಾಗಲಿದೆ.
ಒಲಿಂಪಿಕ್ಸ್ ಕಂಚು ಗೆಲ್ಲಲು ಮನು ಭಾಕರ್ ಮೇಲೆ ಕೇಂದ್ರ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ ₹2 ಕೋಟಿ..!
ಇದೇ ವೇಳೆ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊ ಮಹಿಳಾ ಡಬಲ್ಸ್‌ನಲ್ಲಿ ಸತತ 2ನೇ ಪಂದ್ಯದಲ್ಲೂ ಸೋಲನುಭವಿಸಿದೆ. ಸೋಮವಾರ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತದ ಜೋಡಿಗೆ ವಿಶ್ವ ನಂ.4, ಜಪಾನ್‌ನ ನಾಮಿ ಮಟ್ಸುಯಮಾ-ಚಿಹರು ಶಿದಾ ವಿರುದ್ಧ 11-21, 12-21 ಗೇಮ್‌ಗಳಲ್ಲಿ ಸೋಲು ಎದುರಾಯಿತು.
ಮೊದಲ ಪಂದ್ಯವೇ ‘ಡಿಲಿಟ್’: 2ನೇ ಪಂದ್ಯದಲ್ಲಿ ಗೆದ್ದ ಸೇನ್
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಗುಂಪು ಹಂತದ ಮೊದಲ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್‌ರ ಫಲಿತಾಂಶ ರದ್ದುಗೊಳಿಸಲಾಗಿದೆ. ‘ಎಲ್’ ಗುಂಪಿನ ಮೊದಲ ಪಂದ್ಯದಲ್ಲಿ ಸೇನ್, ಗ್ವಾಟಮಾಲಾ ದೇಶದ ಕೆವಿನ್ ಕಾರ್ಡನ್ ವಿರುದ್ಧ ಗೆದ್ದಿದ್ದರು. ಆದರೆ ಗಾಯದ ಕಾರಣದಿಂದಾಗಿ ಕೆವಿನ್ ಗುಂಪು ಹಂತದ ಇನ್ನುಳಿದ 2 ಪಂದ್ಯಗಳಲ್ಲಿ ಆಡುವುದಿಲ್ಲ. ಹೀಗಾಗಿ ನಿಯಮಗಳ ಪ್ರಕಾರ ಕೆವಿನ್ ಆಡಿರುವ ಮೊದಲ ಪಂದ್ಯವನ್ನೂ ದಾಖಲೆಗಳಿಂದ ಅಳಿಸಲಾಗಿದೆ.
ಕೋಚ್ ಜೊತೆ ಕಿತ್ತಾಡಿಕೊಂಡಿದ್ದ ಮನು ಭಾಕರ್ ಜೀವನ ಬದಲಾಯಿಸಿದ್ದು ಅದೇ ಕೋಚ್‌ನ 'ಆ ಒಂದು ಕಾಲ್..'!
ಇನ್ನು, ಸೋಮವಾರ ನಡೆದ 2ನೇ ಪಂದ್ಯ(ದಾಖಲೆಗಳ ಪ್ರಕಾರ ಮೊದಲ)ದಲ್ಲಿ ಸೇನ್, ಬೆಲ್ಜಿಯಂನ ಜೂಲಿಯನ್ ಕ್ಯಾರಗಿ ವಿರುದ್ಧ 21-19, 21-14 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಬುಧವಾರ ಸೇನ್ ಅವರು ವಿಶ್ವ ನಂ.3. ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟೀ ವಿರುದ್ಧ ಸೆಣಸಾಡಲಿದ್ದಾರೆ. ಇದರಲ್ಲಿ ಗೆದ್ದರಷ್ಟೇ ಸೇನ್ ಮುಂದಿನ ಸುತ್ತಿಗೇರಲಿದ್ದು, ಸೋತರೆ ಹೊರಬೀಳಲಿದ್ದಾರೆ.
ಟಿಟಿ: 2ನೇ ಸುತ್ತಿನಲ್ಲೇ ಹೊರಬಿದ್ದ ಹರ್ಮೀತ್
ಭಾರತದ ತಾರಾ ಅಥ್ಲೀಟ್ ಹರ್ಮೀತ್ ದೇಸಾಯಿ, ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ. ಭಾನುವಾರ ಮಧ್ಯರಾತ್ರಿ ವಿಶ್ವ ನಂ.5, ಫ್ರಾನ್ಸ್‌ನ ಫೆಲಿಕ್ಸ್ ಲೆಬ್ರುನ್ ವಿರುದ್ಧ 31 ವರ್ಷದ ಹರ್ಮೀತ್ 8-11, 8-11, 6-11, 8-11 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. 2018 ಹಾಗೂ 2022ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಭಾರತ ತಂಡದಲ್ಲಿದ್ದ ಹರ್ಮೀತ್, ಪ್ಯಾರಿಸ್ ಕ್ರೀಡಾಕೂಟದ ಮೊದಲ ಸುತ್ತಿನಲ್ಲಿ ಜೊರ್ಡನ್‌ನ ಝೈದ್ ಅಬೂ ಯಮನ್ ವಿರುದ್ಧ ಗೆದ್ದು 2ನೇ ಸುತ್ತಿಗೇರಿದ್ದರು.