ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ

Published : May 08, 2025, 06:51 PM IST
ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ

ಸಾರಾಂಶ

ಆಪರೇಶನ್ ಸಿಂದೂರ್ ಕುರಿತು ಫೋಟೋ ಹಂಚಿಕೊಂಡ ಸಾನಿಯಾ ಮಿರ್ಜಾ ಪಾಕಿಸ್ತಾನದಿಂದ ತೀವ್ರ ಟೀಕೆ ಎದುರಿಸಿದ್ದರು. ಇದರ ಬೆನ್ನಲ್ಲೇ ಸಾನಿಯಾ ತಮ್ಮ ವರಸೆ ಬದಲಿಸಿದ್ದಾರೆ. ಪಾಕಿಸ್ತಾನದ ದಾಳಿಯನ್ನು ಭಾರತ ಹಿಮ್ಮೆಟ್ಟಿಸುತ್ತಿದ್ದಂತೆ ಸಾನಿಯಾ ಮಿರ್ಜಾ ಇದೀಗ ಶಾಂತಿ ಪಾಠ ಮಾಡಿದ್ದಾರೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣಾಗಿದೆ.  

ನವದೆಹಲಿ(ಮೇ.08) ಪಾಕಿಸ್ತಾನ ನಡೆಸುವ ಕುತಂತ್ರ ಬದ್ಧಿಗೆ ಭಾರತ ತಕ್ಕ ಉತ್ತರ ನೀಡಿದೆ. ಪಹೆಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗಿದೆ. ಭಾರತದ ಆಪರೇಶನ್ ಸಿಂದೂರ್‌ಗೆ ದೇಶಾದ್ಯಂತ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ. ಆಪರೇಶನ್ ಸಿಂದೂರ್ ಕುರಿತು ಫೋಟೋ ಹಂಚಿಕೊಂಡಿದ್ದ ಸಾನಿಯಾ ಮಿರ್ಜಾ ನಡೆಯನ್ನು ಪಾಕಿಸ್ತಾನಿಯರು ತೀವ್ರ ಟೀಕಿಸಿದ್ದರು. ಸಾನಿಯಾ ಯುದ್ಧಕ್ಕೆ ಬೆಂಬಲ ನೀಡುತ್ತಿದ್ದಾರೆ. ಅಮಾಯಕರ ಹತ್ಯೆಯನ್ನು ಸಾನಿಯಾ ಸಂಭ್ರಮಿಸುತ್ತಿದ್ದಾರೆ ಅನ್ನೋ ಟೀಕೆಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ತಮ್ಮ ವರಸೆ ಬದಲಿಸಿದ್ದಾರೆ. ಪಾಕಿಸ್ತಾನದ ಭಾರತದ ಮೇಲೆ ಮಾಡಿದ ಮಿಲಿಟರಿ ದಾಳಿಯನ್ನು ಹಿಮ್ಮೆಟ್ಟಿಸುತ್ತಿದ್ದಂತೆ ಸಾನಿಯಾ ಮಿರ್ಜಾ ಶಾಂತಿಯ ಪಾಠ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಭಾರತ ಪ್ರತಿದಾಳಿ ಬದಲು ಶಾಂತಿ ಮಾತುಕತೆ, ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ.

ಪಾಕಿಸ್ತಾನಿಯರ ಆಕ್ರೋಶದ ಬೆನ್ನಲ್ಲೇ ಸಾನಿಯಾ ಸಂದೇಶ ಬದಲು
ಆಪರೇಶನ್ ಸಿಂದೂರ್ ಕುರಿತು ಭಾರತೀಯ ಸಶಸ್ತ್ರ ಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಸುದ್ದಗೋಷ್ಠಿ ನಡೆಸಿದ ಫೋಟೋವನ್ನು ಸಾನಿಯಾ ಮಿರ್ಜಾ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ನಾವು ಒಂದು ರಾಷ್ಟ್ರವಾಗಿ ಏನು ಅನ್ನೋ ಪ್ರಬಲ ಸಂದೇಶವಿದೆ ಅನ್ನೋ ಫೋಟೋವನ್ನು ಸಾನಿಯಾ ಹಂಚಿಕೊಂಡಿದ್ದರು. ಆಧರೆ ಈ ಫೋಟೋಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಸಾನಿಯಾ ಮಿರ್ಜಾ ಮಾಜಿ ಗಂಡನ ತವರು ಪಾಕಿಸ್ತಾನದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಾನಿಯಾ ಮಿರ್ಜಾ ಆಪರೇಶನ್ ಸಿಂದೂರ್‌ಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನದಲ್ಲಿನ ಅಮಾಯಕ ಜೀವನಗಳ ಬಲಿಯನ್ನು ಸಭ್ರಮಿಸಿದ್ದಾರೆ. ಮುಸ್ಲಿಮ್ ಮಹಿಳೆಯಾಗಿ ಮಹಿಳೆಯರ ಬಗ್ಗೆ ಧ್ವನಿ ಎತ್ತಬೇಕು. ಆಪರೇಶನ್ ಸಿಂದೂರ್‌ನಿಂದ ಪಾಕಿಸ್ತಾನದ ಅಮಾಯಕ ಹೆಣ್ಣು ಮಕ್ಕಳು ಹತರಾಗಿದ್ದಾರೆ. ಇದನ್ನು ಸಾನಿಯಾ ಮಿರ್ಜಾ ಹೇಗೆ ಸಂಭ್ರಮಿಸುತ್ತೀರಿ. ನಿಮ್ಮ ಮಾನವೀಯತೆ ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂಬ ಟೀಕೆಗಳು ಪಾಕಿಸ್ತಾನದಿಂದ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸತತ ಗುಂಡಿನ ದಾಳಿ, ಮಿಸೈಲ್ ದಾಳಿ ಆರಂಭಿಸಿತ್ತು. ಇದಕ್ಕೆ ಭಾರತ ಕೂಡ ಪ್ರತ್ಯುತ್ತರ ನೀಡಿದೆ. ಭಾರತದ ಪ್ರತಿದಾಳಿ ನಡೆಸುತ್ತಿದ್ದಂತೆ ಸಾನಿಯಾ ಮಿರ್ಜಾ ವರಸೆ ಬದಲಾಗಿದೆ. ಶಾಂತಿ ಎಲ್ಲರ ಆಯ್ಕೆಯಾಗಬೇಕು, ದಾಳಿಯಿಂದ ಏನೂ ಸಾಧ್ಯವಿಲ್ಲ. ಎಂದು ಶಾಂತಿಧೂತರಂತೆ ಸಂದೇಶ ನೀಡಿದ್ದಾರೆ.

ಆಪರೇಶನ್ ಸಿಂದೂರ ದಾಳಿಗೆ ತತ್ತರಿಸಿದ ಪಾಕಿಸ್ತಾನಕ್ಕೆ ಮೇ.9 ನಿರ್ಣಾಯಕ, ಡೂ ಆರ್ ಡೈ

ಗಾಜಾದಿಂದ ಇಸ್ರೇಲ್, ಪುಲ್ವಾಮಾದಿಂದ ಪೆಹಲ್ಗಾಮ್, ಸಾನಿಯಾ ಹೇಳುತ್ತಿರುವುದೇನು?
ಶಾಂತಿ ಎಲ್ಲರ ಆಯ್ಕೆಯಾಗಬೇಕು. ರಾಜತಾಂತ್ರಿಕತೆ, ಮಾತುಕತೆ ದುರ್ಬಲತೆಯಲ್ಲ, ಶಾಂತಿ ಐಷಾರಾಮಿತನವಲ್ಲ. ಇದೇ ಮಂತ್ರದ ಮೂಲಕ ಮುನ್ನಡೆಯಬೇಕು. ಕಾರಣ ಸಂಘರ್ಷಗಳ ಪರಿಣಾಮ ಏನು ಅನ್ನೋದು ನೋಡಿದ್ದೇವೆ. ಘಾಜಾದಿಂದ ಇಸ್ರೇಲ್ ವರೆಗೆ, ಪುಲ್ವಾಮಾದಿಂದ ಪೆಹಲ್ಗಾಂ ವರೆಗೆ, ಇತ್ತ ರಷ್ಯಾದಿಂದ ಉಕ್ರೇನ್ ವರೆಗೆ, ಎಲ್ಲದರ ಪರಿಣಾಮ ಒಂದೆ ಎಂದು ಸಾನಿಯಾ ಮಿರ್ಜಾ ಇನ್‌ಸ್ಟಾಗ್ರಾಂ ಸ್ಟೋರಿ ಪೋಸ್ಟ್ ಮಾಡಿದ್ದಾರೆ.

ಭಾರತದ ದಾಳಿ ಮಾಡುತ್ತಿದ್ದಂತೆ ಸಾನಿಯಾ ಮಿರ್ಜಾ ಶಾಂತಿ ಮಂತ್ರ ಪಠಿಸಿದ್ದಾರೆ. ದಾಳಿ, ಯುದ್ಧಗಳ ಪರಿಣಾಮ ಘನಘೋರ ಅನ್ನೋದನ್ನು ಸಾನಿಯಾ ಮಿರ್ಜಾ ಹೇಳಿದ್ದಾರೆ. ಆಪರೇಶನ್ ಸಿಂದೂರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ಸಾನಿಯಾ ಮಿರ್ಜಾ ಇದೀಗ ಏಕಾಏಕಿ ಶಾಂತಿ ಮಂತ್ರ ಪಠಿಸಿದ್ದು ಯಾಕೆ ಅನ್ನೋ ಪ್ರಶ್ನೆಗಳು ಉದ್ಭವಿಸಿದೆ. ಸಾಮಾಜಿ ಜಾಲತಾಣಗಳಲ್ಲಿ ಸಾನಿಯಾ ಮಿರ್ಜಾ ನಡೆಯನ್ನು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ದಾಳಿ ಮಾಡಿ ಭಾರತದ ನಾಗರೀಕರು ಮೃತಪಟ್ಟಾಗ, ಪೆಹಲ್ಗಾಂ ದಾಳಿ ನಡೆದಾಗ ಶಾಂತಿ ಮಂತ್ರ ಪಠಿಸಿದ ಸಾನಿಯಾ ಮಿರ್ಜಾ ಇದೀಗ ಪಾಕಿಸ್ತಾನಿಯರ ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ ಭಾರತಕ್ಕೆ ಶಾಂತಿ ಮಂತ್ರ ಹೇಳುತ್ತಿರುವುದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಶಾಂತಿ ಮಂತ್ರವನ್ನು ಭಾರತಕ್ಕಿಂತ ಉತ್ತಮವಾಗಿ ಪಠಿಸಿದವರು ಯಾರಿದ್ದಾರೆ?
ಭಾರತ ತನ್ನ ಮೇಲೆ ದಾಳಿ ಮಾಡಿದವರಿಗೆ ತಕ್ಕ ಪಾಠ ಕಲಿಸಲು ಎಲ್ಲಾ ಹಕ್ಕು ಹೊಂದಿದೆ. ಇಧರ ನಡುವೆ ಶಾಂತಿ ಮಂತ್ರದ ಅಗತ್ಯವಿಲ್ಲ. ಭಾರತ ಕಳೆದ ಹಲವು ಶತಮಾನಗಳಿಂದ ಶಾಂತಿ ಮಂತ್ರ ಪಠಿಸುತ್ತಲೇ ಬಂದಿದೆ. ಆದರೆ ಪರಿಸ್ಥಿತಿ ಬದಲಾಗಿಲ್ಲ. ಹೀಗಾಗಿ ಈಗ ಯಾರೂ ಶಾಂತಿ ಮಂತ್ರ ಹೇಳುವ ಅಗತ್ಯವಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯಾವುದೇ ಮಿಲಿಟರಿ ದಾಳಿಗೆ ಅದಕ್ಕಿಂತ ಕಠಿಣ ಉತ್ತರ ಖಚಿತ, ಪಾಕಿಸ್ತಾನಕ್ಕೆ ಜೈಶಂಕರ್ ಎಚ್ಚರಿಕೆ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!