ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ

Published : May 03, 2025, 11:18 AM ISTUpdated : May 03, 2025, 11:25 AM IST
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ

ಸಾರಾಂಶ

ಕ್ರೀಡಾಪಟುಗಳಿಗೆ ಅಪರಿಚಿತರಿಂದ ಮುತ್ತು ಡೋಪಿಂಗ್‌ ಸುಳಿಗೆ ಸಿಲುಕಿಸಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಮುತ್ತು ನೀಡುವವರು ಡ್ರಗ್ಸ್ ಸೇವಿಸಿದ್ದರೆ, ಕ್ರೀಡಾಪಟುಗಳ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳಿವೆ. ರಿಚರ್ಡ್ ಗ್ಯಾಸ್ಕೆಟ್ ಪ್ರಕರಣವನ್ನು ಉದಾಹರಣೆಯಾಗಿ ನೀಡಲಾಗಿದೆ. ಹೀಗಾಗಿ ಕ್ರೀಡಾಪಟುಗಳು ಎಚ್ಚರಿಕೆ ವಹಿಸಬೇಕು.

ನವದೆಹಲಿ(ಮೇ.03): ಒಂದು ಮುತ್ತಿನ ಕತೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಈಗ ಹೇಳ ಹೊರಟಿರುವುದು ಸಿನಿಮಾದ ಮುತ್ತು ಹವಳದ ಕತೆ ಅಲ್ಲ. ಇದು ಕಿಸ್ ಕತೆ. ಕ್ರೀಡಾಪಟುಗಳು, ಅಥ್ಲೀಟ್‌ಗಳಿಗೆ ಭಾರಿ ಎಚ್ಚರಿಕೆ ನೀಡಲಾಗಿದೆ. ಒಂದು ಮುತ್ತು ಮತ್ತು ತರಲಿದೆ ಆಪತ್ತು ಎಂದು ತಜ್ಞರು ಎಚ್ಚರಿಸಿದ್ದಾರೆ. ಗೊತ್ತಿಲ್ಲದ ಯುವತಿಯರಿಗೆ ಕಿಸ್ ಕೊಡುವಾಗ ಅತೀವ ಎಚ್ಚರಿಕೆ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ. ಒಂದು ಮುತ್ತಿನಿಂದ ಕ್ರೀಡಾಪಟುಗಳ ಕರಿಯರ್ ಸಂಪೂರ್ಣ ಕತ್ತಲೆಯಲ್ಲಿ ಉಳಿಯುವುದಾಗಿ ಹೇಳಿದ್ದಾರೆ. ಒಂದು ಮುತ್ತಿಗೂ ಕರಿಯರ್‌ಗೂ ಏನು ಸಂಬಂಧ?

ಗೊತ್ತಿಲ್ಲದ ವ್ಯಕ್ತಿಗಳಿಗೆ ಮುತ್ತು ಕೊಡುವಾಗ ಎಚ್ಚರ ವಹಿಸಿ. ಇದರಿಂದ ನೀವು ಡೋಪಿಂಗ್‌ ಸುಳಿಯಲ್ಲಿ ಸಿಲುಕುವ ಸಾಧ್ಯತೆಯಿದೆ ಎಂದು ಕ್ರೀಡಾಪಟುಗಳಿಗೆ ಕ್ರೀಡಾ ವಕೀಲರು, ತಜ್ಞರು ಎಚ್ಚರಿಕೆ ನೀಡಿದ್ದಾರೆ. ಉದ್ದೀಪನ ಮದ್ದು ನಿಗ್ರಹ ಸಮ್ಮಿಟ್‌ನಲ್ಲಿ ಪಾಲ್ಗೊಂಡ ತಜ್ಞರು, ಈ ಹಿಂದಿನ ಕೆಲ ಉದಾಹರಣೆಗಳನ್ನು ನೀಡಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕ್ಲಬ್‌, ಬಾರ್‌ಗಳಲ್ಲಿ ಹುಡುಗಿಯರಿಗೆ ಮುತ್ತಿಕ್ಕಿ ಡೋಪಿಂಗ್‌ ಸುಳಿಯಲ್ಲಿ ಸಿಲುಕುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ನೈಟ್‌ ಕ್ಲಬ್‌, ಬಾರ್‌ಗಳಲ್ಲಿ ಗೊತ್ತಿಲ್ಲದ ಹುಡುಗಿಯರಿಗೆ ಮುತ್ತು ನೀಡಿ, ಲೈಂಗಿಕ ಸಂಪರ್ಕ ಬೆಳೆಸುವ ಮುನ್ನ ಎಚ್ಚರಿಕೆ ವಹಿಸಿ. ಇದರಿಂದ ನಿಮ್ಮ ಕ್ರೀಡಾ ಬದುಕೇ ನಾಶವಾಗಬಹುದು ಎಂದಿದ್ದಾರೆ.

ಸಿನ್ನರ್‌ನಿಂದ ಶರಪೋವಾವರೆಗೆ ಡೋಪಿಂಗ್ ನಿಷೇಧ ಎದುರಿಸಿದ ಟಾಪ್ ಟೆನಿಸ್ ಆಟಗಾರರು!

ಕ್ರೀಡಾ ವಕೀಲ ಮಾರ್ಕ್ ಹಾವೆಲ್ ಹಾಗೂ ಟೆನ್ನಿಸ್ ಸ್ಟಾರ್ ಜೆನ್ನಿಕ್ ಸಿನ್ನರ್ ನಡೆಸಿದ ಡೋಪಿಂಗ್ ಟೆಸ್ಟ್ ಪ್ರಕರಣದಲ್ಲಿ ಈ ಸ್ಫೋಟಕ ಮಾಹಿತಿಗಳು ಬಯಲಾಗಿದೆ. 2009ರಲ್ಲಿ ಫ್ರೆಂಚ್ ಟೆನ್ನಿಸ್ ಪಟು ರಿಚರ್ಡ್ ಗ್ಯಾಸ್‌ಕೆಟ್ ಡೋಪಿಂಗ್ ಟೆಸ್ಟ್ ಪ್ರಕರಣದ ಕುರಿತು ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. 2009ರಲ್ಲಿ ರಿಚರ್ಡ್ ಗ್ಯಾಸ್‌ಕೆಟ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದರು. ಶಿಸ್ತಿನ ಆಹಾರ ಸೇವಿಸುತ್ತಿದ್ದ ರಿಚರ್ಡ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು ಹೇಗೆ ಅನ್ನೋ ತನಿಖೆ ಆರಂಭಗೊಂಡಿತ್ತು. ಈ ತನಿಖೆ ವೇಳೆ, ರಿಚರ್ಡ್ ನೈಟ್ ಕ್ಲಬ್ ಒಂದರಲ್ಲಿ ಅಪರಿಚಿತ ಯುವತಿಗೆ ಮುತ್ತಿಕ್ಕಿದ್ದರು. ಇಷ್ಟೇ ಅಲ್ಲ ಒನ್ ನೈಟ್ ಸ್ಟಾಂಡ್ ಮತ್ತು ಅನುಭವಿಸಿದ್ದರು. ಡ್ರಗ್ಸ್ ಸೇವಿಸಿದ್ದ ಯುವತಿಯಿಂದ ಕೊಕೈನ್ ಫ್ರೆಂಟ್ ಟೆನಿಸ್ ಕ್ರೀಡಾಪಟು ದೇಹದೊಳಕ್ಕೂ ಸೇರಿತ್ತು. ಹೀಗಾಗಿ ಕ್ರೀಡಾಪಟುಗಳು ಅತೀವ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದರೆ.

ಒಂದು ಮುತ್ತು ಕೊಡುವಾಗಲು ಯೋಚಿಸಬೇಕು, ಮುತ್ತು ಯಾರಿಗೆ ಕೊಡುತ್ತಿದ್ದೀರಿ, ಅವರು ಪರಿಚಿತರೇ? ಅವರ ಆಹಾರಅಭ್ಯಾಸ, ಡ್ರಗ್ಸ್ ಕುರಿತು ಮಾಹಿತಿ ಇದೆಯಾ? ಇವೆಲ್ಲವೂ ಕ್ರೀಡಾಪಟುಗಳು ಯೋಚಿಸಿ ಬಳಿಕ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದ್ದಾರೆ.

ಡೋಪಿಂಗ್ ಟೆಸ್ಟ್‌ಗೆ ಒಳಗಾಗಲಿದ್ದಾರೆ ಸೂರ್ಯ, ಸಂಜು! ಇನ್ನಷ್ಟು ಕ್ರಿಕೆಟಿಗರ ಮೇಲೆ ನಾಡಾ ಕಣ್ಣು!
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!
ರಾಷ್ಟ್ರೀಯ ಕಾರ್ಟಿಂಗ್‌: ಬೆಂಗಳೂರಿನ ಇಶಾನ್‌ ಮಾದೇಶ್‌ಗೆ ಗೆಲುವು