7 ವರ್ಷದ ಬಳಿಕ ವಿಶ್ವ ಕುಸ್ತಿಗೆ ಮರಳಿದ ನಟ ಸಂಗ್ರಾಮ್ ಸಿಂಗ್, ಫೆ.24ಕ್ಕೆ ಪಾಕಿಸ್ತಾನ ಪಟು ಜೊತೆ ಕಾದಾಟ!

By Suvarna NewsFirst Published Feb 20, 2024, 7:29 PM IST
Highlights

ಕುಸ್ತಿಪಟು ಹಾಗೂ ನಟ ಸಂಗ್ರಾಮ್ ಸಿಂಗ್ ಬರೋಬ್ಬರಿ 7 ವರ್ಷಗಳ ಬಲಿಕ ಅಂತಾರಾಷ್ಟ್ರೀಯ ರಸ್ಲಿಂಗ್‌ಗೆ ಮರಳಿದ್ದಾರೆ. ಫೆಬ್ರವರಿ 24ರಂದು ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನದ ಕುಸ್ತಿಪಟು ಜೊತೆ ಕಾದಾಟ ನಡೆಸಲಿದ್ದಾರೆ. ಪ್ರಮುಖ ಹೋರಾಟಕ್ಕೂ ಮುನ್ನ ಏಷ್ಯಾನೆಟ್ ನ್ಯೂಸ್ ಸಂಗ್ರಾಮ್ ಸಿಂಗ್ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನವದೆಹಲಿ(ಫೆ.20)  ಅಂತಾರಾಷ್ಟ್ರೀ ಕುಸ್ತುಪಟು, ನಟ ಸಂಗ್ರಾಮ್ ಸಿಂಗ್ ಕಳೆದ ಕೆಲ ವರ್ಷಗಳಿಂದ ರಸ್ಲಿಂಗ್ ರಿಂಗ್‌ನಿಂದ ದೂರ ಉಳಿದಿದ್ದರು. ಇದೀಗ ಬರೋಬ್ಬರಿ 7 ವರ್ಷಗಳ ಬಳಿಕ ವರ್ಲ್ಡ್ ರಸ್ಲಿಂಗ್ ಚಾಂಪಿಯನ್‌ಶಿಪ್ ಮೂಲಕ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ದುಬೈನಲ್ಲಿ ನಡೆಯಲಿರುವ ಪ್ರೊ ರಸ್ಲಿಂಗ್ ಚಾಂಪಯನ್‌ಶಿಪ್ ಟೂರ್ನಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ಸಯೀದ್ ವಿರುದ್ದ ಕಾದಾಟ ನಡೆಸಲಿದ್ದಾರೆ. ಈ ಪಂದ್ಯ ಫೆಬ್ರವರಿ 24ರಂದು ನಡೆಯಲಿದೆ. ಪ್ರಮುಖ ಪಂದ್ಯಕ್ಕೂ ಮುನ್ನ ಸಂಗ್ರಾಮ್ ಸಿಂಗ್ ಜೊತೆ ಏಷ್ಯಾನೆಟ್ ನ್ಯೂಸ್ ನಡೆಸಿದ ಮಾತುಕತೆ ಇಲ್ಲಿದೆ.

ಪ್ರಶ್ನೆ: ಫೆ.24ರಂದು ನಡೆಯಲಿರುವ ಅತ್ಯಂತ ಮಹತ್ವದ ಪಂದ್ಯಕ್ಕೆ ಯಾವ ರೀತಿಯ ತಯಾರಿ ಮಾಡಿಕೊಂಡಿದ್ದೀರಿ? 
ಉತ್ತರ: ನಾನು 7 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕುಸ್ತಿಗೆ ಮರಳುತ್ತಿದ್ದೇನೆ. ಎದುರಾಳಿ ಪಾಕಿಸ್ತಾನದ ಮೊಹಮ್ಮದ್ ಸಯೀದ್ ಅಮೆಚ್ಯೂರ್ ಕುಸ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯಕ್ಕಾಗಿ ನಾನು ಉತ್ತಮ ತಯಾರಿ ಮಾಡಿದ್ದೇನೆ. ಉಳಿದೆಲ್ಲಾ ದೇವರ ಕೈಯಲ್ಲಿದೆ. ಇದೊಂದು ಉತ್ತಮ ಪಂದ್ಯವಾಗಲಿದೆ. ಪಂದ್ಯದ ಬಳಿಕ ಕೆಲವರು ನನ್ನನ್ನು ಟ್ರೋಲ್ ಮಾಡಬಹುದು. ನಾನು 22-23ರ ಹರೆಯದ ಎದುರಾಳಿ ವಿರುದ್ಧ ಹೋರಾಡುತ್ತಿದ್ದೇನೆ. 40ರ ಹರೆಯಲ್ಲಿ ನಾನು ಮತ್ತೆ ಕುಸ್ತಿ ಅಖಾಡಕ್ಕಿಳಿಯುತ್ತಿದ್ದೇನೆ. ಈ ಮೂಲಕ ನಮ್ಮ ದೇಶದ ಅಸಂಖ್ಯಾತ ಯುವ ಸಮೂಹಕ್ಕೆ ಸ್ಪೂರ್ತಿ ತುಂಬಲು, ಪ್ರೇರಣೆಯಾಗಲು ಸಜ್ಜಾಗಿದ್ದೇನೆ. ಇದು ಒಲಿಂಪಿಕ್ ಶೈಲಿಯ ಕುಸ್ತಿಯಾಗಿರುವ ಕಾರಣ ನಾನು 2 ರಿಂದ  3 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. 3 ನಿಮಿಷಗಳ 2 ಸುತ್ತು ಇರಲಿದೆ. ಒಲಿಂಪಿಕ್ಸ್‌ನಲ್ಲಿ 3 ನಿಮಿಷದ  6 ಸುತ್ತುಗಳು ಇರಲಿದೆ.

ರಾಹುಲ್‌ ಜಿಯು-ಜಿತ್ಸು ಆಟ ನೋಡಿ ಭಜರಂಗ್ ಪೂನಿಯಾ ಶಾಕ್‌! ವಿಡಿಯೋ ವೈರಲ್‌

ಪ್ರಶ್ನೆ: 7 ವರ್ಷಗಳ ಬಳಿಕ ಮತ್ತೆ ಕುಸ್ತಿಂಗ್ ರಿಂಗ್‌ಗೆ ಮರಳಬೇಕು ಎಂದು ಅನಿಸಿದ್ದು ಯಾಕೆ?
ಉತ್ತರ: ಈ ಹಿಂದೆ 96 ಕೆಜಿ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದೆ. ಇದರ ಜೊತೆಗೆ WWE ಹಾಗೂ ವೃತ್ತಿಪರ ಕುಸ್ತಿಯಲ್ಲೂ ಪಾಲ್ಗೊಂಡಿದ್ದೇನೆ. ಈ ಹಿಂದೆ ಕುಸ್ತಿ ಹಾಗೂ ಕ್ರೀಡೆಯಲ್ಲಿ ಹಣ ಇರಲಿಲ್ಲ. ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ವಿಚಾರವಾಗಿತ್ತು. ಜೊತೆಗೆ ಒಂದು ಉದ್ಯೋಗ ಇಷ್ಟೇ ನಮ್ಮ ಗುರಿಯಾಗಿತ್ತು. ಇದೀಗ ರಸ್ಲಿಂಗ್ ಹೊಸ ಆಯಾಮ ಪಡೆದುಕೊಂಡಿದೆ. ಭಾರತದಲ್ಲಿ ರಸ್ಲಿಂಗ್‌ಗೆ ಉತ್ತಮ ಪ್ರಚಾರ ಸಿಗುತ್ತಿದೆ. ಕುಸ್ತಿಪಟುಗಳಿಗೆ ಆದಾಯವೂ ಉತ್ತಮವಾಗಿದೆ. ಇದು ನಮ್ಮ ಸಂಪ್ರದಾಯ. ಇದು ಜಂಟ್ಲಮೆನ್ ಗೇಮ್. ಹೀಗಾಗಿ ನಾನು ಮತ್ತೆ ಕುಸ್ತಿ ಅಖಾಡಕ್ಕೆ ಇಳಿಯುತ್ತಿದ್ದೇನೆ.

ಪ್ರಶ್ನೆ: ಭಾರತದಲ್ಲಿ ಕೆಲ ಕುಸ್ತಿಪಟುಗಳಲ್ಲಿ ಆಕ್ರೋಶವಿದೆ. ಪ್ರತಿಭಟನೆ ನಡೆಸಿದ್ದಾರೆ. ನಿಮ್ಮ ಪಂದ್ಯ ಭಾರತದ ಯುವ ಸಮೂಹಕ್ಕೆ ಪ್ರೇರಣೆಯಾಗುತ್ತಾ?
ಉತ್ತರ: ನನ್ನ ಗುರಿ ವಿಶ್ವ ಕುಸ್ತಿ. ಅಂತಾರಾಷ್ಟ್ರೀಯ ರಸ್ಲಿಂಗ್ ಕುರಿತು ಯುವಕರು ಹೆಚ್ಚು ತಿಳಿದುಕೊಳ್ಳಬೇಕು. ಇತರ ರಾಷ್ಟ್ರಗಳಲ್ಲಿ ಪ್ರತಿ ದಿನ ರಸ್ಲಿಂಗ್ ಗೇಮ್ ನಡೆಯುತ್ತದೆ. ವೃತ್ತಪರ ರಸ್ಲಿಂಗ್ ಸೇರಿದಂತೆ ಹಲವು ಮಾದರಿಗಳಲ್ಲಿ ಪಂದ್ಯ ನಡೆಯುತ್ತದೆ. ಆದರೆ ಭಾರತದಲ್ಲಿ ಬಹುತೇಕರು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯಾಗಲು ಬಯಸುತ್ತಾರೆ. ಇದರ ಜೊತೆಗೆ ರಸ್ಲಿಂಗ್‌ನತ್ತವೂ ಮಕ್ಕಳು ಆಸಕ್ತಿ ವಹಿಸಬೇಕು ಅನ್ನೋದು ನನ್ನ ಆದ್ಯತೆ.

ಬಾಗಲಕೋಟೆ: ಕುಸ್ತಿ ಕಿಂಗ್‌ ದಾವಲ್‌ಸಾಬಗೆ ಬೇಕಿದ ಸರ್ಕಾರ ನೆರವು..!

click me!