ಸೋಂಕಿತರನ್ನು ಪ್ರತ್ಯೇಕಿಸಲು ಸಾಯ್‌ ಕೇಂದ್ರಗಳ ಬಳಕೆ

By Suvarna NewsFirst Published Mar 23, 2020, 12:51 PM IST
Highlights

ಕೊರೋನಾ ಸೋಂಕಿತರನ್ನು ಪ್ರತ್ಯೇಕವಾಗಿಡಲು ಸಾಯ್ ಕೇಂದ್ರಗಳನ್ನು ಬಳಸಿಕೊಳ್ಳಲು ಕ್ರೀಡಾ ಸಚಿವಾಲಯ ತೀರ್ಮಾನಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 

ನವದೆಹಲಿ(ಮಾ.23): ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರಗಳನ್ನು ಕೊರೋನಾ ಸೋಂಕಿತರನ್ನು ಪ್ರತ್ಯೇಕಿಸಿ ಇಡಲು ಬಳಸಿಕೊಳ್ಳಲಾಗುತ್ತದೆ ಎಂದು ಭಾನುವಾರ ಕೇಂದ್ರ ಕ್ರೀಡಾ ಸಚಿವಾಲಯ ತಿಳಿಸಿದೆ. 

ಕೊರೋನಾ ಭೀತಿ ನಡುವೆಯೇ ಹಾಕಿ ತಂಡಗಳ ಅಭ್ಯಾಸ

ಸಾಯ್‌ ಕೇಂದ್ರಗಳನ್ನು ಬಂದ್‌ ಮಾಡಲಾಗಿದ್ದು, ಒಲಿಂಪಿಕ್ಸ್‌ ಸಿದ್ಧತೆ ಹೊರತುಪಡಿಸಿ ಉಳಿದೆಲ್ಲಾ ಶಿಬಿರಗಳನ್ನು ಅಮಾನತುಗೊಳಿಸಲಾಗಿದೆ. ‘ಆರೋಗ್ಯ ಸಚಿವಾಲಯದ ಮನವಿ ಮೇರೆಗೆ ಸಾಯ್‌ ಕೇಂದ್ರಗಳು, ಕ್ರೀಡಾಂಗಣಗಳು ಹಾಗೂ ಹಾಸ್ಟಲ್‌ಗಳನ್ನು ಸೋಂಕಿತರನ್ನು ಪ್ರ್ಯತೇಕಿಸಿಡಲು ಬಳಕೆ ಮಾಡಲಾಗುತ್ತದೆ. ಸೋಂಕಿನ ವಿರುದ್ಧ ಇಡೀ ದೇಶವೇ ಹೋರಾಟ ನಡೆಸುತ್ತಿದ್ದು, ಸಾಯ್‌ ಕೇಂದ್ರಗಳು ಸಾರ್ವಜನಿಕ ಆಸ್ತಿಯಾಗಿರುವ ಕಾರಣ ಅವುಗಳನ್ನೂ ಬಳಕೆ ಮಾಡಲಾಗುತ್ತದೆ’ ಎಂದು ಕ್ರೀಡಾ ಕಾರ್ಯದರ್ಶಿ ರಾಧೆಶ್ಯಾಮ್‌ ಜುಲಾನಿಯಾ ತಿಳಿಸಿದ್ದಾರೆ. 

ಕೊರೋನಾ ವಿರುದ್ಧ ಹೋರಾಟ; ಭಾರತ ಹಾಕಿ ತಂಡದಿಂದ ಕೃತಜ್ಞತೆಯ ಚಪ್ಪಾಳೆ!

ದೇಶದಲ್ಲಿ 10 ಸಾಯ್‌ ಕೇಂದ್ರಗಳಿದ್ದು, ಒಟ್ಟಾರೆ 2000 ಮಂದಿಗೆ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತಿವೆ. 
 

click me!