ಪಿ ವಿ ಸಿಂಧು ಜತೆ ತೆರಳಲು ಫಿಟ್ನೆಸ್‌ ಕೋಚ್‌ಗೆ ಅಸ್ತು...!

By Kannadaprabha News  |  First Published Dec 19, 2020, 3:45 PM IST

ಭಾರತದ ಬ್ಯಾಡ್ಮಿಂಟನ್ ಟೆನಿಸ್ ತಾರೆ ಪಿ.ವಿ. ಸಿಂಧು ಮಾಡಿಕೊಂಡ ಮನವಿಗೆ ಸಾಯ್‌ ಒಪ್ಪಿಗೆ ಸೂಚಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಡಿ.19): ಭಾರತ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಅವರ ಮನವಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಶುಕ್ರವಾರ ಅಂಗೀಕರಿಸಿದೆ. 

2021ರ ಜನವರಿಯಲ್ಲಿ ನಡೆಯಲಿರುವ 3 ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಭಾಗವಹಿಸಲು ತನ್ನೊಂದಿಗೆ ಬರಲು ಫಿಸಿಯೋ ಹಾಗೂ ಫಿಟ್ನೆಸ್‌ ಕೋಚ್‌ಗೆ ಅವಕಾಶ ನೀಡಬೇಕು ಎಂದು ಸಿಂಧು, ಸಾಯ್‌ಗೆ ಮನವಿ ಮಾಡಿಕೊಂಡಿದ್ದರು. ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆ (ಟಾಪ್‌) ಗುಂಪಿನಲ್ಲಿ ಸಿಂಧು ಇರುವ ಕಾರಣದಿಂದ ಅವರ ಮನವಿಯನ್ನು ಸಾಯ್‌ ಪುರಸ್ಕರಿಸಿದೆ.

Tap to resize

Latest Videos

ಜ.12 ರಿಂದ 17 ಯೋನೆಕ್ಸ್‌ ಥಾಯ್ಲೆಂಡ್‌ ಓಪನ್‌, ಜ.19 ರಿಂದ 24 ಟೋಯೋಟಾ ಥಾಯ್ಲೆಂಡ್‌ ಓಪನ್‌ ಹಾಗೂ ಜ.27 ರಿಂದ 31ರವರೆಗೆ ಬ್ಯಾಂಕಾಕ್‌ನಲ್ಲಿ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಗಳು ನಡೆಯಲಿವೆ. ಈ ಮೂರು ಟೂರ್ನಿಗಳಲ್ಲಿ ಸಿಂಧುಗೆ ಪಿಸಿಯೋ ಹಾಗೂ ಫಿಟ್ನೆಸ್‌ ಕೋಚ್‌ ಜೊತೆಯಲ್ಲಿ ತೆರಳಿದರೆ 8.25 ಲಕ್ಷ ರುಪಾಯಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಸಿಂಧು, ಲಂಡನ್‌ನಲ್ಲಿ ಬ್ಯಾಡ್ಮಿಂಟನ್‌ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಆಸ್ಪ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿ 3 ವಾರ ತಡವಾಗಿ ಆರಂಭ

25 ವರ್ಷದ ಪಿ ವಿ ಸಿಂಧು ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಮಾರ್ಚ್‌ನಲ್ಲಿ ಅಲ್ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ ಬಳಿಕ ಕೊರೋನಾ ಭೀತಿಯ ನಡುವೆಯೂ ಜರುಗಿದ ಏಕೈಕ ಬ್ಯಾಡ್ಮಿಂಟನ್ ಟೂರ್ನಿ ಇದು ಎನಿಸಿತ್ತು. 
 

click me!