ಆಸ್ಪ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿ 3 ವಾರ ತಡವಾಗಿ ಆರಂಭ

By Kannadaprabha News  |  First Published Dec 19, 2020, 3:08 PM IST

ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಟೆಸ್ಟ್‌ ಟೂರ್ನಿ ಆರಂಭದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮೂರು ವಾರ ತಡವಾಗಿ ಆರಂಭವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಮೆಲ್ಬರ್ನ್(ಡಿ.19)‌: ಕೊರೋನಾ ಕಾರಣದಿಂದಾಗಿ ಈ ಬಾರಿಯ ಆಸ್ಪ್ರೇಲಿಯನ್‌ ಓಪನ್‌ ನಿಗದಿತ ಸಮಯಕ್ಕಿಂತ 3 ವಾರ ತಡವಾಗಿ ಆರಂಭವಾಗಲಿದ್ದು, ಫೆ.8 ರಿಂದ 2021ರ ಮೊದಲ ಗ್ರ್ಯಾನ್‌ಸ್ಲಾಮ್‌ ನಡೆಸಲು ನಿರ್ಧರಿಸಲಾಗಿದೆ ಎಂದು ಎಟಿಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

7 ವಾರ ಮುಂಚಿತವಾಗಿ ಟೂರ್ನಿ ದಿನಾಂಕವನ್ನು ಪ್ರಕಟಿಸಲಾಗಿದೆ. ಪುರುಷರ ಅರ್ಹತಾ ಸುತ್ತಿನ ಪಂದ್ಯಗಳು ಜ.10 ರಿಂದ 13ರವರೆಗೆ ದೋಹಾದಲ್ಲಿ ನಡೆಯಲಿವೆ. ಪ್ರಮುಖ ಸುತ್ತಿಗೆ ಪ್ರವೇಶಿಸಿದ ಟೆನಿಸಿಗರು ಮೆಲ್ಬರ್ನ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. 

Latest Videos

undefined

ಮೈಕ್ ಟೈಸನ್: ನಿಮಗೆ ಗೊತ್ತಿರದ ಬಾಕ್ಸರ್‌ನ ಡ್ರಗ್ಸ್, ಕ್ರೈಂ, ಸೆಕ್ಸ್ ಕಹಾನಿ

Australian Open 2021 will take place at Melbourne Park from 8 to 21 February.

Tickets will go on sale on Wednesday 23 December. |

— #AusOpen (@AustralianOpen)

ಗ್ರ್ಯಾನ್‌ಸ್ಲಾಮ್‌ ಸಂಬಂಧ ಮೆಲ್ಬರ್ನ್‌ಗೆ ಬರುವ ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಕ್ವಾರಂಟೈನ್‌ ಕಡ್ಡಾಯವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಸ್ಪ್ರೇಲಿಯನ್‌ ಓಪನ್‌ಗೆ ಪೂರ್ವಭಾವಿಯಾಗಿ ಎಟಿಪಿ ಕಪ್‌ ಟೆನಿಸ್‌ ಟೂರ್ನಿಯನ್ನು ನಡೆಸಲಾಗುತ್ತಿದೆ. ಪುರುಷರ ಟೆನಿಸ್‌ ಟೂರ್ನಿ ಇದಾಗಿದ್ದು, ಮೆಲ್ಬರ್ನ್‌ನಲ್ಲಿ ನಡೆಯಲಿದೆ.
 

click me!