
ನವದೆಹಲಿ(ಡಿ.19): ಭಾರತದ ತಾರಾ ಮಹಿಳಾ ಬಾಕ್ಸರ್ ಸಿಮ್ರನ್‌ಜಿತ್ ಕೌರ್, ಜರ್ಮನಿಯ ಕೊಲೋನೆಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ 60 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಸಿಮ್ರನ್‌ಜಿತ್, ಉಕ್ರೇನ್‌ನ ಮರಿಯನ್ನಾ ಬಸಾನೆಟ್ಸ್ ವಿರುದ್ಧ 4-1 ರಿಂದ ಗೆಲುವು ಸಾಧಿಸಿದರು. ಶನಿವಾರ ಫೈನಲ್ ಸ್ಪರ್ಧೆ ನಡೆಯಲಿದೆ. ಪುರುಷರ 91+ ಕೆ.ಜಿ. ವಿಭಾಗದಲ್ಲಿ ಸತೀಶ್ ಕುಮಾರ್, ಮಾಲ್ಡೋವಾದ ಜವಾಂಟಿನ್ ಅಲೆಕ್ಸೆಲ್ ವಿರುದ್ಧ 5-0 ಯಿಂದ ಗೆಲುವು ಪಡೆಯುವ ಮೂಲಕ ಉಪಾಂತ್ಯ ಪ್ರವೇಶಿಸಿ ಪದಕ ಖಚಿತ ಪಡಿಸಿದರು.
ಕ್ರೀಡಾ ಇಲಾಖೆ ಎದುರು ಕೋಚ್ ಸತ್ಯಾಗ್ರಹ
57 ಕೆ.ಜಿ. ವಿಭಾಗದಲ್ಲಿ ಮೊಹಮದ್ ಹುಸಾಮುದ್ದೀನ್, ಜರ್ಮನಿಯ ಉಮರ್ ಬಾಜ್ವಾ ಎದುರು 5-0 ಯಿಂದ ಜಯ ಪಡೆದು ಸೆಮೀಸ್‌ಗೇರಿದ್ದಾರೆ. ಈ ಮೂಲಕ ಭಾರತ ಬಾಕ್ಸಿಂಗ್ ತಂಡ ಪದಕಗಳನ್ನು ಬಾಚಿಕೊಳ್ಳಲು ಸಜ್ಜಾಗಿದೆ. ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಲಂಕಿ 57 ಕೆ.ಜಿ. ವಿಭಾಗದಲ್ಲಿ, ಸ್ಥಳೀಯ ಬಾಕ್ಸರ್ ಮುರತ್ ಯಿಲ್ದಿರಿಮ್ ಎದುರು 3-2 ರಿಂದ ಮಣಿಸಿದರೆ ಕವಿಂದರ್ ಬಿಶ್ತ್, ಫ್ರಾನ್ಸ್‌ನ ಸ್ಯಾಮುಯೆಲ್ ಕಿಸ್ಟೋರೆ ವಿರುದ್ಧ ಗೆದ್ದರು.
75 ಕೆ.ಜಿ. ವಿಭಾಗದ ಕ್ವಾರ್ಟರ್‌ನಲ್ಲಿ ಆಶೀಶ್ ಕುಮಾರ್, ನೆದರ್‌ಲೆಂಡ್‌ನ ಮ್ಯಾಕ್ಸ್ ವೆನ್ ಡರ್ ವಿರುದ್ಧ ಪರಾಭವ ಹೊಂದಿದರು. 52 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಗಲ್ ಫೈನಲ್ ಪ್ರವೇಶಿಸಿದ್ದು ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.