900 ಪೌಂಡ್ ತೂಕ ಎತ್ತುವಾಗ ಮೊಣಕಾಲು ಮುರಿದು ನೆಲಕ್ಕೆ ಕುಸಿದ ಪವರ್ ಲಿಫ್ಟರ್!

By Suvarna NewsFirst Published Aug 14, 2020, 6:13 PM IST
Highlights

ಪ್ರತಿ ಕ್ರೀಡೆಗಳಲ್ಲಿ ಅದರದ್ದೇ ಅಪಾಯವಿದೆ. ಆದರೆ ಬಾಕ್ಸಿಂಗ್, ರಸ್ಲಿಂಗ್, ಪವರ್ ಲಿಫ್ಟಿಂಗ್ ಕ್ರೀಡೆಗಳಲ್ಲಿ ಅಪಾಯದ ಪ್ರಮಾಣ ಹೆಚ್ಚು. ಇದೀಗ 900 ಪೌಂಡ್ ತೂಕ ಎತ್ತುವ ಪ್ರಯತ್ನದಲ್ಲಿದ್ದ ಪವರ್ ಲಿಫ್ಟರ್ ಮೊಣಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.

ರಷ್ಯಾ(ಆ.14): ಪವರ್ ಲಿಫ್ಟಿಂಗ್ ಅಪಾಯಕಾರಿ ಕ್ರೀಡೆ. ಘನ ಘಾತ್ರದ ಭಾರ ಎತ್ತುವ ಈ ಸ್ಪರ್ಧೆಯಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಕತ್ತು, ಸೊಂಟ, ಬೆನ್ನು ಮೂಳೆಗಳೇ ಮುರಿದಿದೆ. ಇದೀಗ ರಷ್ಯಾದ ಪವರ್ ಲಿಫ್ಟರ್ ಅಲೆಕ್ಸಾಂಡರ್ ಸಿದ್ದಿಕ್  ಮೊಣಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.

ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ದಾಖಲೆ; 5 ಚಿನ್ನ ಗೆದ್ದ ಆರತಿ ಅರುಣ್!.

900 ಪೌಂಡ್ ಭಾರ ಎತ್ತುವ ಪ್ರಯತ್ನದಲ್ಲಿದ್ದ ಅಲೆಕ್ಸಾಂಡರ್‌ಗೆ ಆಘಾತ ಕಾದಿತ್ತು ಲಿಫ್ಟ್ ಮಾಡಿ ಪೊಸಿಶನ್ ಬರುವಷ್ಟರಲ್ಲಿ ಅಲೆಕ್ಸಾಂಡರ್‌ ಅತೀಯಾದ ಭಾರದಿಂದ ನೆಲಕ್ಕೆ ಕುಸಿದಿದ್ದಾರೆ. ಈ ವೇಳೆ ಪವರ್ ಲಿಫ್ಟ್ ಸ್ಕಾಟ್‌ನೊಂದಿಗೆ ನೆಲಕ್ಕೆ ಕುಸಿದ ಪರಿಣಾಮ ಎರಡೂ ಮೊಣಕಾಲು ಮುರಿದಿದೆ.

 

Russian powerlifter Alexander Sedykh suffers bilateral "knee fractures" and ruptured quads while attempting a 400 kg (880 lb) squat!

Major surgery followed by major rehab. Hope he recovers well. pic.twitter.com/iK24JWKO8Y

— Timothy Tiu, MD, FAAPMR (@DrTimothyTiu)

ತಕ್ಷಣವೇ ತಜ್ಞ ವೈದ್ಯರ ತಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಸತತ 6 ಗಂಟೆಗಳ ಶಸ್ತ್ರ ಚಿಕಿತ್ಸೆ ಮೂಲಕ ಮುರಿತಕ್ಕೊಳಗಾದ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಮೊಣಕಾಲು ಮುರಿತ ಕಾರಣ ಕನಿಷ್ಠ 2 ತಿಂಗಳು ಅಲುಗಾಡದಂತೆ ಸೂಚಿಸಿದ್ದಾರೆ. ಪತ್ನಿಗೆ ಆಘಾತವಾಗಿದೆ. ಅಭಿಮಾನಿಗಳು, ಕ್ರೀಡಾ ಆಸಕ್ತರು ನೊಂದಿದ್ದಾರೆ. ಇದು ಕೆಟ್ಟ ಸಮಯ ಎಂದು ಅಲೆಕ್ಸಾಂಡರ್ ಸರ್ಜರಿ ಬಳಿಕ ಪ್ರತಿಕ್ರಿಯಿಸಿದ್ದಾರೆ. 

click me!