ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಮತ್ತೊಬ್ಬ ಸ್ಟಾರ್ ಆಟಗಾರ ಹಿಂದೆ ಸರಿದಂತಾಗಿದೆ. ಇನ್ನು ಇದೇ ವೇಳೆ ಭಾರತದ ಯುವ ಟೆನಿಸಿಗ ಸುಮಿತ್ ನಗಾಲ್ ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮ್ಯಾಡ್ರಿಡ್(ಆ.06): ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ರಾಫೆಲ್ ನಡಾಲ್, ಇದೇ 31ರಿಂದ ಆರಂಭಗೊಳ್ಳಲಿರುವ ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
‘ಈ ನಿರ್ಧಾರವನ್ನು ಒಲ್ಲದ ಮನಸಿನಿಂದ ಕೈಗೊಂಡಿದ್ದೇನೆ. ಆರೋಗ್ಯ ದೃಷ್ಟಿಯಿಂದ ಅಮೆರಿಕಕ್ಕೆ ಪ್ರಯಾಣಿಸದೆ ಇರಲು ತೀರ್ಮಾನಿಸಿದ್ದೇನೆ’ ಎಂದು ನಡಾಲ್ ಟ್ವೀಟ್ ಮಾಡಿದ್ದಾರೆ.
undefined
ಯುಎಸ್ ಓಪನ್‌ನಿಂದ ಹಿಂದೆ ಸರಿದ ಆಶ್ಲೆ ಬಾರ್ಟಿ
ಮೆಲ್ಬರ್ನ್: ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಿಂದ ವಿಶ್ವ ನಂ.1 ಆಟಗಾರ್ತಿ, ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಹಿಂದೆ ಸರಿದಿದ್ದಾರೆ. ಆಸ್ಪ್ರೇಲಿಯಾ ಹಾಗೂ ಅಮೆರಿಕದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಸೆ.27ರಿಂದ ಫ್ರೆಂಚ್ ಓಪನ್ ನಡೆಯಲಿದ್ದು, ಆ ಗ್ರ್ಯಾಂಡ್‌ಸ್ಲಾಂನಲ್ಲಿ ಆಡುವ ಬಗ್ಗೆ ಮುಂದಿನ ವಾರ ನಿರ್ಧರಿಸುವುದಾಗಿ ಬಾರ್ಟಿ ಹೇಳಿದ್ದರು. ರೋಜರ್ ಫೆಡರರ್ ಸಹ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈ ಹಿಂದೆಯೇ ತಿಳಿಸಿದ್ದರು.
ಯುಎಸ್ ಓಪನ್: ನೇರ ಪ್ರವೇಶ ಪಡೆದ ಸುಮಿತ್
ನ್ಯೂಯಾರ್ಕ್: ಭಾರತದ ಯುವ ಟೆನಿಸಿಗ ಸುಮಿತ್ ನಗಾಲ್‌ಗೆ ಈ ವರ್ಷದ ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತಿಗೆ ನೇರ ಪ್ರವೇಶ ದೊರಕಿದೆ.
ಜೊಕೋವಿಚ್ ಟೀಕಿಸಬೇಡಿ, ಇದು ನನ್ನ ತಪ್ಪು ಎಂದ ಸರ್ಬಿಯಾ ಪ್ರಧಾನ ಮಂತ್ರಿ!
ಹಲವು ಅಗ್ರ ಶ್ರೇಯಾಂಕಿತ ಆಟಗಾರರು ಟೂರ್ನಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ವಿಶ್ವ ರಾರಯಂಕಿಂಗ್‌ನಲ್ಲಿ 127ನೇ ಸ್ಥಾನ ಹೊಂದಿರುವ ನಗಾಲ್‌ಗೆ ಪ್ರವೇಶ ಸಿಕ್ಕಿದೆ. ಕಳೆದ ವರ್ಷ ನಗಾಲ್ ಪ್ರಧಾನ ಸುತ್ತಿಗೆ ಅರ್ಹತೆ ಪಡೆದು, ರೋಜರ್ ಫೆಡರರ್ ವಿರುದ್ಧ ಸೆಣಸಿದ್ದರು.