ಪ್ಯಾರಿಸ್ ಮಾಸ್ಟರ್ಸ್ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಜೋಡಿ ಆಘಾತಕಾರಿ ಸೋಲು ಕಂಡು ತನ್ನ ಅಭಿಯಾನ ಮುಗಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ನ.08): ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಪ್ರೇಲಿಯಾದ ಒಲಿವರ್ ಜೋಡಿ, ಪ್ಯಾರಿಸ್ ಮಾಸ್ಟರ್ಸ್ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿತು.
ಇಂಡೋ-ಆಸೀಸ್ ಜೋಡಿ, ಆಸ್ಟ್ರಿಯಾದ ಜರ್ಗೆನ್ ಮೆಲ್ಜರ್ ಹಾಗೂ ಫ್ರಾನ್ಸ್‌ನ ಎಡ್ವಡ್ ಜೋಡಿ ವಿರುದ್ಧ 0-6, 6-7(6-8) ಸೆಟ್‌ಗಳಲ್ಲಿ ಪರಾಭವ ಹೊಂದಿತು. ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್, ತಮ್ಮದೇ ರಾಷ್ಟ್ರದ ಪ್ಯಾಬ್ಲೊ ಕರ್ರೆನೊ ಬುಸ್ಟಾಎದುರು 4-6, 7-5, 6-1 ಸೆಟ್‌ಗಳಲ್ಲಿ ಗೆದ್ದು ಸೆಮೀಸ್‌ಗೇರಿದರು.
ಟೆನಿಸ್ ದಿಗ್ಗಜ ಪೀಟ್ ಸಾಂಪ್ರಸ್ ದಾಖಲೆ ಸರಿಗಟ್ಟಿದ ಜೋಕೋವಿಚ್..!
ಈ ಸೋಲಿನೊಂದಿಗೆ ರೋಹನ್ ಬೊಪಣ್ಣ ಹಾಗೂ ಜರ್ಗೆನ್ ಮೆಲ್ಜರ್ ಜೋಡಿ 180 ಎಟಿಪಿ ಅಂಕಗಳನ್ನು ಪಡೆದುಕೊಂಡರು. ಇದರ ಜತೆಗೆ ಇಂಡೋ-ಆಸ್ಟ್ರೀಸ್ ಜೋಡಿ 32,000 ಯೂರೋಪಿಯನ್ ಡಾಲರ್ ಹಣವನ್ನು ಹಂಚಿಕೊಂಡರು.
ಜರ್ಮನಿಯಲ್ಲಿ ನಡೆಯುತ್ತಿರುವ ಎಕೆಂಟಲ್ ಟೆನಿಸ್ ಚಾಲೆಂಜರ್ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಫೈನಲ್ ಪ್ರವೇಶಿಸಿದ್ದಾರೆ. ಸೆಮೀಸ್‌ನಲ್ಲಿ ರಾಮ್‌ಕುಮಾರ್, ಜರ್ಮನಿಯ ಮಾರ್ವಿನ್ ಮೊಲ್ಲೆರ್ ವಿರುದ್ಧ 4-6, 6-1, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.