ಟೆನಿಸ್ ದಿಗ್ಗಜ ಪೀಟ್‌ ಸಾಂಪ್ರಸ್‌ ದಾಖಲೆ ಸರಿಗಟ್ಟಿದ ಜೋಕೋವಿಚ್‌..!

Published : Nov 08, 2020, 09:48 AM IST
ಟೆನಿಸ್ ದಿಗ್ಗಜ ಪೀಟ್‌ ಸಾಂಪ್ರಸ್‌ ದಾಖಲೆ ಸರಿಗಟ್ಟಿದ ಜೋಕೋವಿಚ್‌..!

ಸಾರಾಂಶ

ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೋಕೋವಿಚ್ ತಮ್ಮ ಬಾಲ್ಯದ ಹೀರೋ ಪೀಟ್‌ ಸಾಂಪ್ರಾಸ್‌ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಲಂಡನ್‌(ನ.08): ವಿಶ್ವ ನಂ.1 ಸರ್ಬಿಯಾದ ಟೆನಿಸಿಗ ನೊವಾಕ್‌ ಜೋಕೋವಿಚ್‌, ಟೆನಿಸ್‌ ದಿಗ್ಗಜ ಅಮೆರಿಕದ ಪೀಟ್‌ ಸಾಂಪ್ರಾಸ್‌ ಹೆಸರಿನಲ್ಲಿದ್ದ ದಾಖಲೆಯಲ್ಲಿ ಸರಿಗಟ್ಟಿದ್ದಾರೆ. ವರ್ಷಾಂತ್ಯವನ್ನು ನಂ.1 ಸ್ಥಾನದಲ್ಲಿ ಕೊನೆಗೊಳಿಸುವ ಮೂಲಕ ಜೋಕೋವಿಚ್‌ ಈ ದಾಖಲೆ ಮಾಡಿದ್ದಾರೆ. 

ವರ್ಷಾಂತ್ಯವನ್ನು ನಂ.1 ಸ್ಥಾನದಲ್ಲಿ 6ನೇ ಬಾರಿ ಕೊನೆಗೊಳಿಸಿದ ದಾಖಲೆ ಇಲ್ಲಿಯವರೆಗೂ ಸಾಂಪ್ರಾಸ್‌ ಹೆಸರಿನಲ್ಲಿತ್ತು. ಈ ವರ್ಷವೂ ಸೇರಿ ಜೋಕೋವಿಚ್‌ ಒಟ್ಟು 6ನೇ ಬಾರಿ ವಿಶ್ವ ನಂ.1 ಸ್ಥಾನದಲ್ಲಿ ವರ್ಷವನ್ನು ಕೊನೆಗೊಳಿಸುವುದರಲ್ಲಿದ್ದಾರೆ. ಸ್ಪೇನ್‌ನ ರಾಫೆಲ್‌ ನಡಾಲ್‌, ಮುಂದಿನ ವಾರ ನಡೆಯಲಿರುವ ಸೋಫಿಯಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಜೋಕೋವಿಚ್‌ ನಂ.1ನಲ್ಲಿ ಮುಂದುವರಿಯಲಿದ್ದಾರೆ. 

33 ವರ್ಷದ ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ 2011, 2012, 2014, 2015 ಹಾಗೂ 2018ರಲ್ಲಿ ಜೋಕೋವಿಚ್‌ ನಂ.1 ಸ್ಥಾನದಲ್ಲಿ ವರ್ಷ ಕೊನೆಗೊಳಿಸಿದ್ದರು. ಪೀಟ್ ಸಾಂಪ್ರಾಸ್ ಆಟವನ್ನು ನೋಡುತ್ತಾ ಬೆಳೆದವನು ನಾನು, ಈಗ ಅವರ ದಾಖಲೆಯನ್ನು ಸರಿಗಟ್ಟಿರುವುದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತಿದೆ ಎಂದು ನೊವಾಕ್ ಜೋಕೋವಿಚ್ ಹೇಳಿದ್ದಾರೆ. 

ಪ್ಯಾರಿಸ್‌ ಮಾಸ್ಟರ್ಸ್‌: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್‌

17 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೋವಿಚ್ ಕಳೆದ ಸೆಪ್ಟೆಂಬರ್‌ನಲ್ಲೇ ಸ್ಯಾಂಪ್ರಾಸ್ ಹೆಸರಿನಲ್ಲಿದ್ದ(286 ವಾರಗಳ ಕಾಲ ನಂ.1 ಸ್ಥಾನ) ದಾಖಲೆಯನ್ನು ಹಿಂದಿಕ್ಕಿದ್ದರು ಎನ್ನುವುದು ಮತ್ತೊಂದು ವಿಶೇಷ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಿಂಚಿಂಗ್​: 85 ಪದಕ ತಂದ ಕ್ರೀಡಾಪಟುಗಳು- ಪ್ರಧಾನಿ ಮೋದಿ ವಿಶೇಷ ಭೇಟಿ
ದಸರಾ ಸಂಭ್ರಮ ನಡುವೆ ಮೈಸೂರು ರಾಯಲ್ಸ್ ತಂಡಕ್ಕೆ ಪಿಕ್ಕಲ್‌ಬಾಲ್ ಲೀಗ್ ಮೊದಲ ಟ್ರೋಫಿ ಗರಿ