ಸಿನ್ಸಿ​ನಾಟಿ ಓಪನ್‌: ಮೊದಲ ಸುತ್ತಿನಲ್ಲೇ ಬೋಪ​ಣ್ಣ ಜೋಡಿಗೆ ಸೋಲು

By Suvarna News  |  First Published Aug 25, 2020, 8:53 AM IST

ಸಿನ್ಸಿನಾಟಿ ಓಪನ್‌ ಪುರು​ಷರ ಡಬಲ್ಸ್‌ನಲ್ಲಿ ಕಣ​ಕ್ಕಿ​ಳಿ​ದಿದ್ದ ಬೋಪಣ್ಣ, ಮೊದಲ ಸುತ್ತಿನ ಪಂದ್ಯ​ದಲ್ಲಿ ಸ್ಪೇನ್‌ನ ಮಾರ್ಸೆಲ್‌ ಹಾಗೂ ಅರ್ಜೆಂಟೀ​ನಾದ ಜೆಬ​ಲೊಸ್‌ ಜೋಡಿ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಸೋಲು ಕಂಡರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 


ನ್ಯೂಯಾರ್ಕ್(ಆ.25): 5 ತಿಂಗಳ ಬಳಿಕ ಮೊದಲ ಬಾರಿಗೆ ಸ್ಪರ್ಧಾ​ತ್ಮಕ ಟೆನಿಸ್‌ ಪಂದ್ಯ​ದಲ್ಲಿ ಆಡಿದ ಭಾರ​ತದ ತಾರಾ ಟೆನಿ​ಸಿಗ ರೋಹನ್‌ ಬೋಪಣ್ಣ ಸೋಲು ಅನು​ಭ​ವಿ​ಸಿ​ದ್ದಾರೆ. 

ಕೆನ​ಡಾದ ಡೆನಿಸ್‌ ಶಾಪೊ​ವ​ಲೊವ್‌ ಜೊತೆ ಸಿನ್ಸಿನಾಟಿ ಓಪನ್‌ ಪುರು​ಷರ ಡಬಲ್ಸ್‌ನಲ್ಲಿ ಕಣ​ಕ್ಕಿ​ಳಿ​ದಿದ್ದ ಬೋಪಣ್ಣ, ಮೊದಲ ಸುತ್ತಿನ ಪಂದ್ಯ​ದಲ್ಲಿ ಸ್ಪೇನ್‌ನ ಮಾರ್ಸೆಲ್‌ ಹಾಗೂ ಅರ್ಜೆಂಟೀ​ನಾದ ಜೆಬ​ಲೊಸ್‌ ಜೋಡಿ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಸೋಲು ಕಂಡರು.

Tap to resize

Latest Videos

ಇದು ಮಾರ್ಚ್‌ನಲ್ಲಿ ಕ್ರೋವೇಷಿಯಾ ವಿರದ್ದ ನಡೆದ ಡೇವಿಸ್‌ ಕಪ್ ಬಳಿಕ ರೋಹನ್ ಆಡುತ್ತಿರುವ ಮೊದಲ ಸ್ಫರ್ಧಾತ್ಮಕ ಟೂರ್ನಿ ಇದಾಗಿತ್ತು. ಡೇವಿಸ್ ಕಪ್‌ ಟೂರ್ನಿಯಲ್ಲಿ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರೊಂದಿಗೆ ಬೋಪಣ್ಣ ಕಣಕ್ಕಿಳಿದಿದ್ದರು.  

ಜಾವಲಿನ್ ಪಟು ನೀರಜ್‌ಗಿಲ್ಲ ಖೇಲ್‌ ರತ್ನ: ನೆಟ್ಟಿ​ಗರ ಆಕ್ಷೇಪ..!

ಇದೊಂದು ತುಂಬಾ ಕ್ಲೋಸ್ ಆದ ಮ್ಯಾಚ್ ಆಗಿ ಬದಲಾಯಿತು. ಇಂದಿನ ಪ್ರದರ್ಶನ ನನಗೆ ಸಮಾಧಾನ ನೀಡಿದೆ. ಅದರಲ್ಲೂ 5 ತಿಂಗಳುಗಳ ಬಳಿಕ ನೇರವಾಗಿ ಟೂರ್ನಮೆಂಟ್‌ಗೆ ಬಂದಿದ್ದೆವು. ನಾವು ಒಳ್ಳೆಯ ತಂಡದ ವಿರುದ್ಧ ಉತ್ತಮ ಹೋರಾಟವನ್ನೇ ನೀಡಿದ್ದೇವೆಂದು ಬೋಪಣ್ಣ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

ಆಗಸ್ಟ್ 31ರಿಂದ ನ್ಯೂಯಾರ್ಕ್‌ನಲ್ಲಿ ಯುಎಸ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಆರಂಭ​ಗೊಳ್ಳ​ಲಿದ್ದು, ಈ ಟೂರ್ನಿ ಪೂರ್ವ​ಭಾವಿ ಅಭ್ಯಾಸಕ್ಕಾಗಿ ನಡೆ​ಯುತ್ತಿದೆ.

click me!