ಮೊದಲು ಕೈ ಮಾಡಿದ್ದು ರೆಫ್ರಿ, ಅದಕ್ಕೆ ನಾನು ಕೆನ್ನೆಗೆ ಬಾರಿಸಿದೆ ಎಂದ ಕುಸ್ತಿಪಟು ಸತೇಂದರ್ ಮಲೀಕ್

By Santosh NaikFirst Published May 23, 2022, 8:48 AM IST
Highlights

ಅಂತಾರಾಷ್ಟ್ರೀಯ ರೆಸ್ಲರ್ ಸತೇಂದರ್ ಮಲೀಕ್ ತನ್ನ ಭಾಗದ ಕಥೆಯನ್ನು ಸಂಪೂರ್ಣವಾಗಿ ವಿವರಿಸಿದ ನಂತರ, ಸತೀಂದರ್ ಮಲೀಕ್ ಅವರ ಇಡೀ ಗ್ರಾಮ ಅವರ ಬೆಂಬಲಕ್ಕೆ ನಿಂತಿದೆ. ಮೊದಲು ರೆಫ್ರಿ ತನ್ನ ಕೆನ್ನೆಗೆ ಬಾರಿಸಿದ ಕಾರಣ, ನಾನು ಸಿಟ್ಟಿನಿಂದ ಈ ಕೃತ್ಯ ಮಾಡಿದ್ದೇನೆ ಎಂದು ಮಲೀಕ್ ಹೇಳಿದ್ದಾರೆ. 
 

ನವದೆಹಲಿ(ಮೇ.23): ಕಾಮನ್‌ವೆಲ್ತ್ ಗೇಮ್ಸ್ ಟ್ರಯಲ್ಸ್‌ನಲ್ಲಿ (Commonwealth Games trials) ಅಂತಾರಾಷ್ಟ್ರೀಯ ರೆಫರಿ ಜಗ್ಬೀರ್ ಸಿಂಗ್ (Jagbir Singh) ಅವರ ಕೆನ್ನೆಗೆ ಬಾರಿಸಿದ್ದಕ್ಕಾಗಿ ಭಾರತೀಯ ಕುಸ್ತಿಪಟು ಸತೇಂದರ್ ಮಲೀಕ್ (Indian wrestler Satender Malik ), ಮೇ 19 ರಂದು ಆಜೀವ ನಿಷೇಧ ಪಡೆದುಕೊಂಡಿದ್ದರು. ಇದಾದ ಮೂರು ದಿನಗಳ ಬಳಿಕ ಮಾತನಾಡಿರುವ ಸತೇಂದರ್ ಮಲೀಕ್ ತನ್ನ ಭಾಗದ ಕಥೆಯನ್ನೂ ವಿವರಿಸಿದ್ದು, ಮೊದಲು ರೆಫ್ರಿ ತನ್ನ ಕೆನ್ನೆಗೆ ಬಾರಿಸಿದ ಕಾರಣ, ನಾನು ಸಿಟ್ಟಿನಿಂದ ಈ ಕೃತ್ಯ ಮಾಡಿದ್ದೇನೆ ಎಂದು  ಹೇಳಿದ್ದಾರೆ. 

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Wrestling Federation of India (WFI) president Brij Bhushan Sharan Singh) ಅವರ ಸಮ್ಮುಖದಲ್ಲಿ ಈ ಘಟನೆ ನಡೆದಿತ್ತು.ರೆಫ್ರಿ ಜಗ್ಬೀರ್ ತನಗೆ ಮೊದಲು ಕಪಾಳಮೋಕ್ಷ ಮಾಡಿ ಪ್ರಚೋದನೆ ನೀಡಿದ್ದ ಎಂದು ಕುಸ್ತಿಪಟು ಹೇಳಿಕೊಂಡಿದ್ದಾರೆ. ಘಟನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ರೆಫರಿ ಮೊದಲು ಕೈ ಎತ್ತಿರುವುದು ಈ ವಿಡಿಯೋದಲ್ಲಿ ಕಾಣಿಸಿದೆ.

ಕುಸ್ತಿಪಟು ತನ್ನ ಭಾಗದ ಕಥೆಯನ್ನು ಸ್ಥಳೀಯ ಪಂಚಾಯತ್‌ಗೆ (panchayat ) ವಿವರಿಸಿ ಸಾಕ್ಷ್ಯವನ್ನು ತೋರಿಸಿದ ನಂತರ ಹರಿಯಾಣದ ಸತೇಂದರ್‌ನ ಇಡೀ ಹಳ್ಳಿಯು ಕುಸ್ತಿಪಟು ಬೆಂಬಲಕ್ಕೆ ನಿಂತಿದೆ.

"ಪಂಚಾಯತ್ ಸದಸ್ಯರು ಸೋಮವಾರ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಭೇಟಿ ಮಾಡಿ ಆಜೀವ ನಿಷೇಧವನ್ನು ಹಿಂತೆಗೆದುಕೊಳ್ಳಲು ಮನವಿ ಮಾಡಲಿದ್ದಾರೆ. ನನ್ನ ಜೀವನ ನಾಶವಾಗಿದೆ. ಏನಾಯಿತು ಎಂದು ನಾನು ನಿಮಗೆ ಹೇಳುತ್ತೇನೆ, ನಾನು ರೆಫರಿಯ ಬಳಿಗೆ ಹೋಗಿ ಅವರ ಕಿವಿಯಲ್ಲಿ 'ತನ್ನೆ ಕೆ ಮಿಲ್ ಗಯಾ ಮಹರಿ ಜಿಂದಗಿ ಖರಾಬ್ ಕರ್ಕೆ (ನನ್ನ ಜೀವನವನ್ನು ಹಾಳುಮಾಡಿದ ನಂತರ ನೀವು ಏನು ಸಾಧಿಸಿದ್ದೀರಿ?)' ಎಂದು ಹೇಳಿದೆ. ಸಿಟ್ಟಿಗೆದ್ದ ಅವರು ನನಗೆ ಕಪಾಳಮೋಕ್ಷ ಮಾಡಿದ್ದು, ವಿಡಿಯೋದಲ್ಲಿ ನೀವೂ ನೋಡಬಹುದು. ಅವನು ಮೊದಲು ನನಗೆ ಕಪಾಳಮೋಕ್ಷ ಮಾಡಿದ. ನಾನು ಯಾವತ್ತೂ ಅವನನ್ನು ನಿಂದಿಸಿಲ್ಲ ಅಥವಾ ಅವನಿಗೆ ತಪ್ಪು ಹೇಳಿಲ್ಲ' ಎಂದು ಸತೇಂದರ್ ಹೇಳಿದ್ದಾರೆ.

ಸತೇಂದರ್ ಅವರು ಟ್ವಿಟರ್‌ನಲ್ಲಿ ಘಟನೆಯ ವೀಡಿಯೊವನ್ನು ಕೂಡ ಅಪ್‌ಲೋಡ್ ಮಾಡಿದ್ದಾರೆ ಮತ್ತು ತಮ್ಮ ವೃತ್ತಿಜೀವನವನ್ನು ಉಳಿಸಲು ಸಹಾಯ ಮಾಡುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

माननीय श्री जी बहुत उम्मीद के साथ आपको दोबारा ट्वीट कर रहा हूँ एक खिलाड़ी होने के नाते ओर एक देश का सैनिक होने के नाते मुझे न्याय दिलवाए ताकि मेरा विश्वास आपमें ओर देश के क़ानून में बना रहे मैं समझता हूँ आपको पूरा देश देखना हैं पर मेरी भी जीवनभर की मेहनत का सवाल है pic.twitter.com/WDXaeUXZj4

— Satender Malik (@SatenderMalik22)

Latest Videos


ಟ್ರಯಲ್ಸ್‌ನ ಸಮಯದಲ್ಲಿ, ಸತೇಂದರ್ ನಿರ್ಣಾಯಕ ಪಂದ್ಯದಲ್ಲಿ 3-0 ಮುನ್ನಡೆಯಲ್ಲಿದ್ದರು, ಅವರ ಎದುರಾಳಿ ಮೋಹಿತ್ ಅವರು 'ಟೇಕ್-ಡೌನ್' ನಡೆಯನ್ನು ಪ್ರಭಾವಿಸಿದರು ಮತ್ತು ಸತೇಂದರ್ ಅವರನ್ನು ಮತ್ತೊಂದು ಪಾಯಿಂಟ್‌ಗೆ ಮ್ಯಾಟ್‌ನಿಂದ ಹೊರಗೆ ತಳ್ಳಿದರು. ಈ ವೇಳೆ ಮ್ಯಾಚ್ ರೆಫ್ರಿ, ವೀರೇಂದ್ರ ಮಲಿಕ್, ಮೋಹಿತ್‌ಗೆ "ಟೇಕ್ ಡೌನ್' ಕ್ರಮಕ್ಕಾಗಿ ಎರಡು ಅಂಕಗಳನ್ನು ನೀಡಲಿಲ್ಲ ಮತ್ತು ಪುಶ್‌ಔಟ್‌ಗೆ ಕೇವಲ ಒಂದು ಅಂಕವನ್ನು ನೀಡಿದರು.

IPL 2022 ಗೆಲುವಿನೊಂದಿಗೆ ಪಂಜಾಬ್ ವಿದಾಯ, 8ನೇ ಸ್ಥಾನಕ್ಕೆ ತೃಪ್ತಿಪಟ್ಟ ಹೈದರಾಬಾದ್!

ನಂತರ ಮೋಹಿತ್ ರೆಫ್ರಿ ನಿರ್ಧಾರವನ್ನು ಪ್ರಶ್ನಿಸಿದರು ಮತ್ತು ಹಿರಿಯ ರೆಫರಿ ಜಗ್ಬೀರ್ ಸಿಂಗ್, ವೀಡಿಯೊ ರಿಪ್ಲೇಗಳನ್ನು ಪರಿಶೀಲನೆ ಮಾಡಿ ಮೋಹಿತ್‌ಗೆ 3 ಅಂಕಗಳನ್ನು ನೀಡಬೇಕೆಂದು ತೀರ್ಪು ನೀಡಿದರು. ಸ್ಕೋರ್ ಇದರಿಂದ 3-3ರಲ್ಲಿ ಸಮಗೊಂಡಿತು ಕೊನೆಯವರೆಗೂ ಇದು ಹಾಗೆಯೇ ಉಳಿದಿತ್ತು. ಮೋಹಿತ್ ಪಂದ್ಯದ ಕೊನೆಯ ಪಾಯಿಂಟ್ ಗಳಿಸಿದ್ದರಿಂದ ಅವರನ್ನು ವಿಜೇತ ಎಂದು ಘೋಷಿಸಲಾಯಿತು.

RCB Playoff ಧನ್ಯವಾದ ಮುಂಬೈ, ಈ ಉಪಕಾರ ಮರೆಯಲ್ಲ ಎಂದ ಕೊಹ್ಲಿ ಅಂಡ್ ಬಾಯ್ಸ್!

ನಂತರ ಸತೇಂದರ್ ಮ್ಯಾಟ್ ನ ಆ ಕಡೆ ಸಾಗಿ ಜಗಬೀರ್‌ನ ಬಳಿಕ ನಡೆದು ಕಪಾಳಮೋಕ್ಷ ಮಾಡಿದ್ದರು. ಈ ಕಾರಣಕ್ಕಾಗಿ ಡಬ್ಲ್ಯುಎಫ್‌ಐ ಅಧಿಕಾರಿಗಳು ಸತೇಂದರ್‌ನ ಮೇಲೆ ಆಜೀವ ನಿಷೇಧ ವಿಧಿಸಿದ್ದಾರೆ. ಆದರೆ, ಕುಸ್ತಿ ಒಕ್ಕೂಟದ ಈ ನಿರ್ಧಾರ ಬಳಿಕ, ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ರೆಫ್ರಿ ಜಗ್ಬೀರ್ ಅವರೇ ಮೊದಲು ರೆಸ್ಲರ್ ಮೇಲೆ ಕೈ ಮಾಡಿದ್ದನ್ನು ಕಾಣಬಹುದಾಗಿದೆ.

 

 

click me!