ಇಸ್ತಾಂಬುಲ್(ಟರ್ಕಿ)ಮೇ.19): ಭಾರತದ ನಿಖಾತ್ ಜರೀನ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಗುರುವಾರ ನಡೆದ ಮಹಿಳೆಯರ 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ನಿಖಾತ್, ಥಾಯ್ಲೆಂಡ್‌ನ ಜಿಟ್ಪೊಂಗ್ ಜುಟ್ಮಾಸ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ತಲಾ 3 ನಿಮಿಷಗಳ ಮೂರು ಸುತ್ತುಗಳಲ್ಲಿ ನಿಖಾತ್ ಪ್ರಾಬಲ್ಯ ಮೆರೆದರು. ಮೂರು ಸುತ್ತುಗಳಲ್ಲಿ ಎಲ್ಲಾ 5 ತೀರ್ಪುಗಾರರು ಭಾರತೀಯ ಬಾಕ್ಸರ್ ಪರ ಹೆಚ್ಚು ಅಂಕಗಳನ್ನು ನೀಡಿದರು. ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಹೈದರಾಬಾದ್ ಮೂಲದ ಬಾಕ್ಸರ್ 5-0 ಅಂತರದಲ್ಲಿ ಗೆದ್ದಿದ್ದು ವಿಶೇಷ.
5ನೇ ಬಾಕ್ಸರ್: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ 5ನೇ ಮಹಿಳಾ ಬಾಕ್ಸರ್ ಎನ್ನುವ ಹಿರಿಮೆಗೆ ನಿಖಾತ್ ಪಾತ್ರರಾಗಿದ್ದಾರೆ. ದಿಗ್ಗಜ ಬಾಕ್ಸರ್ ಮೇರಿ ಕೋಮ್ 6 ಬಾರಿ ಚಾಂಪಿಯನ್(2002, 2005, 2006, 2008, 2010, 2018) ಆಗಿದ್ದರು. ಇನ್ನು ಸರಿತಾ ದೇವಿ(2005), ಜಿನ್ನಿ ಆರ್.ಎಲ್(2006), ಲೇಖಾ ಸಿ(2006) ಸಹ ಚಿನ್ನ ಜಯಿಸಿದ್ದರು.
undefined
World Boxing Championships ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಆಕಾಶ್ ಕುಮಾರ್‌ಗೆ ಒಲಿದ ಕಂಚು
ಕಿರಿಯರ ವಿಶ್ವ ಕೂಟದಲ್ಲೂ ಚಿನ್ನ ಗೆದ್ದಿದ್ದ ಜರೀನ್
25 ವರ್ಷದ ನಿಖಾತ್ ಜರೀನ್ 2011ರಲ್ಲಿ ಕಿರಿಯವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಅಲ್ಲದೇ ಪ್ರತಿಷ್ಠಿತ ಸ್ಟ್ರಾಂಡಾ ಸ್ಮರಣಾರ್ಥ ಟೂರ್ನಿಯಲ್ಲಿ 2 ಬಾರಿ ಚಿನ್ನ (2019, 2022) ಗೆದ್ದ ಭಾರತದ ಮೊದಲ ಬಾಕ್ಸರ್ ಎನ್ನುವ ದಾಖಲೆಯನ್ನೂ ಹೊಂದಿದ್ದಾರೆ. 2019ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಅವರು, ಇಂಡಿಯಾ ಓಪನ್, ಥಾಯ್ಲೆಂಡ್ ಓಪನ್ ಸೇರಿದಂತೆ ಹಲವು ಜನಪ್ರಿಯ ಟೂರ್ನಿಗಳಲ್ಲಿ ಪದಕ ಜಯಿಸಿದ್ದಾರೆ.
ತಂದೆಯೇ ಮೊದಲ ಗುರು!
ಹೈದರಾಬಾದ್‌ನ ನಿಖಾತ್‌ಗೆ ತಂದೆ ಮೊಹಮದ್ ಜಮೀಲ್ ಅವರೇ ಮೊದಲ ಬಾಕ್ಸಿಂಗ್ ಗುರು. ಅವರ ಮಾರ್ಗದರ್ಶನದಲ್ಲಿ ಒಂದು ವರ್ಷ ತರಬೇತಿ ಪಡೆದ ನಿಖಾತ್, 2009ರಲ್ಲಿ ವಿಶಾಖಪಟ್ಟಣದ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ಗೆ ಸೇರ್ಪಡೆಗೊಂಡು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಐ.ವಿ.ರಾವ್ ಅವರ ಬಳಿ ತರಬೇತಿ ಪಡೆದರು.
ಕಂಚು ಗೆದ್ದಿದ್ದು ಲೊವ್ಲಿನಾ, ಬ್ಯಾನರಲ್ಲಿ ಸಿಎಂ ಫೋಟೋ ಯಾಕಪ್ಪಾ'?
ಮೇರಿಗೆ ಸವಾಲು ಹಾಕಿದ್ದ ನಿಖಾತ್!
ಟೋಕಿಯೋ ಒಲಿಂಪಿಕ್ಸ್‌ನ ಫ್ಲೈ ವೇಟ್(48ರಿಂದ 51 ಕೆ.ಜಿ. ವಿಭಾಗ) ಅರ್ಹತಾ ಟೂರ್ನಿಗೆ ಭಾರತೀಯ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ) ಮೇರಿ ಕೋಮ್‌ರನ್ನು ನೇರವಾಗಿ ಆಯ್ಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಿಖಾತ್, ಆಗಿನ ಕ್ರೀಡಾ ಸಚಿವ ಕಿರಣ್ ರಿಜಿಜುಗೆ ಪತ್ರ ಬರೆದು ತಮಗೂ ಅವಕಾಶ ಸಿಗಬೇಕು ಎಂದು ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಟ್ರಯಲ್ಸ್‌ನಲ್ಲಿ ಮೇರಿ 9-1ರಲ್ಲಿ ನಿಖಾತ್‌ರನ್ನು ಸೋಲಿಸಿ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಆಯ್ಕೆಯಾಗಿದ್ದರು.
ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ನಿಖಾತ್, ಬ್ರೆಜಿಲ್‌ನ ಕ್ಯಾರೊಲೈನ್ ಡೆ ಅಲ್ಮೆಡಾ ವಿರುದ್ಧ 5-0 ಅಂತರದಲ್ಲಿ ಗೆದ್ದು ಸಂಭ್ರಮಿಸಿದರು. ಮಾಜಿ ಕಿರಿಯರ ವಿಶ್ವ ಚಾಂಪಿಯನ್ ಆಗಿರುವ ಹೈದರಾಬಾದ್ ಮೂಲದ ಜರೀನ್, ಹಿರಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಭಾರತದ 5ನೇ ಬಾಕ್ಸರ್ ಎನಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. 6 ಬಾರಿ ಚಾಂಪಿಯನ್ ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್.ಎಲ್. ಮತ್ತು ಲೇಖಾ ಸಿ. ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ಇನ್ನು ಮನೀಶಾ, ಟೋಕಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಇಟಲಿಯ ಇರ್ಮಾ ಟೆಸ್ಟಾವಿರುದ್ಧ 0-5ರಲ್ಲಿ ಸೋತರೆ, ಪವೀರ್‍ನ್ ಐರ್ಲೆಂಡ್‌ನ ಏಮಿ ಬ್ರಾಡ್‌ಹಸ್ಟ್‌ರ್ ವಿರುದ್ಧ 1-4ರಲ್ಲಿ ಪರಾಭವಗೊಂಡರು.