Pro kabaddi League ದಾಖಲೆ ಮೊತ್ತಕ್ಕೆ ಹರಾಜಾದ ಮನಿಂದರ್ ಸಿಂಗ್, ಮೊಹಮ್ಮದ್‌ರೆಜಾ!

By Suvarna News  |  First Published Oct 9, 2023, 10:30 PM IST

ಪ್ರೊ ಕಬಡ್ಡಿ ಲೀಗ್ ಟೂರ್ನಿ ಹರಾಜಿನ ಮೊದಲ ದಿನ ಕೆಲ ದಾಖಲೆ ನಿರ್ಮಾಣವಾಗಿದೆ. ಇರಾನ್ ಆಲ್ರೌಂಡರ್ ಮೊಹಮ್ಮದ್‌ರೆಜಾ ಹಾಗೂ ಫಜಲ್ ಅತ್ರಾಚಲಿ ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ಇತ್ತ ಭಾರತೀಯ ಆಟಗಾರರು ಕೋಟಿ ಕೋಟಿ ರೂಗೆ ಮಾರಾಟವಾಗಿದ್ದಾರೆ.


ಮುಂಬೈ(ಅ.09) ಹತ್ತನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಹರಾಜಿನ ಮೊದಲ ದಿನವೇ ದಾಖಲೆ ನಿರ್ಮಾಣವಾಗಿದೆ. ಭಾರತೀಯ ಆಟಗಾರರ ಪೈಕಿ ಮನಿಂದರ್ ಸಿಂಗ್ ಬರೋಬ್ಬರಿ 2.12 ಕೋಟಿ ರೂಗೆ ಹರಾಜಾಗಿದ್ದಾರೆ. ಬೆಂಗಾಲ್ ವಾರಿಯರ್ಸ್ ದಾಖಲೆ ಮೊತ್ತ ನೀಡಿ ಮನಿಂದರ್ ಸಿಂಗ್ ಖರೀದಿಸಿದೆ. ಇನ್ನು ಮೊದಲ ದಿನದ ಗರಿಷ್ಠ ಮೊತ್ತಕ್ಕೆ ಹರಾಜಾದ ಹೆಗ್ಗಳಿಕೆಗೆ ಇರಾನ್ ಆಲ್ರೌಂಡರ್ ಮಹೊಮ್ಮದ್‌ರೆಜಾ ಶಡೊಲೂಯಿ ಚಿಯಾನೆ ಪಾತ್ರರಾಗಿದ್ದಾರೆ. ಮೊಹಮ್ಮದ್‌ರೆಜಾ 2.35 ಕೋಟಿ ರೂಪಾಯಿಗೆ ಪುಣೇರಿ ಪಲ್ಟಾನ್ ಪಾಲಾಗಿದ್ದಾರೆ. 

ಬೆಂಗಳೂರು ಬುಲ್ಸ್ 20 ಲಕ್ಷ ರೂಪಾಯಿ ನೀಡಿ ಕಬಡ್ಡಿ ಪಟು ವಿಶಾಲ್ ಖರೀದಿಸಿದೆ. ಸಂದೀಪ್ ನರ್ವಾಲ್, ದೀಪಕ್ ನಿವಾಸ್ ಹೂಡ ಸೇರಿದಂತೆ ಕೆಲ ಪ್ರಮುಖ ಕಬಡ್ಡಿ ಪಟುಗಳು ಮಾರಾಟವಾಗದೆ ನಿರಾಸೆಗೊಂಡಿದ್ದಾರೆ.

Tap to resize

Latest Videos

undefined

Asian Games 2023: ಕಬಡ್ಡಿಯಲ್ಲಿ ಭಾರತೀಯರ ಸ್ವರ್ಣ ಸಾಧನೆ.! ರಣರಂಗವಾದ ಕಬಡ್ಡಿ ಅಂಕಣ! ನಿಯಮದಲ್ಲಿ ಏನಿದೆ? 

ಎ ಕೆಟಗರಿ ಕಬಡ್ಡಿಪಟುಗಳ ಹರಾಜು ವಿವರ
ಮೊಹಮ್ಮದ್‌ರೆಜಾ ಶಾಡೂಲಿಯಿ ಚಿಯಾನೆ: 2.35 ಕೋಟಿ ರೂಪಾಯಿ(ಪುಣೇರಿ ಪಲ್ಟಾನ್)
ಫಜಲ್ ಅತ್ರಾಚಲಿ: 1.60 ಕೋಟಿ ರೂಪಾಯಿ(ಗುಜರಾತ್ ಜೈಂಟ್ಸ್)
ರೋಹಿತ್ ಗುಲಿಯಾ: 58. 50 ಲಕ್ಷ ರೂಪಾಯಿ( ಗುಜರಾತ್ ಜೈಂಟ್ಸ್)
ವಿಜಯ್ ಮಲಿಕ್: 85 ಲಕ್ಷ ರೂಪಾಯಿ( ಯುಪಿ ಯೋಧಾಸ್)
ಮನಿಂದರ್ ಸಿಂಗ್: 2.12 ಕೋಟಿ ರೂಪಾಯಿ(ಬೆಂಗಾಲ್ ವಾರಿಯರ್ಸ್)
ಮಂಜೀತ್: 92 ಲಕ್ಷ ರೂಪಾಯಿ( ಪಾಟ್ನಾ ಪೈರೇಟ್ಸ್) 

10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ ಟೂರ್ನಿ ವೇಳಾಪಟ್ಟಿ ಪ್ರಕಟ..! ಯಾವಾಗಿಂದ ಆರಂಭ?

ಬಿ ಕೆಟಗರಿ ಕಬಡ್ಡಿ ಪಟುಗಳು ಹರಾಜು ವಿವರ
ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್: 22 ಲಕ್ಷ ರೂಪಾಯಿ(ಗುಜರಾತ್ ಜೈಂಟ್ಸ್)
ಅರ್ಕಾಮ್ ಶೇಕ್: 20.25 ಲಕ್ಷ ರೂಪಾಯಿ (ಗುಜರಾತ್ ಜೈಂಟ್ಸ್)
ನಿತಿನ್ ರಾವಲ್: 30 ಲಕ್ಷ ರೂಪಾಯಿ(ಬೆಂಗಾಲ್ ವಾರಿಯರ್ಸ್)
ಗಿರೀಶ್ ಎರ್ನಾಕ್: 20 ಲಕ್ಷ ರೂಪಾಯಿ(ಯು ಮುಂಬಾ)
ಮಹೇಂದರ್ ಸಿಂಗ್: 40.25 ಲಕ್ಷ ರೂಪಾಯಿ(ಯು ಮುಂಬಾ) 
ಶುಭಮ್ ಶಿಂದೆ: 32.25 ಲಕ್ಷ ರೂಪಾಯಿ(ಬೆಂಗಾಲ್ ವಾರಿಯರ್ಸ್)
ಸೊಂಬೀರ್: 26.25 ಲಕ್ಷ ರೂಪಾಯಿ(ಗುಜರಾತ್ ಜೈಂಟ್ಸ್)
ವಿಶಾಲ್: 20 ಲಕ್ಷ ರೂಪಾಯಿ(ಬೆಂಗಳೂರು ಬುಲ್ಸ್)
ಸುನಿಲ್: 20 ಲಕ್ಷ ರೂಪಾಯಿ(ದಬಾಂಗ್ ಡೆಲ್ಲಿ)
 
ಎರಡು ದಿನಗಳ ಕಾಲ ಪ್ರೊ ಕಬಡ್ಡಿ ಲೀಗ್ ಟೂರ್ನಿ ಹರಾಜು ನಡೆಯಲಿದೆ. ಈ ಬಾರಿ ಎಲ್ಲಾ 12 ತಂಡಗಳಿಗೂ ಹರಾಜಿನಲ್ಲಿ ಆಟಗಾರರ ಖರೀದಿಗೆ 5 ಕೋಟಿ ರೂಪಾಯಿ ಬಳಸಲು ಅವಕಾಶ ನೀಡಲಾಗಿದೆ. ಸದ್ಯ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದು, ಇನ್ನುಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ.  

click me!