ಮಂಗಳಮುಖಿಯಿಂದ ನನ್ನ ಪದಕ ಮಿಸ್, ನಂದಿನಿ ವಿರುದ್ದ ಸಪ್ನಾ ಬರ್ಮನ್ ವಿವಾದದ ಕಿಡಿ!

By Suvarna News  |  First Published Oct 2, 2023, 1:33 PM IST

ಹೆಪ್ಟಾಥ್ಲಾನ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಸ್ನಪ್ನಾ ಬರ್ಮನ್ ನಿರಾಸೆಗೊಂಡಿದ್ದಾರೆ. 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಬೆನ್ನಲ್ಲೇ ವಿವಾದದ ಕಿಡಿ ಹೊತ್ತಿಸಿದ್ದಾರೆ. ನಾನು ಪದಕ ವಂಚಿತಳಾಗಲು ಕಂಚಿನ ಪದಕ ಗೆದ್ದ ಮಂಗಳಮುಖಿ ನಂದಿನಿ ಕಾರಣ ಎಂದು ಭಾರಿ ವಿವಾದ ಸೃಷ್ಟಿಸಿದ್ದಾರೆ.


ಹಾಂಗ್‌ಝೋ(ಅ.02) ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಆದರೆ ಭವಸೆ ಇಟ್ಟಿದ್ದ ಕೆಲ ಕ್ರೀಡಾಪಟುಗಳು ಪದಕ ಕೈವಶ ಮಾಡಲು ವಿಫಲರಾಗಿದ್ದಾರೆ. ಈ ಪೈಕಿ ಹೆಪ್ಟಾಥ್ಲಾನ್‌ನಲ್ಲಿ  ಡಿಫೆಂಡಿಂಗ್ ಚಾಂಪಿಯನ್ ಆಗಿದ್ದ ಸಪ್ನಾ ಬರ್ಮನ್‌ ಈ ಬಾರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕೇವಲ 4 ಅಂಕಗಳಿಂದ ಕಂಚಿನ ಪದಕ ಮಿಸ್ ಮಾಡಿಕೊಂಡಿದ್ದಾರೆ. ಇತ್ತ ಭಾರತದ ಮತ್ತೊರ್ವ ಕ್ರೀಡಾಪಟು ನಂದಿನಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಪದಕ ಕೈತಪ್ಪಿದ ಬೆನ್ನಲ್ಲೇ ಸಪ್ನಾ ಬರ್ಮನ್ ಭಾರಿ ಆಕ್ರೋಶ ಹೊರಹಾಕಿದ್ದಾರೆ. ನನಗೆ ಪದಕ ಕೈತಪಲು ಮಂಗಳಮುಖಿ ನಂದಿನಿ ಅಗಸರ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಆದರೆ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸಪ್ನಾ ಬರ್ಮನ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

2018ರ ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್‌ನಲ್ಲಿ  ಸಪ್ನಾ ಬರ್ಮನ್ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ  ಸಪ್ನಾ ಬರ್ಮನ್ ಕನಿಷ್ಠ ಕಂಚಿನ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಇದು ಸಪ್ನಾ ಬರ್ಮನ್ ಆಕ್ರೋಶಕ್ಕೆ ಕಾರಣವಾಗಿದೆ. ಸಪ್ನಾಗೆ ತೀವ್ರ ಪ್ರತಿಸ್ಪರ್ದೆ ಒಡ್ಡಿದ ನಂದಿನಿ ಅಗಸರ ಕೇವಲ ನಾಲ್ಕೇ ನಾಲು ಅಂಕಗಳಿಂದ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಳೆದ ಬಾರಿ ಚಿನ್ನದ ಪದಕದೊಂದಿಗೆ ಭಾರತಕ್ಕೆ ಮರಳಿದ ಸಪ್ನಾ ಬರ್ಮನ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಸರ್ಕಾರಗಳು ಬಹುಮಾನ ಮೊತ್ತ ಕೂಡ ಘೋಷಣೆ ಮಾಡಿತ್ತು. ಆದರೆ ಈ ಬಾರಿ ಖಾಲಿ ಕೈಯೊಂದಿಗೆ ತವರಿಗೆ ಮರಳಿದ ಸಪ್ನಾ ಬರ್ಮನ್‌ಗೆ ನಿರಾಸೆಯಾಗಿದೆ.ಇದು ಸಪ್ನಾ ಬರ್ಮನ್ ಆಕ್ರೋಶಕ್ಕೆ ಕಾರಣವಾಗಿದೆ.

Tap to resize

Latest Videos

undefined

Asian Games 2023: ಗಾಲ್ಫ್‌ನಲ್ಲಿ ಪದಕ ಗೆದ್ದ ದೇಶದ ಮೊದಲ ಆಟಗಾರ್ತಿ ಬೆಂಗಳೂರಿನ ಅದಿತಿ ಅಶೋಕ್

ತವರಿಗೆ ಮರಳಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಏಷ್ಯನ್ ಗೇಮ್ಸ್ 2023ರಲ್ಲಿ ನನಗೆ ಕಂಚಿನ ಪದಕವನ್ನು ಮಂಗಳಮುಖಿ ನಂದಿನಿ ಕಾರಣದಿಂದ ಕೈತಪ್ಪಿದೆ. ನನ್ನ ಕಂಚಿನ ಪದಕ ನನಗೆ ಬೇಕು. ಮಂಗಳಮುಖಿಯನ್ನು ಮಹಿಳೆಯ ವಿಭಾಗದಲ್ಲಿ ಸ್ಪರ್ದಿಸಲು ಅವಕಾಶ ಮಾಡಿಕೊಟ್ಟಿದ್ದು ನಿಯಮಕ್ಕೆ ವಿರುದ್ಧಾಗಿದೆ. ಎಲ್ಲರೂ ನನಗೆ ಬೆಂಬಲ ನೀಡಿ, ಸಹಾಯ ಮಾಡಿ ಎಂಜು ಎಕ್ಸ್ ಮೂಲಕ ಟ್ವೀಟ್ ಮಾಡಿದ್ದರು.

ಸಪ್ನ ಬರ್ಮನ್ ಟ್ವೀಟ್ ಭಾರಿ ಕೋಲಾಹಲ ಸೃಷ್ಟಿಸಿತ್ತು. ಅಥ್ಲೆಟಿಕ್ಸ್ ಫೆಡರೇಶನ್ ವಿರುದ್ಧವೇ ಸಪ್ನಾ ಸಿಡಿದೆದ್ದಿದ್ದರು. ಆದರೆ ವಿವಾದ ಹೆಚ್ಚಾಗುತ್ತಿದ್ದಂತೆ ಸಪ್ನಾ ಬರ್ಮನ್ ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಡಿಲೀಟ್ ಮಾಡಿ ಸೈಲೆಂಟ್ ಆಗಿದ್ದಾರೆ.

Asian Games 2023: ಸ್ಕ್ವಾಶ್‌, ಟೆನಿಸ್‌ನಲ್ಲಿ ಭಾರತಕ್ಕೆ ಬಂಗಾರ..!
 

click me!