ಬೆಂಗಳೂರು(ಡಿ.01): ಐಪಿಎಲ್ ಟೂರ್ನಿ(IPL) ಆರಂಭಕ್ಕೆ ತಯಾರಿ ನಡೆಯುತ್ತಿದೆ. ಇದರ ನಡುವೆ ಅಭಿಮಾನಿಗಳನ್ನು ರಂಜಿಸಲು ಪ್ರೊ ಕಬಡ್ಡಿ ಲೀಗ್ ಟೂರ್ನಿ(Pro Kabaddi Leagu) ಆರಂಭಗೊಳ್ಳುತ್ತಿದೆ. 2021-22ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಟೂರ್ನಿ(PKL) ಡಿಸೆಂಬರ್ 22 ರಿಂದ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ಈ ಬಾರಿ ಟೂರ್ನಿ ಬೆಂಗಳೂರಿನಲ್ಲಿ(Bengaluru) ಆಯೋಜನೆಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್(Bengaluru Bulls) ಹಾಗೂ ಯು ಮುಂಬಾ(U mumba) ಹೋರಾಟ ನಡೆಸಲಿದೆ.
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರು ಕ್ರೀಡಾಂಗಣ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೊರೋನಾ ವೈರಸ್(Coronavirus) ಪ್ರಕರಣ ಹೆಚ್ಚಳ ಹಾಗೂ ಹೊಸ ಓಮಿಕ್ರಾನ್(Omicron) ವೈರಸ್ ಭೀತಿ ಕಾಡುತ್ತಿರುವುದರಿಂದ ಮುನ್ನಚ್ಚರಿಕೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಪೂರ್ಣ ಟೂರ್ನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರ್ಟಾನ್ ಗ್ರ್ಯಾಂಡ್ ಹೊಟೆಲ್‌ನಲ್ಲಿ ನಡೆಯಲಿದೆ.
undefined
ಪ್ರೊ ಕಬಡ್ಡಿ ಲೀಗ್: 190ಕ್ಕೂ ಹೆಚ್ಚು ಆಟಗಾರರ ಹರಾಜು
ಸುರಕ್ಷತೆಯ ದೃಷ್ಟಿಯಿಂದ ಎಂದಿನ ಸ್ವರೂಪದ ಬದಲು ಹೊಸ ಸ್ವರೂಪದಲ್ಲಿ ಕಬಡ್ಡಿ ಲೀಗ್ ಆಯೋಜಿಸಲಾಗುತ್ತಿದೆ. ಹೀಗಾಗಿ ಪ್ರೇಕ್ಷಕರ ಪ್ರವೇಶ ನಿರಾಕರಿಸಲಾಗಿದೆ. ಇದರಿಂದ ಕಬಡ್ಡಿ ಪಟುಗಳಿಗೆ ಹಾಗೂ ಅಭಿಮಾನಿಗಳಿಗೂ ಹೆಚ್ಚಿನ ಸುರಕ್ಷತೆ ಸಿಗಲಿದೆ. ಕೋವಿಡ್ ನಿಯಮಾವಳಿ, ಮಾರ್ಗಸೂಚಿಗಳ ಅಡಿಯಲ್ಲಿ ಟೂರ್ನಿ ನಡೆಯಲಿದೆ. ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರೊ ಕಬಡ್ಡಿ ಟೂರ್ನಿ ಆಯೋಜಕರಾದ ಮಾರ್ಷಲ್ ಸ್ಪೋರ್ಟ್ಸ್ ಹೇಳಿದೆ.
ಮಾರ್ಷಲ್ ಸ್ಪೋರ್ಟ್ಸ್ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲಾರ್ಧದ ವೇಳಾಪಟ್ಟಿ(Schedule) ಪ್ರಕಟಿಸಿದೆ. ನಾವೆಲ್ಲ ಡಬಲ್ ಹೆಡರ್ ಪಂದ್ಯ ಸಾಮಾನ್ಯಾಗಿ ನೋಡಿದ್ದೇವೆ. ಈ ಬಾರಿ ಟ್ರಿಪಲ್ ಹೆಡರ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಆರಂಂಭಿಕ ನಾಲ್ಕು ದಿನಗಳು ಪ್ರತಿ ದಿನ ಮೂರು ಮೂರು ಪಂದ್ಯಗಳು ನಡೆಯಲಿದೆ. ಬಳಿಕ ಪ್ರತಿ ಶನಿವಾರ ತ್ರಿಪಲ್ ಪಂಗಾ ಪಂದ್ಯ ಆಯೋಜಿಸಲಾಗಿದೆ.
ಪ್ರೊ ಕಬಡ್ಡಿ ಹರಾಜು: ಪ್ರದೀಪ್ ನರ್ವಾಲ್‌ಗೆ 1.65 ಕೋಟಿ ರೂ ಜಾಕ್‌ಪಾಟ್..!
ಮೊದಲ ಪಂದ್ಯ ಪ್ರತಿ ದಿನ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಎರಡೇ ಪಂದ್ಯ 8.30 ಹಾಗೂ ಮೂರನೇ ಪಂದ್ಯ ರಾತ್ರಿ 9.30ಕ್ಕೆ ಆರಂಭಗೊಳ್ಳಲಿದೆ. ಮೊದಲ ದಿನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಹೋರಾಟ ಮಾಡಲಿದೆ. 8.30ಕ್ಕೆ ನಡೆಯಲಿರುವ 2ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಿದರೆ, 3ನೇ ಪಂದ್ಯದಲ್ಲಿ ಯುಪಿ ಯೋಧಾ ಹಾಗೂ ಬೆಂಗಾಲ್ ವಾರಿಯರ್ಸ್ ಹೋರಾಟ ನಡೆಸಲಿದೆ.
ಆಗಸ್ಟ್ ತಿಂಗಳಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಪ್ರದೀಪ್ ನರ್ವಾಲ್ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಕಬಡ್ಡಿ ಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರದೀವ್ 1.65 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಇನ್ನು ಎರಡನೇ ಸ್ಥಾನದಲ್ಲಿರುವ ಸಿದ್ದಾರ್ಥ್ 1.30 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಪ್ರದೀವ್ ನರ್ವಾಲ್ ಯುಪಿ ಯೋಧಾ ತಂಡ ಖರೀದಿ ಮಾಡಿತ್ತು. ತೆಲುಗು ಟೈಟಾನ್ಸ್ ತಂಡ ದುಬಾರಿ ಬೆಲೆಗೆ ಸಿದ್ದಾರ್ಥ್ ಖರೀದಿ ಮಾಡಿದೆ.
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಕನ್ನಡಿಗರಿಗೆ ಹೆಚ್ಚಿನ ಮಣೆ ಹಾಕಿದೆ. ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡವನ್ನು ಕನ್ನಡಿಗ ಪ್ರಶಾಂತ್ ರೈ ಮುನ್ನಡೆಸಲಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರಿನ ಪ್ರಶಾಂತ್ ರೈ, ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಕಳೆದ 7 ಆವೃತ್ತಿಗಳಲ್ಲಿ ತೆಲುಗು ಟೈಟಾನ್ಸ್, ದಬಾಂಗ್ ದಿಲ್ಲಿ, ಹರ್ಯಾಣ ಸ್ಟೀಲರ್ಸ್ ಹಾಗೂ ಯುಪಿ ಯೋಧಾ ತಂಡದಲ್ಲಿ ಆಡಿದ್ದಾರೆ. ಪಾಟ್ನಾ ಪೈರೇಟ್ಸ್ 55 ಲಕ್ಷ ರೂಪಾಯಿಗೆ ಪ್ರಶಾಂತ್ ರೈ ಅವರನ್ನು ಹರಾಜಿನಲ್ಲಿ ಖರೀದಿಸಿದೆ.
ಪ್ರೊ ಕಬಡ್ಡಿ ವೇಳಾಪಟ್ಟಿ ಇಲ್ಲಿದೆ: