ಪ್ರೊ ಕಬಡ್ಡಿ 2019: ಬೆಂಗಾಲ್ ವಾರಿಯರ್ಸ್’ಗೆ ಫೈನಲ್ ಟಿಕೆಟ್

By Web DeskFirst Published Oct 16, 2019, 10:29 PM IST
Highlights

7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಯು ಮುಂಬಾ ತಂಡವನ್ನು ಮಣಿಸಿದ ಬೆಂಗಾಲ್ ವಾರಿಯರ್ಸ್ ಫೈನಲ್ ಪ್ರವೇಶಿಸಿದೆ. ಇದೀಗ ಬೆಂಗಾಲ್ ವಾರಿಯರ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಅಹಮದಾಬಾದ್[ಅ.16]: ಸಾಕಷ್ಟು ರೋಚಕತೆಯಿಂದ ಕೂಡಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಕೇವಲ 2 ಅಂಕಗಳಿಂದ ಮಣಿಸಿದ ಬೆಂಗಾಲ್ ವಾರಿಯರ್ಸ್ ಫೈನಲ್ ಪ್ರವೇಶಿಸಿದೆ. ಏಳನೇ ಆವೃತ್ತಿಯ ಫೈನಲ್’ನಲ್ಲಿ ಪ್ರಶಸ್ತಿಗಾಗಿ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಕಾದಾಡಲಿವೆ. 

push past a spirited side 37-35 and seal a spot in the final!

Can they go on to lift the 🏆?

Find out LIVE

⚔: Final
⌛: October 19, 7 PM
📺: Star Sports and Hotstar

— ProKabaddi (@ProKabaddi)

ಅಭಿಷೇಕ್ ಮುಂಬಾಗೆ ಮೊದಲ ಅಂಕ ತಂದಿತ್ತರು. ನಭೀಭಕ್ಷ್ ಬೆಂಗಾಲ್’ಗೆ ಬೋನಸ್ ಮೂಲಕ ಅಂಕಗಳ ಖಾತೆ ತೆರೆದರು. ಉಭಯ ತಂಡಗಳು ನಾಲ್ಕನೇ ನಿಮಿಷದಲ್ಲಿ 3-3, 6ನೇ ನಿಮಿಷದಲ್ಲಿ 6-6, 11ನೇ ನಿಮಿಷದಲ್ಲಿ 9-9 ಅಂಕಗಳ ಸಮಬಲ ಸಾಧಿಸಿದ್ದವು. ಪಂದ್ಯದ 14ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್ ಮಾಡುವ ಮೂಲಕ ಬೆಂಗಾಲ್ 14-10 ಅಂಕಗಳ ಮುನ್ನಡೆ ಗಳಿಸಿಕೊಂಡಿತು. ಇದೇ ಮುನ್ನಡೆ ಕಾಯ್ದುಕೊಂಡ ಬೆಂಗಾಲ್ ಮೊದಲಾರ್ಧ ಮುಕ್ತಾಯದ ವೇಳೆಗೆ 18-12 ಅಂಕಗಳೊಂದಿಗೆ ಮುನ್ನಡೆದಿತ್ತು.

ಪ್ರೊ ಕಬಡ್ಡಿ 2019: ಬುಲ್ಸ್ ಕನಸು ಭಗ್ನ; ಫೈನಲ್’ಗೆ ದಬಾಂಗ್ ಡೆಲ್ಲಿ

ಇನ್ನು ದ್ವಿತಿಯಾರ್ಧದಲ್ಲೂ ಬೆಂಗಾಲ್ ತಮ್ಮ ಹಿಡಿತ ಸಡಿಲಿಸಲಿಲ್ಲ. ಸುಕೇಶ್ ಹೆಗ್ಡೆ ದ್ವಿತಿಯಾರ್ಧದ 06ನೇ ನಿಮಿಷದಲ್ಲಿ 4 ಅಂಕಗಳ ಸೂಪರ್ ರೈಡ್ ಮಾಡುವ ಮೂಲಕ ಬೆಂಗಾಲ್ ಅಂತರವನ್ನು 25-16ಕ್ಕೆ ಹೆಚ್ಚಿಸಿದರು. ಇದರ ಬೆನ್ನಲ್ಲೇ ಉತ್ತರಾರ್ಧದ 10ನೇ ನಿಮಿಷದಲ್ಲಿ ಮತ್ತೊಮ್ಮೆ ಮುಂಬಾ ಪಡೆಯನ್ನು ಆಲೌಟ್ ಮಾಡುವಲ್ಲಿ ಬೆಂಗಾಲ್ ತಂಡ ಯಶಸ್ವಿಯಾಯಿತು. ಇದರ ಜತೆಗೆ 30-20 ಅಂಕಗಳೊಂದಿಗೆ ಬೆಂಗಾಲ್ 10 ಅಂಕಗಳಿಂದ ಮುಂದಿತ್ತು. ಆದರೆ ಕೊನೆಯ 5 ನಿಮಿಷಗಳಿದ್ದಾಗ ಯು ಮುಂಬಾದ ರೈಡರ್ ಅಜಿಂಕ್ಯ ಕಾಪ್ರೆ ಸೂಪರ್ ರೈಡ್ ಮೂಲಕ ಅಂಕಗಳಿಸಿ ಪಂದ್ಯಕ್ಕೆ ರೋಚಕತೆ ತಂದಿತ್ತರು. ಕೊನೆಯ 4 ನಿಮಿಷವಿದ್ದಾಗ ಬೆಂಗಾಲ್ ತಂಡವನ್ನು ಆಲೌಟ್ ಮಾಡುವುದರೊಂದಿಗೆ ಮುಂಬಾ [35-33] ಅಂಕಗಳ ಅಂತರವನ್ನು ಕಡಿಮೆ ಮಾಡಿಕೊಂಡಿತು.  ಕೊನೆಯ 2 ನಿಮಿಷಗಳಿದ್ದಾಗ 35-35 ಅಂಕಗಳ ಸಮಬಲ ಸಾಧಿಸಿತು. ನಂತರ ಜೀವಾ ಕುಮಾರ್ ಮಾಡಿದ ಡ್ಯಾಷ್ ನಿಂದ ಬೆಂಗಾಲ್ 36-35 ಮುನ್ನಡೆ ಗಳಿಸಿತು. ಆ ಬಳಿಕ ಮುಂಬಾಗೆ ಅಂಕ ಗಳಿಸಲು ಅವಕಾಶ ನೀಡಲಿಲ್ಲ. ಕೊನೆಯ ರೇಡ್’ನಲ್ಲಿ ಬಲದೇವ್ ಸಿಂಗ್’ರನ್ನು ಟ್ಯಾಕಲ್ ಮಾಡುವುದರೊಂದಿಗೆ ಫೈನಲ್’ಗೆ ಲಗ್ಗೆಯಿಟ್ಟಿತು.

ಬೆಂಗಾಲ್ ವಾರಿಯರ್ಸ್ ಪರ ಸುಕೇಶ್ ಹೆಗ್ಡೆ 8 ಅಂಕ ಪಡೆದರೆ, ನಬೀಭಕ್ಷ್ 5, ಪ್ರಪಂಜನ್ 4, ರಿಂಕು ನರ್ವಾಲ್ 4 ಹಾಗೂ ಜೀವಾ ಕುಮಾರ್ 3 ಅಂಕ ಪಡೆದರು. ಇನ್ನು ಯು ಮುಂಬಾ ಪರ ಅಭಿಷೇಕ್ ಸಿಂಗ್ 11 ಅಂಕ ಗಳಿಸಿದರೆ, ಸಂದೀಪ್ ನರ್ವಾಲ್ ಹಾಗೂ ಅಜಿಂಕ್ಯ ಕಾಪ್ರೆ 5, ಅರ್ಜುನ್ ದೇಶ್ವಾಲ್ ಮತ್ತು ಸುರೀಂದರ್ ಸಿಂಗ್ ತಲಾ 4 ಅಂಕ ಗಳಿಸಿದರು. 
 

click me!