
ನವದೆಹಲಿ(ಅ.16): ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ (ಐಟಿಎಫ್)ಯ ಅಮಾನತು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಡೇವಿಸ್ ಕಪ್ ಆಡುವುದಕ್ಕೆ ಭಾರತ ತಂಡವನ್ನು ಪಾಕಿಸ್ತಾನ ಕಳುಹಿಸಲಿದೆ. ಸದ್ಯದಲ್ಲೇ ವೀಸಾ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಭಾರತ-ಪಾಕ್ ಟೆನಿಸ್: ನ.4ರಂದು ಭದ್ರತಾ ಪರಿಶೀಲನೆ
ಯಾವುದೇ ಆಟಗಾರರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳುವಂತೆ ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಎಐಟಿಎ, ದ್ವಿತೀಯ ದರ್ಜೆ ತಂಡವನ್ನು ಕಳುಹಿಸುವುದಾಗಿ ತಿಳಿಸಿದೆ. ಇದೇ ವೇಳೆ ಭಾರತದ ಅಗ್ರ ಆಟಗಾರರು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಎಐಟಿಎಗೆ ಪತ್ರ ಬರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಪಾಕ್‌ಗೆ ಹೋಗಲ್ಲ: ಭಾರತೀಯ ಟೆನಿಸಿಗರು!
ಪಾಕಿಸ್ತಾನದಲ್ಲಿ ಆಯೋಜಿಸಿರುವ ಡೇವಿಸ್ ಕಪ್ ಟೂರ್ನಿಗೆ ಭಾರತೀಯ ಟೆನಿಸ್ ಪಟುಗಳನ್ನು ಕಳುಹಿಸಲು ಭಾರತ ಟೆನಿಸ್ ಫೆಡರೇಶನ್ ನಿರಾಕರಿಸಿತ್ತು. ಭದ್ರತೆ ಹಾಗೂ ಹಳಸಿದ ರಾಜಕೀಯ ಸಂಬಂಧದಿಂದ ಟೆನಿಸ್ ಫೆಡರೇಶನ್ ಈ ನಿರ್ಧಾರ ಕೈಗೊಂಡಿತ್ತು. ಹಿರಿಯ ಹಾಗೂ ಸ್ಟಾರ್ ಆಟಗಾರರು ಪಾಕ್ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಟೆನಿಸ್ ಫೆಡರೇಶನ್‌ಗೆ ಪತ್ರ ಬರೆದಿದ್ದರು. ಆದರೆ ಅಮಾನತು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಭಾರತ ಕೊನೆಗೂ ಪಾಕ್ ಪ್ರವಾಸಕ್ಕೆ ಸಮ್ಮತಿಸಿತ್ತು.
ಇದನ್ನೂ ಓದಿ: ಡೇವಿಸ್ ಕಪ್: ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡ ಪ್ರಕಟ!
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸೆಪ್ಟೆಂಬರ್ 14 ಹಾಗೂ 15 ರಂದು ನಡೆಯಬೇಕಿದ್ದ ಡೇವಿಸ್ ಕಪ್ ಟೂರ್ನಿಯನ್ನು ಕೊನೆ ಕ್ಷಣದಲ್ಲಿ ಭಾರತದ ಮನವಿ ಮೇರೆಗೆ ಮುಂದೂಡಲಾಗಿತ್ತು. ಇಂಡೋ-ಪಾಕ್ ಸಂಬಂಧ ಹಳಸಿದ ಕಾರಣ ಜೊತೆಗೆ ಪರಿಸ್ಥಿತಿ ಉದ್ವಿಘ್ನಗೊಂಡಿದ್ದ ಕಾರಣ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಡೇವಿಸ್ ಕಪ್ ಟೂರ್ನಿ ಮುಂದೂಡಿತು. ಇದೀಗ ನವೆಂಬರ್ 29 ಹಾಗೂ 30 ರಂದು ಡೇವಿಸ್ ಕಪ್ ಟೂರ್ನಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.