ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಿಂಚಿಂಗ್​: 85 ಪದಕ ತಂದ ಕ್ರೀಡಾಪಟುಗಳು- ಪ್ರಧಾನಿ ಮೋದಿ ವಿಶೇಷ ಭೇಟಿ

Published : Oct 15, 2026, 08:38 PM IST
PM Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳನ್ನು ದೆಹಲಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು. ಈ ಕ್ರೀಡಾಕೂಟದಲ್ಲಿ ಭಾರತ 85 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಪಡೆದಿದ್ದು, ಮಹಿಳಾ ಕ್ರೀಡಾಪಟುಗಳ ಸಾಧನೆಯನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದರು. ಕ್ರೀಡೆಯು ಶಿಸ್ತು ಮತ್ತು ದೃಢತೆಯನ್ನು ಕಲಿಸುತ್ತದೆ ಎಂದು ಅವರು ಯುವಜನರನ್ನು ಹುರಿದುಂಬಿಸಿದರು.

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ, ಜಪಾನ್‌ನ ಐಚಿ-ನಗೋಯಾದಲ್ಲಿ ಏಷ್ಯನ್ ಗೇಮ್ಸ್‌ 2026ರಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆಯ ರಾಜ್ಯ ಸಚಿವೆ ರಕ್ಷಾ ಖಡ್ಸೆ ಹಾಗೂ ಭಾರತೀಯ ಒಲಿಂಪಿಕ್ ಸಂಘದ ಅಧ್ಯಕ್ಷೆ ಪಿ.ಟಿ. ಉಷಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚು ಸೇರಿದಂತೆ ಒಟ್ಟು 85 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ಸತತ ಎರಡನೇ ಬಾರಿಗೆ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಬಳಿಕ ಪ್ರಧಾನಿ, ಏಷ್ಯನ್ ಕ್ರೀಡಾಕೂಟದಲ್ಲಿನ ನಮ್ಮ ಯಶಸ್ಸು, ದೇಶದ ಬದಲಾಗುತ್ತಿರುವ ಮನಸ್ಥಿತಿಗೆ ಒಂದು ಉದಾಹರಣೆಯಾಗಿದೆ. ಇಂದಿನ ಯುವಜನರು ಹೊಸ ಎತ್ತರಗಳನ್ನು ತಲುಪಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ಯುವಜನರ ದೃಢನಿಶ್ಚಯದ ಮುಂದೆ ಯಾವುದೇ ಮೈಲಿಗಲ್ಲು ಅಸಾಧ್ಯವಲ್ಲ; ಹಾಗೆಯೇ, ನಮ್ಮ ಯುವ ಪೀಳಿಗೆಯ ಸಾಮರ್ಥ್ಯಕ್ಕೆ ಮೀರಿದ ಯಾವುದೇ ಗುರಿ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ಕ್ರೀಡೆಯ ಬಗ್ಗೆ ಪ್ರಧಾನಿ ಮಾತು

ಕ್ರೀಡೆಯ ಪಾತ್ರವು ಕೇವಲ ಆಟದ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆಯು ನಮಗೆ ಶಿಸ್ತನ್ನು ಕಲಿಸುತ್ತದೆ. ಗುರಿಯನ್ನು ತಲುಪುವ ಹಾದಿಯಲ್ಲಿ ದೃಢವಾಗಿ ನಿಲ್ಲುವುದು ಹೇಗೆ ಮತ್ತು ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವುದು ಹೇಗೆ ಎಂಬುದನ್ನು ಅದು ನಮಗೆ ತೋರಿಸಿಕೊಡುತ್ತದೆ. ಕ್ರೀಡೆಯ ಮೂಲಕ, ಈ ಪಾಠಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗುತ್ತವೆ. ಇಂತಹ ಕ್ರೀಡಾ ಮನೋಭಾವವು ನಮ್ಮ ಇಡೀ ಜೀವನದುದ್ದಕ್ಕೂ ನಮಗೆ ಮಾರ್ಗದರ್ಶಕವಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಇಷ್ಟೊಂದು ಪದಕ ವಿಜೇತರನ್ನು ಒಟ್ಟಿಗೆ ಭೇಟಿಯಾಗುವುದು ಸಾಮಾನ್ಯ ಸಂಗತಿಯಲ್ಲ; ಇದೊಂದು ಅತ್ಯಂತ ಸಂತೋಷದಾಯಕ ಅನುಭವ ಎಂದ ಪ್ರಧಾನಿ, ಉತ್ಸಾಹ ಮತ್ತು ಛಲವು ಗೆಲುವಾಗಿ ಪರಿವರ್ತನೆಗೊಂಡಾಗ, ಅದು ಕೇವಲ ಪದಕಗಳನ್ನು ತರುವುದಲ್ಲದೆ, ಎಲ್ಲರ ಮುಖಗಳಲ್ಲಿ ಒಂದು ವಿಶೇಷವಾದ ಹೊಳಪನ್ನೂ ಮೂಡಿಸುತ್ತದೆ. ನಿಮ್ಮ ಈ ಸಾಧನೆಯಿಂದ ಇಡೀ ದೇಶವೇ ಬೆಳಗುತ್ತದೆ ಎಂದು ಕ್ರೀಡಾಪಟುಗಳನ್ನು ಪ್ರಧಾನಿ ಶ್ಲಾಘಿಸಿದರು.

ಮಹಿಳೆಯರಿಗೆ ಶ್ಲಾಘನೆ

ಭಾರತವು ಗೆದ್ದ ಒಟ್ಟು 85 ಪದಕಗಳಿಗೆ ಮಹಿಳಾ ಕ್ರೀಡಾಪಟುಗಳು ನೀಡಿದ ಕೊಡುಗೆಯನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು; ಅವರು 11 ಚಿನ್ನದ ಪದಕಗಳು ಸೇರಿದಂತೆ ಒಟ್ಟು 38 ಪದಕಗಳನ್ನು ಗೆದ್ದಿರುವುದು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮಿಂಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಸರಾ ಸಂಭ್ರಮ ನಡುವೆ ಮೈಸೂರು ರಾಯಲ್ಸ್ ತಂಡಕ್ಕೆ ಪಿಕ್ಕಲ್‌ಬಾಲ್ ಲೀಗ್ ಮೊದಲ ಟ್ರೋಫಿ ಗರಿ
ಥ್ಯಾಂಕ್ಯೂ, ಗುಡ್‌ಬೈ ಮೆಸ್ಸಿ...! ದಿಗ್ಗಜ ಫುಟ್ಬಾಲಿಗನ ವಿದಾಯದ ಪಂದ್ಯದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಟಗಾರರು, ಕೋಚ್‌