
ಬೆಂಗಳೂರು (ಅ.06): ಲೀಗ್ ಟೂರ್ನಿಗಳು ಹೆಚ್ಚು ಜನಪ್ರಿಯಗೊಳ್ಳುತ್ತಿರುವ ನಡುವೆ ಕ್ರೀಡಾ ಪ್ರೇಮಿಗಳಿಗೆ ಪಿಕಲ್‌ಬಾಲ್ ಲೀಗ್ ಹಬ್ಬ ಆರಂಭಗೊಳ್ಳುತ್ತಿದೆ. ಕರ್ನಾಟಕ ಸ್ಟೇಟ್ ಪಿಕಲ್‌ಬಾಲ್ ಅಸೋಸಿಯೇಷನ್ (KSPA) ಮತ್ತು ಎಂಟ್ರೋಪಿ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ (ESE) ಸಹಯೋಗದಲ್ಲಿ ನಡೆಯುತ್ತಿರುವ ಪ್ರಥಮ ಆವೃತ್ತಿಯ 'ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್' (KPPL) ಟೂರ್ನಿಯ ಅಧಿಕೃತ ಜೆರ್ಸಿ ಬಿಡುಗಡೆ ಸಮಾರಂಭವು ಇತ್ತೀಚೆಗೆ ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಅದ್ಧೂರಿಯಾಗಿ ನಡೆದಿದೆ.
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಏಳು ಪ್ರಾಂಚೈಸಿಗಳಾದ ಬಳ್ಳಾರಿ ಟೈಗರ್ಸ್, ಬೆಂಗಳೂರು ಚಾರ್ಜರ್ಸ್, ಮಂಗಳೂರು ರೋರರ್ಸ್, ಕೂರ್ಗ್ ಒರಿಜಿನಲ್ಸ್, ಬೆಳಗಾವಿ ಬ್ಯಾರನ್ಸ್, ತುಮಕೂರು ಟೈಟನ್ಸ್ ಮತ್ತು ಮೈಸೂರು ರಾಯಲ್ಸ್ ತಂಡಗಳ ಆಟಗಾರರು ತಮ್ಮ ತಂಡದ ಜೆರ್ಸಿಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ KPPL ನಾಯಕರೊಂದಿಗೆ, ತಂಡಗಳ ಮಾಲೀಕರು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. ಈ ಕೂಟದ ಪ್ರಮುಖ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ KPPL ಬ್ರ್ಯಾಂಡ್ ಅಂಬಾಸಿಡರ್ ಶ್ರೀಮುರಳಿ ಜೆರ್ಸಿ ಅನಾವರಣಗೊಳಿಸಿ ಶುಭ ಹಾರೈಸಿದರು. KPPL ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ ಇವೆ. ಇದೀಗ ಭರ್ಜರಿ ತಯಾರಿಗಳು ನಡೆಯುತ್ತಿದೆ.
ತಂಡಗಳ ಹರಾಜು ಮತ್ತು ಆಟಗಾರರ ಆಯ್ಕೆ ಪ್ರಕ್ರಿಯೆಯ ನಂತರ ನಡೆದ ಈ ಜೆರ್ಸಿ ಬಿಡುಗಡೆ ಕಾರ್ಯಕ್ರಮವು, ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯ ಜಾಗೃತಿಯನ್ನು ಹೆಚ್ಚಿಸುವ ಜೊತೆಗೆ ಮೊದಲ ಆವೃತ್ತಿಯ ಪಂದ್ಯಾವಳಿಗೆ ಬಿರುಸಿನ ಚಾಲನೆ ನೀಡಿದೆ.
ಈ ಜರ್ಸಿ ಬಿಡುಗಡೆ ಸಮಾರಂಭದಲ್ಲಿ ಕೆಎಸ್‌ಪಿಎ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ರಜತ್ ಕಾಂಕರ್, ನಟ ಶ್ರೀಮುರಳಿ, ಎಂಟ್ರೋಪಿ ಸ್ಪೋಟ್ಸ್ನ ಆಶೀಶ್ ಸೇರಿ ಉಳಿದವರು ಉಪಸ್ಥಿತರಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.