ಒಲಿಂಪಿಕ್ಸ್ ತಯಾರಿ ಸಭೆ : ಕ್ರೀಡಾಪಟುಗಳ ಬೇಡಿಕೆಗೆ ಮೊದಲ ಆದ್ಯತೆ ಎಂದ ಪ್ರಧಾನಿ!

By Suvarna NewsFirst Published Jun 3, 2021, 5:30 PM IST
Highlights
  • ಕ್ರೀಡಾಪಟುಗಳ ಲಸಿಕೆ to ತರಬೇತಿ ಎಲ್ಲಾ ಬೇಡಿಕೆಗೆ ತಕ್ಷಣವೆ ಪೂರೈಕೆ
  • ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳ ತಯಾರಿ ಕುರಿತು ಪ್ರಧಾನಿ ಮೋದಿ ಮಹತ್ವದ ಸಭೆ
  • ಒಲಿಂಪಿಕ್ಸ್ ಪ್ರತಿನಿಧಿಸುವ ಭಾರತೀಯ ಕ್ರೀಡಾಪಟುಗಳ ಜೊತೆ ಮೋದಿ ವಿಡಿಯೋ ಕಾನ್ಫೆರನ್ಸ್

ನವದೆಹಲಿ(ಜೂ.03): ಪ್ರತಿಷ್ಠಿತ ಟೊಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳಲಿರುವ ಭಾರತೀಯ ಕ್ರೀಡಾಪಟುಗಳಿಗೆ ಲಸಿಕೆ, ತರಬೇತಿ ಸೇರಿದಂತೆ ಅವರ ಅಗತ್ಯ ಬೇಡಿಕೆಗಳನ್ನು ಮೊದಲ ಆದ್ಯತೆಯಲ್ಲಿ ಪೂರೈಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದೆ ಜಪಾನ್‌: ಮಹಾ ಲಸಿಕೆ ಅಭಿಯಾನಕ್ಕೆ ಚಾಲನೆ.

ಟೂಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇನ್ನು 50 ದಿನ ಮಾತ್ರ. ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅರ್ಹತೆಗಿಟ್ಟಿಸಿಕೊಂಡಿರುವ ಕ್ರೀಡಾಪಟುಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇತ್ತ ಸರ್ಕಾರ ಕೂಡ ಕ್ರೀಡಾಪಟುಗಳಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ಸ್ ಸಿದ್ಧತೆಗಳ ಕುರಿತು ಮಹತ್ವದ ಸಭೆ ನಡೆಸಿದ್ದಾರೆ. 

ಈ ಸಭೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಸಭೆಯಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆ ಕ್ರೀಡಾಪಟುಗಳಿಗೆ ನಿರಂತರ ತರಬೇತಿ, ಸಲಹೆ, ಮಾರ್ಗದರ್ಶನ,  ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಹಿಟ್ಟಿಸಿಕೊಳ್ಳಲು  ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ, ಕ್ರೀಡಾಪಟುಗಳಿಗೆ ಲಸಿಕೆ  ಸೇರಿದಂತೆ ಎಲ್ಲಾ ರೀತಿಯ ಬೆಂಬಲ ನೀಡಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಮೋದಿಗೆ ವಿವರಿಸಲಾಯಿತು.

ಟೋಕಿಯೋ ಒಲಿಂಪಿಕ್ಸ್‌ಗೆ ತಾರಾ ಶಟ್ಲರ್‌ ಕ್ಯಾರೋಲಿನಾ ಮರಿನ್‌ ಗೈರು

ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿರುವ ಹಾಗೂ ಸಂಭಾವ್ಯ ಕ್ರೀಡಾಪಟು, ಸಹಾಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ತಕ್ಷಣವೆ ಲಸಿಕೆ ನೀಡಬೇಕು ಎಂದು ಮೋದಿ ನಿರ್ದೇಶಿಸಿದ್ದಾರೆ. ಜುಲೈ ತಿಂಗಳಲ್ಲಿ ಒಲಿಂಪಿಕ್ಸ್ ಕೂಟಕ್ಕೆ ತೆರಳಲಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ವಿಡಿಯೋ ಸಂವಾದ ನಡೆಸುವುದಾಗಿ ಹೇಳಿದ್ದಾರೆ.

ಕ್ರೀಡೆಯಲ್ಲಿ ಭಾರತ ಹೊಸ ಹೊಸ ಇತಿಹಾಸ ರಚಿಸುತ್ತಿದೆ. ಭಾರತೀಯ ಕ್ರೀಡಾಪಟುಗಳು ದೇಶದ ಹೆಮ್ಮೆಯ ಪ್ರತೀಕ. 135 ಕೋಟಿ ಭಾರತೀಯರ ಶುಭಾಶಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳ ಮೇಲಿರಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಪ್ರತಿಯೊಬ್ಬ ಕ್ರೀಡಾಪಟು ಸಾವಿರ ಸಾವಿರ ಯುವ ಪ್ರತಿಭೆ ಪ್ರೇರಣೆಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಕುಸ್ತಿ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಸುಮಿತ್‌ ಮಲಿಕ್‌

ಇದೇ ವೇಳೆ  ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಾಗ ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ, ಮನೋಸ್ಥೈರ್ಯ ಹೆಚ್ಚಿಸಲು ವಿಶೇಷ ಗಮನ ನೀಡಲಾಗುವುದು. ಕ್ರೀಡಾಕೂಟದ ನಡುವೆ ಕ್ರೀಡಾಪಟುಗಳ ಪೋಷಕರು ಮತ್ತು ಕುಟುಂಬ ಸದಸ್ಯರೊಂದಿಗೆ  ವೀಡಿಯೊ ಸಂವಾದ ಆಯೋಜಿಸಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

click me!