PKL Auction 2022 ಪಿಕೆಎಲ್‌ನಲ್ಲಿ ದಾಖಲೆ ಬರೆದ ಪವನ್‌ ಶೆರಾವತ್‌, ಬೆಂಗಳೂರು ಬುಲ್ಸ್‌ಗೆ ವಿಕಾಸ್‌ ಖಂಡೋಲಾ!

By Santosh NaikFirst Published Aug 5, 2022, 9:07 PM IST
Highlights

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ 2022ನ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನದ ಬಿಗ್‌ ಪ್ಲೇಯರ್‌ಗಳ ಲಿಸ್ಟ್‌ನಲ್ಲಿ ಪ್ರಮುಖವಾಗಿದ್ದ ಸ್ಟಾರ್‌ ರೈಡರ್‌ ಪವನ್‌ ಕುಮಾರ್‌ ಶೆರಾವತ್‌ 2 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಯಾದ ಮೊಟ್ಟಮೊದಲ ಕಬಡ್ಡಿ ತಾರೆ ಎನಿಸಿದ್ದಾರೆ. ಬರೋಬ್ಬರಿ 2.26 ಕೋಟಿ ಮೊತ್ತಕ್ಕೆ ತಮಿಳ್‌ ತಲೈವಾಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ 2ನೇ ಅತ್ಯಂತ ದಾಖಲೆಯ ಮೊತ್ತಕ್ಕೆ ಮಾರಾಟವಾದ ವಿಕಾಸ್‌ ಖಂಡೋಲಾ 1.70 ಕೋಟಿಗೆ ಬೆಂಗಳೂರು ಬುಲ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಮುಂಬೈ (ಆ.5): ಐಪಿಎಲ್ ಬಳಿಕ ದೇಶದಲ್ಲಿ ದೊಡ್ಡ ಮಟ್ಟದ ಕ್ರೇಜ್‌ ಉಳಿಸಿಕೊಂಡಿರುವ ಕ್ರೀಡಾ ಲೀಗ್‌ ಆಗಿರುವ ಪ್ರೊ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಶುಕ್ರವಾರ ಮುಂಬೈನಲ್ಲಿ ಚಾಲನೆ ಸಿಕ್ಕಿದೆ. ಮೊದಲ ದಿನದ ಹರಾಜಿನಲ್ಲಿ ಸ್ಟಾರ್‌ ಪ್ಲೇಯರ್‌ಗಳ ಲೀಲಾವು ನಡೆದಿದ್ದು, ಬೆಂಗಳೂರು ಬುಲ್ಸ್‌ ತಂಡದ ಸೂಪರ್‌ ಸ್ಟಾರ್‌ ರೈಡರ್‌ ಆಗಿದ್ದ ಪವನ್‌ ಕುಮಾರ್‌ ಶೆರಾವತ್‌, 2.26 ಕೋಟಿ ರೂಪಾಯಿ ಮೊತ್ತಕ್ಕೆ ತಮಿಳ್‌ ತಲೈವಾಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಹರಿಯಾಣ ಸ್ಟೀಲರ್ಸ್‌ ಪರವಾಗಿ ಆಡಿದ್ದ ರೈಡರ್‌ ವಿಕಾಸ್‌ ಖಂಡೋಲಾ ಈವರೆಗಿನ 2ನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಬರೋಬ್ಬರಿ 1.70 ಕೋಟಿ ರೂಪಾಯಿ ಮೊತ್ತಕ್ಕೆ ಬೆಂಗಳೂರು ಬುಲ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ 1.65 ಕೋಟಿ ರೂಪಾಯಿಗೆ ಪ್ರದೀಪ್‌ ನರ್ವಾಲ್‌ ಮಾರಾಟವಾಗಿದ್ದು ಈವರೆಗಿನ ದಾಖಲೆಯಾಗಿತ್ತು. ವಿಕಾಸ್‌ ಖಂಡೋಲಾಗಾಗಿ ಆರಂಭದಿಂದಲೇ ಬಿಡ್‌ ಮಾಡಿದ ಬೆಂಗಳೂರು ಬುಲ್ಸ್,‌ ತಮಿಳ್‌ ತಲೈವಾಸ್ ಜೊತೆ ಕೊನೆಯವರೆಗೂ ಹೋರಾಟ ಮಾಡಿ ಅವರನ್ನು ಖರೀದಿಸುವಲ್ಲಿ ಯಶ ಕಂಡಿತು. ಇವರಿಗೆ ದೊಡ್ಡ ಮಟ್ಟದ ಹಣ ಸುರಿದ ಕಾರಣದಿಂದಾಗಿ ಪವನ್‌ ಕುಮಾರ್‌ ಶೆರಾವತ್‌ರನ್ನು ಬೆಂಗಳೂರು ಬುಲ್ಸ್‌ ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

30 ಲಕ್ಷ ಮೂಲಬೆಲೆ ಹೊಂದಿದ್ದ ಪವನ್‌ ಕುಮಾರ್‌ ಶೆರಾವತ್‌ರನ್ನು ಮೊದಲ ಬಿಡ್‌ನಲ್ಲಿಯೇ 1 ಕೋಟಿಗೆ ಹರಿಯಾಣ ಸ್ಟೀಲರ್ಸ್‌ ಬಿಡ್‌ ಮಾಡಿತು. ಬಳಿಕ ಅದೇ ತಂಡ 1.20 ಕೋಟಿ ರೂಪಾಯಿ ವರೆಗೆ ಏರಿಕೆ ಮಾಡಿತು. ಕಳೆದ ಹರಾಜಿನಲ್ಲಿ 1.65 ಕೋಟಿ ರೂಪಾಯಿಗೆ ಯುಪಿ ಯೋಧಾಸ್‌ ತಂಡಕ್ಕೆ ಸೇರಿಕೊಂಡಿದ್ದ ಪ್ರದೀಪ್‌ ನರ್ವಾಲ್‌ರನ್ನು ಈ ಬಾರಿ ಯುಪಿ ಯೋಧಾಸ್‌ ತಂಡ ಹರಾಜಿಗೆ ಬಿಟ್ಟುಕೊಟ್ಟು 72 ಲಕ್ಷ ಕಡಿಮೆ ಮೊತ್ತಕ್ಕೆ ಉಳಿಸಿಕೊಂಡಿತು. ಈ ಬಾರಿ ಕೇವಲ 90 ಲಕ್ಷಕ್ಕೆ ಅವರನ್ನು ಬಿಡ್‌ ಮಾಡಿ ತಂಡದಲ್ಲಿ ಉಳಿಸಿಕೊಂಡಿದೆ. 

ಫಜಲ್‌ಗೂ ಜಾಕ್‌ಪಾಟ್‌: ಇರಾನ್‌ನ ಆಲ್ರೌಂಡ್‌ ಆಟಗಾರ  ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್ ಮೂಲಕ ದಿನದ ಹರಾಜು ಪ್ರಕ್ರಿಯೆ ಆರಂಭವಾಯಿತು. ಕಳೆದ ಆವೃತ್ತಿಯಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡದ ಪರವಾಗಿ ಆಡಿದ್ದ ಸ್ಟಾರ್‌ ಆಟಗಾರನನ್ನು 87 ಲಕ್ಷ ರೂಪಾಯಿಗೆ ಪುಣೆರಿ ಪಲ್ಟನ್ಸ್‌ ಖರೀದಿ ಮಾಡಿತು. ಸುಲ್ತಾನ್ ಎಂದು ಅಡ್ಡಹೆಸರು ಹೊಂದಿರುವ ಫಾಜೆಲ್ ಅತ್ರಾಚಲಿ ಅವರನ್ನು ಖರೀದಿ ಮಾಡಲು ಬಿಡ್ಡಿಂಗ್ ಯುದ್ಧ ನಡೆಯಿತು. ಲೀಗ್‌ನ ಅತ್ಯಂತ ಯಶಸ್ವಿ ವಿದೇಶಿ ಆಟಗಾರ ಮತ್ತು ಅತ್ಯುತ್ತಮ ಡಿಫೆಂಡರ್‌ ಆಗಿದ್ದಾರೆ ಅತ್ರಾಚಲಿ. ಇರಾನ್‌ ತಂಡದ ಪರ ನಾಯಕನೂ ಆಗಿರುವ ಅತ್ರಾಚಲಿ, ಪಿಕೆಎಲ್‌ನಲ್ಲೀ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಅವರು ಕಳೆದ ಎರಡು ಋತುಗಳಲ್ಲಿ ಯು ಮುಂಬಾ ತಂಡವನ್ನು ಮುನ್ನಡೆಸಿದ್ದು,  ಅಭಿಷೇಕ್ ಸಿಂಗ್, ಅರ್ಜುನ್ ದೇಶ್ವಾಲ್ ಮತ್ತು ಅಜಿತ್ ಕುಮಾರ್ ಅವರಂತಹವರಿಗೆ ಮಾರ್ಗದರ್ಶನ ನೀಡಿದ್ದಾರೆ.  ಅವರನ್ನು 1.38 ಕೋಟಿ ರೂಪಾಯಿಗೆ ಪುಣೇರಿ ಪಲ್ಟನ್‌ ಖರೀದಿ ಮಾಡಿತು.

PKL Auction 2022 ಇಂದು, ನಾಳೆ ಪ್ರೊ ಕಬಡ್ಡಿ ಹರಾಜು: 500+ ಆಟಗಾರರು ಭಾಗಿ..!

ಬೆಂಗಾಲ್‌ ತಂಡಕ್ಕೆ ದೀಪಕ್‌ ನಿವಾಸ್‌ ಹೂಡಾ:
ಬರೋಬ್ಬರಿ 1.38 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಫಜಲ್‌ ಅತ್ರಾಚಲಿ, ಪಿಕೆಎಲ್‌ ಇತಿಹಾಸದಲ್ಲಿಯೇ ಅತ್ಯಂತ ದಬಾರಿ ಡಿಫೆಂಡರ್‌ ಎನಿಸಿಕೊಂಡರು. ಕಳೆದ ಎರಡು ಋತುವಿನಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ನಾಯಕನಾಗಿದ್ದ ದೀಪಕ್‌ ನಿವಾಸ್‌ ಹೂಡಾ, 43 ಲಕ್ಷ ರೂಪಾಯಿಗೆ ಬೆಂಗಾಲ್‌ ವಾರಿಯರ್ಸ್‌ ತಂಡ ಸೇರಿಕೊಂಡರು. ಬೆಂಗಾಲ್‌ ತಂಡದಲ್ಲಿ ಮಣಿಂದರ್‌ ಸಿಂಗ್‌ ಅವರೊಂದಿಗೆ ಜೊತೆಯಾಗಲಿದ್ದಾರೆ.  ದೀಪಕ್ ಸರ್ಕ್ಯೂಟ್‌ನಲ್ಲಿ ಫಿಟ್ ಆಟಗಾರರಲ್ಲಿ ಒಬ್ಬರಾಗಿದ್ದು, ಭಾರತ ರಾಷ್ಟ್ರೀಯ ತಂಡದ ನಾಯಕರೂ ಆಗಿದ್ದಾರೆ. ಕಳೆದ ಎರಡು ಋತುವಿನಲ್ಲಿ ಲೀಗ್‌ನಲ್ಲಿ ಕೊನೇ ಸ್ಥಾನ ಪಡೆದಿದ್ದ ತೆಲುಗು ಟೈಟಾನ್ಸ್‌ ಪರ್ವೇಶ್‌ ಬೈನ್ಸ್‌ವಾಲ್‌ ಮೂಲಕ ಮೊದಲ ಆಟಗಾರನನ್ನು ಸಹಿ ಮಾಡಿಸಿಕೊಂಡಿತು. ಪಿಕೆಎಲ್‌ನ ಬಿಗ್‌ ಡಿಫೆಂಡರ್‌ ಆಗಿದ್ದ ಪರ್ವೇಶ್‌ ಬೈನ್ಸ್‌ವಾಲ್‌ ಕಳೆದ ಋತುವಿನಲ್ಲಿ ಗುಜರಾತ್‌ ಫಾರ್ಚುನ್‌ಜೈಂಟ್ಸ್‌ ಪರವಾಗಿ ಆಡಿದ್ದರು. ಅವರನ್ನು62 ಲಕ್ಷ ರೂಪಾಯಿಗೆ ತೆಲುಗು ಟೈಟಾನ್ಸ್‌ ಖರೀದಿ ಮಾಡಿತು. ಅ ಬಳಿಕ 50 ಲಕ್ಷ ರೂಪಾಯಿಗೆ ಅನುಭವಿ ಸುರ್ಜೀತ್‌ ಸಿಂಗ್‌ರನ್ನು ತಂಡ ಖರೀದಿ ಮಾಡಿತು.

Pro Kabaddi Auction: ಪವನ್ ಶೆರಾವತ್ ಅವರನ್ನು ಕೈಬಿಟ್ಟ ಬೆಂಗಳೂರು ಬುಲ್ಸ್..!

ಪ್ರದೀಪ್‌ ನರ್ವಾಲ್‌ಗೆ 90 ಲಕ್ಷ, ಸಚಿನ್‌ಗೆ ಬಿಡ್‌ ಮಾಡಿದ ಬೆಂಗಳೂರು: ಕಳೆದ ಹರಾಜಿಲ್ಲಿ 1.65 ಕೋಟಿ ರೂಪಾಯಿಗೆ ಹರಾಜಾಗಿದ್ದ ಸ್ಟಾರ್‌ ರೈಡರ್‌ ಪ್ರದೀಪ್‌ ನರ್ವಾಲ್‌ರನ್ನು ಯುಪಿ ಯೋಧಾಸ್‌ ತಂಡ ಕೇವಲ 90 ಲಕ್ಷಕ್ಕೆ ತನ್ನಲ್ಲಿಯೇ ಉಳಿಸಿಕೊಂಡಿತು. ಇನ್ನು ಆರಂಭದಿಂದ ಸುಮ್ಮನಿದ್ದ ಬೆಂಗಳೂರು ಬುಲ್ಸ್‌ ತಂಡ ಹರಾಜಿನಲ್ಲಿ ರೈಡರ್‌ ಸಚಿನ್‌ ಹೆಸರು ಬಂದ ಕೂಡಲೇ ಬಿಡ್‌ ಮಾಡಲು ಆರಂಭಿಸಿತು. ಆದರೆ, 81 ಲಕ್ಷ ರೂಪಾಯಿಗೆ ಪಾಟ್ನಾ ಪೈರೇಟ್ಸ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿತು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ 66 ಲಕ್ಷ ರೂಪಾಯಿಗೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಕೂಡಿಕೊಂಡರು.

 

ಈವರೆಗೂ ಖರೀದಿಯಾದ ಆಟಗಾರರು

- ಪವನ್‌ ಶೆರಾವತ್‌-ತಮಿಳ್‌ ತಲೈವಾಸ್‌-2.26 ಕೋಟಿ
- ವಿಕಾಸ್‌ ಖಂಡೋಲಾ-ಬೆಂಗಳೂರು ಬುಲ್ಸ್‌-1.70 ಕೋಟಿ
- ಫಜಲ್‌ ಅತ್ರಾಚಲಿ-ಪುಣೆರಿ ಪಲ್ಟನ್ಸ್‌-1.38 ಕೋಟಿ
- ಪ್ರದೀಪ್‌ ನರ್ವಾಲ್‌-ಯುಪಿ ಯೋಧಾ-90 ಲಕ್ಷ
- ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್-ಪುಣೆರಿ ಪಲ್ಟನ್ಸ್‌- 87 ಲಕ್ಷ
- ಸಚಿನ್‌-ಪಟನಾ ಪೈರೇಟ್ಸ್‌-81 ಲಕ್ಷ
- ಮಂಜಿತ್‌-ಹರ್ಯಾಣ ಸ್ಟೀಲರ್ಸ್‌-80 ಲಕ್ಷ
- ಅಜಿತ್‌ ಕುಮಾರ್‌-ಜೈಪುರ ಪಿಂಕ್‌ ಪ್ಯಾಂಥರ್ಸ್‌-66 ಲಕ್ಷ
- ಪರ್ವೇಶ್‌ ಬೈನ್ಸ್‌ವಾಲ್‌-ತೆಲುಗು ಟೈಟಾನ್ಸ್‌-62 ಲಕ್ಷ
- ಅಭಿಷೇಕ್‌ ಸಿಂಗ್‌-ತೆಲುಗು ಟೈಟಾನ್ಸ್‌-60 ಲಕ್ಷ
- ಸುರ್ಜೀತ್‌ ಸಿಂಗ್‌-ತೆಲುಗು ಟೈಟಾನ್ಸ್‌- 50 ಲಕ್ಷ
- ದೀಪಕ್‌ ನಿವಾಸ್‌ ಹೂಡಾ-ಬೆಂಗಾಲ್‌ ವಾರಿಯರ್ಸ್‌-43 ಲಕ್ಷ
- ರೋಹಿತ್ ಗುಲಿಯಾ-ಪಟನಾ ಪೈರೇಟ್ಸ್‌-30 ಲಕ್ಷ
- ಸಂದೀಪ್‌ ಧುಲ್‌-ದಬಾಂಗ್ ದೆಹಲಿ- 40 ಲಕ್ಷ 

click me!