ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಒಂದೇ ದಿನ ಭಾರತಕ್ಕೆ 4 ಪದಕ! ಕಾಲಿನ ಸ್ವಾಧೀನ ಕಳೆದುಕೊಂಡ್ರೂ ಕುಗ್ಗದ ಅವನಿ

By Asianetnews Kannada Stories  |  First Published Aug 31, 2024, 9:40 AM IST

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕೂಟದ ಎರಡನೇ ದಿನ ಭಾರತದ ಪ್ಯಾರಾ ಅಥ್ಲೀಟ್‌ಗಳು 4 ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಶೂಟಿಂಗ್‌ನಲ್ಲಿ ಅವನಿ ಲೇಖಾರ ಅಪರೂಪದ ದಾಖಲೆ ಬರೆದಿದ್ದಾರೆ


ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ 25+ ಪದಕಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಪ್ಯಾರಿಸ್‌ ವಿಮಾನವೇರಿದ್ದ ಭಾರತೀಯ ಅಥ್ಲೀಟ್‌ಗಳು ಶುಕ್ರವಾರ ಪದಕ ಖಾತೆ ತೆರೆದಿದ್ದಾರೆ. ಒಂದೇ ದಿನ ಭಾರತ ಚಿನ್ನ ಸೇರಿ ಒಟ್ಟು 4 ಪದಕಗಳನ್ನು ಮುಡಿಗೇರಿಸಿಕೊಂಡಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಂತೆಯೇ ಪ್ಯಾರಾ ಗೇಮ್ಸ್‌ನಲ್ಲೂ ಶೂಟರ್‌ಗಳೇ ಪ್ರಾಬಲ್ಯ ಸಾಧಿಸಿದ್ದು, ಮೂರು ಪದಕಗಳನ್ನು ಗೆದ್ದಿದ್ದಾರೆ. ಉಳಿದಂತೆ ಅಥ್ಲೆಟಿಕ್ಸ್‌ನಲ್ಲೂ ಒಂದು ಪದಕ ಲಭಿಸಿದೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದಿದ್ದ ಅವನಿ ಲೇಖರಾ ಈ ಬಾರಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಮಹಿಳೆಯರ 10 ಮೀ. ಏರ್‌ ರೈಫಲ್‌ (ಎಸ್‌ಎಚ್‌ 1) ವಿಭಾಗದಲ್ಲಿ 22 ವರ್ಷದ ಅವನಿ 249.7 ಅಂಕಗಳನ್ನು ಸಂಪಾದಿಸಿ ಅಗ್ರಸ್ಥಾನ ಪಡೆದರು. ಈ ಮೂಲಕ ಅವರು ಟೋಕಿಯೋದಲ್ಲಿ ನಿರ್ಮಿಸಿದ್ದ 249.6 ಅಂಕಗಳ ತಮ್ಮದೇ ಪ್ಯಾರಾಲಿಂಪಿಕ್ಸ್‌ ದಾಖಲೆಯನ್ನು ಅಳಿಸಿ ಹಾಕಿದರು.

Tap to resize

Latest Videos

undefined

ಇದೇ ಸ್ಪರ್ಧೆಯಲ್ಲಿ 37 ವರ್ಷದ ಮೋನಾ ಅಗರ್‌ವಾಲ್‌ಗೆ ಕಂಚಿನ ಪದಕ ಲಭಿಸಿತು. ಅವರು 228.7 ಅಂಕಗಳನ್ನು ಪಡೆದು ಪ್ಯಾರಾಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ಭಾರತ ಇದೇ ಮೊದಲ ಬಾರಿ ಪ್ಯಾರಾಲಿಂಪಿಕ್ಸ್‌ ಶೂಟಿಂಗ್‌ನ ಒಂದೇ ವಿಭಾಗದಲ್ಲಿ 2 ಪದಕ ಗೆದ್ದ ಸಾಧನೆ ಮಾಡಿತು. ದ.ಕೊರಿಯಾದ ಲೀ ಯುನ್‌ರಿ 246.8 ಅಂಕಗಳೊಂದಿಗೆ ಬೆಳ್ಳಿ ಪದಕ ಜಯಿಸಿದರು.

ಅಪಘಾತದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡ್ರೂ ಕುಗ್ಗದ ಅವನಿ

ರಾಜಸ್ಥಾನದ 22 ವರ್ಷದ ಅವನಿ ಲೇಖನಾ ತಮ್ಮ 11ನೇ ವಯಸ್ಸಿನಲ್ಲಿ ಜೈಪುರ-ಧೋಲ್ಪುರ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು. ಇದರಿಂದಾಗಿ ಸೊಂಟದ ಕೆಳ ಭಾಗದಲ್ಲಿ ಅವರು ಸ್ವಾಧೀನ ಕಳೆದುಕೊಳ್ಳುವಂತಾಯಿತು. ಅಪಘಾತದಿಂದಾಗಿ ಕುಗ್ಗಿ ಹೋಗಿದ್ದ ಅವರು ಬಳಿಕ ಪುಸ್ತಕ ಓದಲು ಆರಂಭಿಸಿದರು. ಅಪಘಾತದ 3 ವರ್ಷ ಬಳಿಕ ಶೂಟಿಂಗ್‌ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಒಂದೇ ವರ್ಷದಲ್ಲಿ ರಾಷ್ಟ್ರೀಯ ಪ್ಯಾರಾ ಪದಕ ಗೆದ್ದ ಅವರು ಬಳಿಕ ಹಿಂದಿರುಗಿ ನೋಡಲಿಲ್ಲ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ತಲಾ 1 ಚಿನ್ನ, ಕಂಚು, ವಿಶ್ವಕಪ್‌ನಲ್ಲಿ 2 ಚಿನ್ನ, 1 ಬೆಳ್ಳಿ, ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಬಾರಿ ಕ್ರೀಡಾಕೂಟದ 5 ತಿಂಗಳಿಗೂ ಮುನ್ನ ಪಿತ್ತಕೋಶದ ಸ್ಟೋನ್‌ನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Maharaja Trophy 2024 : ಗುಲ್ಬರ್ಗಾ ಮಣಿಸಿ 2ನೇ ಬಾರಿ ಬೆಂಗಳೂರು ಬ್ಲಾಸ್ಟರ್ಸ್‌ ಫೈನಲ್‌ಗೆ ಲಗ್ಗೆ

ಹೆಣ್ಣಾಗಿ ಹುಟ್ಟಿದ್ದಕ್ಕೆ ಟೀಕೆ, 9ನೇ ತಿಂಗಳಲ್ಲೇ ಪೋಲಿಯೋ ಎಫೆಕ್ಟ್‌

ರಾಜಸ್ಥಾನದ ಮೋನಾ ತಮ್ಮ 9ನೇ ತಿಂಗಳಿನಲ್ಲೇ ಪೋಲಿಯೋಗೆ ತುತ್ತಾಗಿದ್ದರು. ಪೋಷಕರ 3ನೇ ಹೆಣ್ಣು ಮಗು ಹಾಗೂ ಪೋಲಿಯೋ ಕಾರಣಕ್ಕೆ ಕುಟುಂಬಸ್ಥರು, ಸಂಬಂಧಿಕರಿಂದಲೇ ಮೋನಾ ಟೀಕೆ, ಅವಮಾನಗಳನ್ನು ಎದುರಿಸಿದ್ದರು. ಆದರೆ ಟೀಕೆಗಳನ್ನು ಮೋನಾ ಮೆಟ್ಟಿನಿಂತರು. ಕ್ರೀಡೆಯಲ್ಲಿ ಬದುಕು ಕಟ್ಟಿಕೊಳ್ಳುವ ಪಣ ತೊಟ್ಟರು. ಆರಂಭದಲ್ಲಿ ಶಾಟ್‌ಪುಟ್‌, ಡಿಸ್ಕಸ್‌, ಜಾವೆಲಿನ್‌ ಎಸೆತದಲ್ಲಿ ತೊಡಗಿಸಿಕೊಂಡರು. ಬಳಿಕ ವೇಟ್‌ಲಿಫ್ಟಿಂಗ್‌ಗೆ ಬಂದ ಅವರು ತಮ್ಮ ವಿವಾಹದ ಬಳಿಕ 2017ರಲ್ಲಿ ರಾಜಸ್ಥಾನ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೆದ್ದರು. 2021ರಲ್ಲಿ ಶೂಟಿಂಗ್‌ನತ್ತ ಒಲವು ತೋರಿದರು. ಆರಂಭದಲ್ಲಿ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಅವರು, ಬಳಿಕ ರೈಫಲ್‌ನತ್ತ ಗಮನ ಹರಿಸಿದರು. ಆರ್ಥಿಕ ಸಂಕಷ್ಟದ ಹೊರತಾಗಿಯೂ ತಮ್ಮ ಪತಿಯ ಸಹಕಾರದಿಂದಾಗಿ 2022ರಲ್ಲಿ ₹4 ಲಕ್ಷ ನೀಡಿ ರೈಫಲ್‌ ಖರೀದಿಸಿದರು. 37 ವರ್ಷದ ಮೋನಾಗೆ ಈಗ ಇಬ್ಬರು ಮಕ್ಕಳಿದ್ದಾರೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌: ಚಿನ್ನದ ಪದಕ ಬೇಟೆಯಾಡಿದ ಅವನಿ ಲೇಖರಾ, ಮೋನಾ ಅಗರ್‌ವಾಲ್‌ಗೆ ಕಂಚಿನ ಸಿಂಗಾರ

ಎಸ್‌ಎಚ್‌ 1 ವಿಭಾಗ ಎಂದರೇನು?

ಅವನಿ ಹಾಗೂ ಮೋನಾ ಎಸ್‌ಎಸ್‌1 ವಿಭಾಗದಲ್ಲಿ ಸ್ಪರ್ಧಿಸಿ ಪದಕ ಗೆದ್ದಿದ್ದಾರೆ. ಎಸ್‌ಎಚ್‌ 1 ಅಂದರೆ ತೋಳು, ಸೊಂಟ ಹಾಗೂ ಕಾಲಿನಲ್ಲಿ ಚಲನೆಗಳಲ್ಲದ ಅಥವಾ ಯಾವುದೇ ಕೈಕಾಲುಗಳನ್ನು ಹೊಂದಿರದ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ.

click me!