
ಪ್ಯಾರಿಸ್: 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನ ಮೊದಲ ದಿನ ಭಾರತಕ್ಕೆ ಪದಕ ಲಭಿಸದಿದ್ದರೂ, ಕೆಲ ಅಥ್ಲೀಟ್‌ಗಳು ತಮ್ಮ ಅಭೂತಪೂರ್ವ ಪ್ರದರ್ಶನದ ಮೂಲಕ ಪದಕ ಭರವಸೆ ಮೂಡಿಸಿದ್ದಾರೆ. ಎರಡು ಕೈಗಳಿಲ್ಲದಿದ್ದರೂ ಆರ್ಚರಿಯಲ್ಲಿ ಸ್ಪರ್ಧಿಸುತ್ತಿರುವ ಶೀತಲ್ ದೇವಿ ಗುರುವಾರ ರ್‍ಯಾಂಕಿಂಗ್ ಸುತ್ತಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇತರ ಸ್ಪರ್ಧೆಗಳಲ್ಲಿ ಭಾರತ ಮಿಶ್ರ ಫಲ ಅನುಭವಿಸಿದೆ.
17 ವರ್ಷದ ಶೀತಲ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ರ್‍ಯಾಂಕಿಂಗ್ ಸುತ್ತಿನಲ್ಲಿ 720ರ ಪೈಕಿ 703 ಅಂಕ ಗಳಿಸಿದರೆ, ಟರ್ಕಿಯ ಒಜ್ಜುರ್ ಗಿರ್ಡಿ ಕ್ಯೂರ್ 704 ಅಂಕ ಗಳಿಸಿದರು. ಇವರೆಡೂ ಪ್ಯಾರಾಲಿಂಪಿಕ್ಸ್ ಹಾಗೂ ವಿಶ್ವ ದಾಖಲೆ ಎನಿಸಿಕೊಂಡಿತು. ಇತ್ತೀಚೆಗಷ್ಟೇ ಗ್ರೇಟ್ ಬ್ರಿಟನ್‌ನ ಪೀಟರ್ಸ್‌ನ ಪೈನ್ 698 ಅಂಕಗಳನ್ನು ಶೀತಲ್ ದೇವಿ ಗಳಿಸಿದ್ದು ವಿಶ್ವ ದಾಖಲೆಯಾಗಿತ್ತು.
2021 ರಲ್ಲಿ ಅವನಿ, ಮನೀಶ್‌ಗೆ ಪದಕ ನಿರೀಕ್ಷೆ ಟೋಕಿಯೋದಲ್ಲಿ ಬ್ರಿಟನ್‌ನ ಸ್ಟೆಟನ್ ಜೆಸ್ಸಿಕಾ 694 ಅಂಕಗಳಿಸಿದ್ದು ಪ್ಯಾರಾಲಿಂಪಿಕ್ಸ್ ದಾಖಲೆ ಎನಿಸಿಕೊಂಡಿತ್ತು. ಸದ್ಯ ಎರಡೂ ದಾಖಲೆ ಪತನಗೊಂಡಿದೆ. ರ್‍ಯಾಂಕಿಂಗ್ ಸುತ್ತಿನಲ್ಲಿ ಅಗ್ರ 2 ಸ್ಥಾನ ಗಳಿಸಿದ ಟರ್ಕಿನ ಒಜ್ಜುರ್, 2ನೇ ಸ್ಥಾನ ಗಳಿಸಿದ ಶೀತಲ್ ಅಂತಿಮ 16ರ ಘಟ್ಟಕ್ಕೆ ನೇರ ಪ್ರವೇಶ ಪಡೆದರು.
ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಒಟ್ಟು ಸಂಪತ್ತು ಎಷ್ಟು? ಅಮಿತ್ ಶಾ ಪುತ್ರನ ಎಜುಕೇಷನ್ ಏನು?
ಕಳೆದ ವರ್ಷ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನ, 1 ಬೆಳ್ಳಿ ಗೆದ್ದಿದ್ದ ಶೀತಲ್ ದೇವಿ ಈ ಬಾರಿ ಚೊಚ್ಚಲ ಪ್ಯಾರಾಲಿಂಪಿಕ್ಸ್ ಪದಕದ ನಿರೀಕ್ಷೆಯಲ್ಲಿದ್ದಾರೆ. ಶನಿವಾರ ಅವರು ಅಂತಿಮ 16ರ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.
ಭಾರತ ಶುಕ್ರವಾರ ಪದಕ ಖಾತೆ ತೆರೆಯುವ ಕಾತರದಲ್ಲಿದೆ. ಕಳೆದ ಒಲಿಂಪಿಕ್ಸ್‌ನ ಪದಕ ವಿಜೇತ ಶೂಟರ್ ಅವನಿ ಲೇಖರಾ ಮಹಿಳೆಯರ 10 ಮೀ. ಏರ್ ರೈಫಲ್‌ನಲ್ಲಿ, ಮನೀಶ್ ನರ್ವಾಲ್ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಶುಕ್ರವಾರವೇ ಪದಕ ಸ್ಪರ್ಧೆ ನಡೆಯಲಿವೆ. ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಸಾಕ್ಷಿ, ಕರಮ್ ಜ್ಯೋತಿ, ಮಹಿಳೆಯರ 100 ಮೀ. ರೇಸ್‌ನಲ್ಲಿ ಪ್ರೀತಿ ಪಾಲ್, ಪುರುಷರ ಶಾಟ್‌ಪುಟ್‌ನಲ್ಲಿ ಮನು ಕೂಡಾ ಪದಕ ಭರವಸೆ ಮೂಡಿಸಿದ್ದಾರೆ.
ಬ್ಯಾಡ್ಮಿಂಟನ್: ಸುಹಾಸ್ ಸೇರಿ 8 ಸಿಂಗಲ್ಸ್ ಆಟಗಾರರ ಜಯ
ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಸಿಕ್ಕಿದೆ. ಸಿಂಗಲ್ಸ್‌ನಲ್ಲಿ ಒಟ್ಟು 8 ಮಂದಿ ಗೆದ್ದಿದ್ದಾರೆ. ಪುರುಷರ ಸಿಂಗ ಅ ಗುಂಪು ಹಂತದ ಮೊದಲ ಹಂತದ ಪಂದ್ಯಗಳಲ್ಲಿ ಸುಹಾಸ್ ಯತಿರಾಜ್, ಸುಕಾಂತ್ ಕದಂ, ಕರುಣ್ ಗೆಲುವು ಸಾಧಿಸಿದರು. ಟೋಕಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ವಿಜೇತ ಐಎಎಸ್ ಅಧಿಕಾರಿ ಸುಹಾದ್, ಇಂಡೋನೇಷ್ಯಾದ ಹಿಕೃತ್ ರಮಾನಿ ವಿರುದ್ಧ 21-17, 21-5ರಲ್ಲಿ ಜಯಭೇರಿ ಬಾರಿಸಿದರು. ಸುಕಾಂತ್ ಮಲೇಷ್ಯಾದ ಮೊಹಮ್ಮದ್ ಅಮೀನ್ ವಿರುದ್ಧ ಗೆದ್ದರೆ, ತರುಣ್ ಬ್ರೆಜಿಲ್‌ನ ಇಲಿವರಿಯಾ ರೊಜಾರಿಯೊ ವಿರುದ್ಧ ಗೆಲುವು ತಮ್ಮದಾಗಿಸಿಕೊಂಡರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಮೊದಲ ದಿನವೇ ಭಾರತಕ್ಕೆ ಸಿಗುತ್ತಾ ಪದಕ?
ಆದರೆ ಮಹಿಳಾ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಮಾನಸಿ ಮಂದೀಪ್ ಸೋಲನುಭವಿಸಿದರು. ಇನ್ನು, ಮಿಶ್ರ ಡಬಲ್ಸ್‌ನಲ್ಲಿ ಭಾರತ ದವರೇ ಆದ ಸುಹಾಸ್ -ಪಾಲಕ್ ಕೊಹ್ಲಿ ವಿರುದ್ಧ ನಿತೀಶ್ ಕುಮಾರ್ - ತುಳಸಿಮತಿ ಮುರುಗೇಶನ್ ಜೋಡಿ ಗೆಲುವು ಸಾಧಿಸಿತು. ಶಿವರಾಜನ್ ನಿತ್ಯಾ ಸೋಲನುಭವಿಸಿದರು.
ಟೆಕ್ವಾಂಡೋ, ಸೈಕ್ಲಿಂಗ್‌ನಲ್ಲಿ ಭಾರತಕ್ಕೆ ಕೈತಪ್ಪಿದ ಪದಕ
ಕ್ರೀಡಾಕೂಟದ ಮೊದಲ ದಿನವೇ ಪದಕ ಗೆಲ್ಲುವ ಅವಕಾಶವನ್ನು ಭಾರತ ಕಳೆದುಕೊಂಡಿತು. ಗುರುವಾರ ಮಹಿಳೆ ಜ್ಯೋತಿ ಕೆ 44-47 ಕೆ.ಜಿ. ವಿಭಾಗದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಅರುಣಾ ಸಿಂಗ್ ಅಂತಿಮ 16ರ ಸುತ್ತಿನಲ್ಲಿ ಸೋತು ಹೊರಬಿದ್ದರು. ಪಂದ್ಯ ದಲ್ಲಿ ಅವರು ಟರ್ಕಿಯ ನರ್ಕಿಹಾನ್ ಎಕಿದ್ದೀ ವಿರುದ್ಧ 0-19ರಲ್ಲಿ ಪರಾ ಭವಗೊಂಡರು.
ಇನ್ನು, ಸೈಕ್ಲಿಂಗ್‌ನ ಮಹಿಳೆಯರ ಸಿ1 -3 3000 ಮೀ. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಜ್ಯೋತಿ ಗಡೇರಿಯಾ ಅರ್ಹತಾ ಸುತ್ತಿನಲ್ಲಿ 10ನೇ ಸ್ಥಾನಕ್ಕೆ ತೃಪ್ತಿಪ ಟ್ಟುಕೊಂಡರು. ಅವರು 4 ನಿಮಿಷ 53.929 ಸೆಕೆಂಡ್ ಗಳಲ್ಲಿ ಕ್ರಮಿಸಿದರು. ಈ ಎರಡೂ ವಿಭಾಗಗಳಲ್ಲಿ ಭಾರತ ಈ ವರೆಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿಲ್ಲ. ಈ ಬಾರಿಯೂ ಪದಕ ಬರ ನೀಗಿಸುವ ಕನಸು ಕೈಗೂಡಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.