ಪ್ಯಾರಿಸ್ ಒಲಿಂಪಿಕ್ಸ್‌ ಸಮಾರೋಪಕ್ಕೆ ಮನು ಭಾಕರ್ ಭಾರತದ ಧ್ವಜಧಾರಿ

By Kannadaprabha News  |  First Published Aug 6, 2024, 1:30 PM IST

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಪದಕ ಬೇಟೆಯಾಡಿರುವ ಮನು ಭಾಕರ್, ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಕಂಚಿನ ಪದಕ ಗೆದ್ದಿರುವ ತಾರಾ ಶೂಟರ್ ಮನು ಭಾಕರ್ ಅವರು ಭಾನುವಾರ ನಡೆಯಲಿರುವ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿರಲಿದ್ದಾರೆ. 22 ವರ್ಷದ ಮನು 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಸರಬೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಗೆದ್ದಿದ್ದರು. 

ಸದ್ಯ ಭಾರತ ಒಲಿಂಪಿಕ್ ಸಂಸ್ಥೆಯು ಮಹಿಳಾ ಧ್ವಜಧಾರಿಯನ್ನು ಮಾತ್ರ ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಮತ್ತೋರ್ವ ಪುರುಷ ಧ್ವಜಧಾರಿಯ ಹೆಸರು ಘೋಷಿಸುವ ನಿರೀಕ್ಷೆಯಲ್ಲಿದೆ. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ತಾರಾ ಶಟ್ಲರ್ ಪಿ.ವಿ.ಸಿಂಧು ಹಾಗೂ ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಭಾರತದ ಧ್ವಜ ಹಿಡಿದಿದ್ದರು.

Tap to resize

Latest Videos

undefined

ಪ್ಯಾರಿಸ್ ಒಲಿಂಪಿಕ್ಸ್‌ ಹಾಕಿ: ಇಂದು ಭಾರತ vs ಜರ್ಮನಿ ಸೆಮಿಫೈನಲ್ ಫೈಟ್

ಅವಿನಾಶ್ 3000 ಮೀ. ಸ್ಟೀಪಲ್‌ಚೇಸ್ ಫೈನಲ್‌ಗೆ

ಪ್ಯಾರಿಸ್: ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನ ಪುರುಷರು 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಭಾರತದ ತಾರಾ ಅಥೀಟ್ ಅವಿನಾಶ್ ಸಾಬೈ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಅಥೀಟ್ ಎನಿಸಿಕೊಂಡಿದ್ದಾರೆ. 

ಸೋಮವಾರ ನಡೆದ ಸ್ಪರ್ಧೆಯಲ್ಲಿ ಅವಿನಾಶ್ ಹೀಟ್ಸ್‌ನಲ್ಲಿ 8 ನಿಮಿಷ 15.43 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 5ನೇ ಸ್ಥಾನ ಪಡೆದರು. ಎಲ್ಲಾ ಹೀಟ್ಸ್‌ಗಳ ಅಗ್ರ -5 ಅಫೀಟ್‌ಗಳು ಫೈನಲ್‌ಗೇರಿದರು. ಇದೇ ವೇಳೆ ಮಹಿಳೆಯರ 300 ಮೀ. ಓಟದಲ್ಲಿ ಕಿರಣ್ ಪಾಹಲ್ ರಿಪಿಕೇಶ್‌ ಸುತ್ತಿಗೇರಿದ್ದಾರೆ.

0.005 ಸೆಕೆಂಡ್‌ ಅಂತರದಲ್ಲಿ 100 ಮೀ. ಓಟ ಗೆದ್ದ ಲೈಲ್ಸ್‌! ಫೋಟೋ ಫಿನಿಶ್‌ ಮೂಲಕ ಫಲಿತಾಂಶ ನಿರ್ಧಾರ..!

ಟಿಟಿ: ಭಾರತ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಒಲಿಂಪಿಕ್ಸ್‌ನ ಮಹಿಳೆಯರ ತಂಡ ವಿಭಾಗದ ಟೇಬಲ್ ಟೆನಿಸ್‌ನಲ್ಲಿ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಸೋಮವಾರ ರೊಮಾನಿಯಾ ವಿರುದ್ಧದ ಪ್ರಿ ಕ್ವಾರ್ಟರ್ ಹಣಾಹಣಿಯಲ್ಲಿ ಭಾರತಕ್ಕೆ 3-2 ಗೇಮ್‌ಗಳಲ್ಲಿ ಗೆಲುವು ಲಭಿಸಿತು. 

ಶ್ರೀಜಾ-ಕರ್ನಾಟಕದ ಅರ್ಚನಾ ಕಾಮತ್ ಮೊದಲ ಡಬಲ್ಸ್‌ನಲ್ಲಿ ಗೆದ್ದರೆ, ಮನಿಕಾ ಬಾತ್ರಾ ಸಿಂಗಲ್ಸ್‌ನಲ್ಲಿ ಜಯಗಳಿಸಿದರು. ನಂತರದ 2 ಸಿಂಗಲ್ಸ್ ಪಂದ್ಯಗ ಳಲ್ಲಿ ಕ್ರಮವಾಗಿ ಶ್ರೀಜಾ, ಅರ್ಚನಾ ಸೋತರು. ನಿರ್ಣಾಯಕ ಕೊನೆ ಸಿಂಗಲ್ ಪಂದ್ಯದಲ್ಲಿ ಮನಿಕಾ ಗೆದ್ದು ಭಾರತವನ್ನು ಅಂತಿಮ 8ರ ಘಟ್ಟಕ್ಕೇರಿಸಿದರು.

click me!